ಎಚ್‌ಡಿಕೆ ವಿರುದ್ದ ಸಚಿವ ಸತೀಶ್‌ ಜಾರಕಿಹೊಳಿ ವಾಗ್ದಾಳಿ

Ravi Talawar
ಎಚ್‌ಡಿಕೆ ವಿರುದ್ದ ಸಚಿವ ಸತೀಶ್‌ ಜಾರಕಿಹೊಳಿ ವಾಗ್ದಾಳಿ
WhatsApp Group Join Now
Telegram Group Join Now
ಬೆಂಗಳೂರು,14: ಪೆನ್ ಡ್ರೈವ್  ಕುರಿತು ಮಾಜಿ ಮುಖ್ಯಮಂತ್ರಿ  ಎಚ್.‌ ಡಿ. ಕುಮಾರಸ್ವಾಮಿ ಅವರ ಬಳಿ ಸಾಕ್ಷಿಗಳಿದ್ದರೆ ಅದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ನೀಡಲಿ. ಇಲ್ಲವಾದರೆ ತನಿಖೆ ನಡೆಸಲು ಸಾಧ್ಯವಿಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಎಚ್‌ ಡಿಕೆ ವಿರುದ್ದ ವಾಗ್ದಾಳಿ ನಡೆಸಿದರು.
 ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪೆನ್ ಡ್ರೈವ್  ಕುರಿತು ಮಾಜಿ ಮುಖ್ಯಮಂತ್ರಿ  ಎಚ್.‌ ಡಿ. ಕುಮಾರಸ್ವಾಮಿ ಅವರು ಇಲ್ಲಸಲ್ಲದ್ದನ್ನು ಆರೋಪ ಮಾಡುತ್ತಿದ್ದಾರೆ. ಇದರ ಕುರಿತು ಸಾಕ್ಷಿ ಇದ್ದರೆ ನಮ್ಮ ಸಿಎಂಗೆ ನೀಡಲಿ. ಸಿಎಂ ಅವರು ಎಚ್ಡಿಕೆಗೆ ಬಹಳ ಪರಿಚಯವಿದ್ದವರೇ ಹೀಗಾಗಿ ಪೆನ್ ಡ್ರೈವ್  ಕುರಿತು ಯಾವುದೇ ಸಾಕ್ಷಿ ಇದ್ದರೆ ನೀಡಲಿ ಎಂದರು.
ಸಾಕ್ಷಿ ನೀಡದೇ ತನಿಖೆ ನಡೆಸಿ ಎಂದರೆ ಹೇಗೆ.?  ಅದೇ ಏನೋ ಅಂತಾರಲ್ಲ. ಕೆರೆಯಲ್ಲಿ ಎಮ್ಮಿ ಮುಳುಗಿಸಿ ವ್ಯಾಪಾರ ಮಾಡಿದ್ದರಂತೆ ಎಂಬಂತೆ ಎಚ್ಡಿಕೆ ಮಾತಿನ ದಾಟಿ ಇದೇ ರೀತಿ ಆಗಿದೆ. ಆದರಿಂದ ಸಮರ್ಪಕವಾಗಿ ಪ್ರಕರಣದ ತನಿಖೆ ನಡೆಸಲು ಅವರ ಬಳಿರುವ  ಸಾಕ್ಷಿಗಳನ್ನು ನೀಡಿದರೆ ಸಂಪೂರ್ಣವಾಗಿ ನಿಸ್ಪಕ್ಷವಾಗಿ ತನಿಖೆ ನಡೆಸಲಾಗುವುದು ಎಂದು ಚಾಟಿ ಬೀಸಿದರು.
ಪರಮೇಶ್ವರ್ ಭೇಟಿ ವಿಶೇಷತೆ ಏನು ಇಲ್ಲ. ಚುನಾವಣೆ ವಿಚಾರವಾಗಿ ಮಾತುಕತೆ ಮಾಡಿದ್ದೇವೆ. ಎಷ್ಟು ಸೀಟ್ ಗೆಲ್ಲುತ್ತೇವೆ ಎಂಬ ಚರ್ಚೆ ಮಾಡಿದ್ದೇವೆ. ಡಿಸಿಎಂ ಬಗ್ಗೆ ಚುನಾವಣೆ ವೇಳೆ ಕೂಗು ಇತ್ತು. ಈಗ ಚುನಾವಣೆ ಮುಗಿದಿದೆ. ಚುನಾವಣೆಗೆ ಅನುಕೂಲ ಆಗಲಿ ಅಂತ ಕೂಗು ‌ಇತ್ತು. ಈಗ ಡಿಸಿಎಂ ಕೂಗು ಇಲ್ಲ. ಸರ್ಕಾರ ಬಿಳಿಸಲು ಸುಮ್ಮನೆ ಹೇಳುತ್ತಾರೆ. ಸರ್ಕಾರ ಏನು ಬಿದ್ದು ಹೋಯ್ತಾ. ಸುಮ್ಮನೆ ಸರ್ಕಾರ ಬಿಳುತ್ತೆ‌ಅಂತಾರೆ. ಶಾಸಕರ ಅಸಮಧಾನ ಇದ್ದೆ ಇರುತ್ತೆ. ಆಡಳಿತ ಪಕ್ಷ ಅಂದ ಮೇಲೆ ಅಸಮಧಾನ ಸಹಜ ಎಂದರು.
WhatsApp Group Join Now
Telegram Group Join Now
Share This Article