ಬೆಳಗಾವಿ: ಆಪರೇಷನ್ ಸಿಂದೂರ ಬಗ್ಗೆ ಶಾಸಕ ಕೊತ್ತೂರು ಮಂಜುನಾಥ್ ಹೇಳಿಕೆ ನೀಡಿದ್ದು ಅವರ ವೈಯಕ್ತಿಕ. ಅದು ಸರ್ಕಾರದ ಹೇಳಿಕೆ ಅಲ್ಲ. ಸೈನಿಕರ ಬಗ್ಗೆ ಎಲ್ಲರೂ ವಿಶ್ವಾಸ ಇಡಬೇಕೆಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕೊಹೊಳಿ ಅವರು ಹೇಳಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದೇಶದ ವಿಚಾರ ಬಂದಾಗ ನಾವೆಲ್ಲರೂ ಒಂದಾಗಿರಬೇಕು. ಒಂದಾಗಿದ್ದೇವೆ ಎಂದ ಅವರು, ಶಾಸಕ ಕೊತ್ತೂರು ಮಂಜುನಾಥ್ ಹೇಳಿಕೆ ಅವರ ವೈಯಕ್ತಿಕ. ಅದು ಸರ್ಕಾರದ ಹೇಳಿಕೆ ಅಲ್ಲ ಎಂದು ತಿಳಿಸಿದರು.
ಸಂಪುಟ ವಿಸ್ತರಣೆ ಹೈಕಮಾಂಡ್ ಗೆ ಬಿಟ್ಟ ವಿಚಾರ. ಸಂಪುಟ ವಿಸ್ತರಣೆ ಆದರೆ ಒಳ್ಳೆಯದು, ಹಲವು ಶಾಸಕರಿಗೆ ಮಂತ್ರಿ ಆಗಬೇಕೆಂಬ ಆಸೆ ಇದ್ದೆ ಇರುತ್ತದೆ. ಸಂಪುಟ ವಿಸ್ತರಣೆ ಆದರೆ ಎಲ್ಲರಿಗೂ ಅವಕಾಶ ದೊರೆಯಲಿದೆ. ಇನ್ನು ಸಚಿವರ ಕಾರ್ಯ ವೈಖರಿಗಳ ಬಗ್ಗೆ ವಿಮರ್ಶವಾಗಿಲ್ಲ. ಸಂಪುಟ ವಿಸ್ತರಣೆ ಆದರೆ ಹೊಸಬರಿಗೂ ಅವಕಾಶ ದೊರೆಯಲಿದೆ ಎಂದರು.
ಬಿಜೆಪಿಯವರಿಗೆ ಸಾಧನಾ ಸಮಾವೇಶ ಬಗ್ಗೆ ಟೀಕಿಸು ನೈತಿಕ ಹಕ್ಕಿಲ್ಲ. ಗ್ಯಾರಂಟಿಗಳು ಇನ್ನು ಮೂರು ವರ್ಷ ಮುಂದುವರೆಯುತ್ತವೆ. ಸರ್ಕಾರ ರಚನೆಯಾಗಿ ಎರಡು ವರ್ಷ ಪೂರ್ಣಗೊಳ್ಳುತ್ತಿದ್ದು, ಸಾಧನಾ ಸಮಾವೇಶ ಮಾಡುತ್ತಿದ್ದು, ನಮ್ಮ ಸಾಧನೆಗಳನ್ನು ಜನತೆಗೆ ತಿಳಿಸುವ ಕಾರ್ಯ ಮಾಡುತ್ತೇವೆ. ಬಿಜೆಪಿಯವರು ಬೇಕಿದ್ದರೆ ಅವರ ಸಾಧನೆಗಳನ್ನು ಜನತೆಗೆ ತಿಳಿಸಲು ಸಮಾವೇಶ ಮಾಡಲೇಂದು ತಿಳಿಸಿದರು.