ದರ್ಶನ್ ಗೆ ವಿಐಪಿ ಟ್ರೀಟ್ ಮೆಂಟ್; ಇದು ಸಾರ್ವಜನಿಕ ಹಿತಾಸಕ್ತಿ ವಿಷಯವಲ್ಲ ಎಂದ ಸಚಿವ ಸತೀಶ್‌ ಜಾರಕಿಹೊಳಿ 

Ravi Talawar
ದರ್ಶನ್ ಗೆ ವಿಐಪಿ ಟ್ರೀಟ್ ಮೆಂಟ್; ಇದು ಸಾರ್ವಜನಿಕ ಹಿತಾಸಕ್ತಿ ವಿಷಯವಲ್ಲ ಎಂದ ಸಚಿವ ಸತೀಶ್‌ ಜಾರಕಿಹೊಳಿ 
WhatsApp Group Join Now
Telegram Group Join Now
ಬೆಳಗಾವಿ: ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ನಟ ದರ್ಶನ್ ಜೈಲಿನೊಳಗೆ ವಿಐಪಿ ಟ್ರೀಟ್ ಮೆಂಟ್ ಪಡೆಯುತ್ತಿರುವ ವಿಷಯದ ಬಗ್ಗೆ ಗೃಹ ಸಚಿವರು ಉತ್ತರ ನೀಡುತ್ತಾರೆ. ಎಲ್ಲದಕ್ಕೂ ನಾವು ಉತ್ತರ ನೀಡುವುದಕ್ಕೆ ಆಗಲ್ಲ, ಅದು ಸಾರ್ವಜನಿಕ ಹಿತಾಸಕ್ತಿ ವಿಷಯವೂ ಅಲ್ಲ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್‌ ಜಾರಕಿಹೊಳಿ ಅವರು ಹೇಳಿದರು.
ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಪ್ರಕರಣದಲ್ಲಿಈಗಾಗಲೇ  ಏಳು ಅಧಿಕಾರಿಗಳನ್ನು ಸಸ್ಪೆಂಡ್ ಮಾಡಲಾಗಿದೆ. ಈ ರೀತಿಯ ಘಟನೆ ನಡೆಯಬಾರದು ಎಂದರು.
ಕಾಂಗ್ರೆಸ್ ಪಕ್ಷದಲ್ಲೇ ಸಿಎಂ‌ ಸಿದ್ದರಾಮಯ್ಯನವರನ್ನು ಕಟ್ಟಿ ಹಾಕುತ್ತಿದ್ದಾರಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಸಚಿವರು, ಕಾಂಗ್ರೆಸ್ ಪಕ್ಷದಲ್ಲಿ ಸಿಎಂ‌ ಸಿದ್ದರಾಮಯ್ಯ ಅವರನ್ನು ಕಟ್ಟಿ ಹಾಕುವ ಕೆಲಸ ಯಾರು ಮಾಡುತ್ತಿಲ್ಲ. ಶಾಸಕರು, ಸಚಿವರು, ಹೈಕಮಾಂಡ್‌ ಕೂಡ ಸಿಎಂ ಪರವಾಗಿ ನಿಂತಿದ್ದಾರೆ ಎಂದು ಸ್ಪಷ್ಟ ಪಡಿಸಿದರು.
ಸಿಎಂ ಬೆನ್ನಿಗೆ ಜಾರಕೊಹೊಳಿ ಬ್ರದರ್ಸ್ ನಿಂತಿದ್ದಾರಾ ಎಂಬ ಪ್ರಶ್ನೆ ಉತ್ತರಿಸಿ, ಬಹಳ ದಿನಗಳಿಂದ ಗೋಕಾಕ ಮತ್ತು ಮೂಡಲಗಿಯಲ್ಲಿ ಕೆಲ ಕಾರ್ಯಕ್ರಮಗಳಿಗೆ ಸಿಎಂ ಸಿದ್ದರಾಮಯ್ಯನವರು ಬರಬೇಕಿತ್ತು. ಅದಕ್ಕಾಗಿ ಬರುತ್ತಿದ್ದಾರೆ ಅಷ್ಟೇ. ಮುಡಾ ಹಗರಣಕ್ಕೂ ಮತ್ತು ಗೋಕಾಕ, ಮೂಡಲಗಿಗೆ ಬರುವುದಕ್ಕೆ ಏನು ಸಂಬಂಧವಿಲ್ಲ ಎಂದರು.
WhatsApp Group Join Now
Telegram Group Join Now
Share This Article