ಕಡೋಲಿಯ ದುರದುಂಡೀಶ್ವರ ಮಠದಲ್ಲಿ ಜಾತ್ರಾ ಮಹೋತ್ಸವ-ಕುಸ್ತಿ ಪಂದ್ಯಾವಳಿಗೆ ಚಾಲನೆ ನೀಡಿದ ಸಚಿವರು
ಯಮಕಮರಡಿ: ಕ್ಷೇತ್ರದ ಜನರ ಆಶೀರ್ವಾದದಿಂದ 15 ವರ್ಷಗಳ ಕಾಲ ಕ್ಷೇತ್ರದ ಅಭಿವೃದ್ಧಿಗಾಗಿ ನಿರಂತರ ಶ್ರಮಿಸಲಾಗುತ್ತಿದೆ. ಮುಂದಿನ ದಿನಗಳ ಶ್ರೀಗಳ, ಜನರ ಸಹಕಾರದಿಂದ ಹೆಚ್ವಿನ ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಯಮಕಮರಡಿ ಕ್ಷೇತ್ರದ ಕಡೋಲಿಯಲ್ಲಿ ಶ್ರೀ ದುರದುಂಡೀಶ್ವರ ಮಠದಲ್ಲಿ ಮಹಾಶಿವರಾತ್ರಿ ನಿಮಿತ್ತವಾಗಿ ಆಯೋಜಿಸಲಾದ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿ, 1 ಕೋಟಿ 10 ಲಕ್ಷ ರೂ. ವೆಚ್ಚದಲ್ಲಿ ಮಠದ ಜೀರ್ಣೋದ್ಧಾರ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಕ್ಷೇತ್ರದ ಅಭಿವೃದ್ಧಿಯೊಂದೆ ನಮ್ಮ ಗುರಿ: ಕಡೋಲಿ ಗ್ರಾಪಂ ಸೇರಿದಂತೆ ಈ ಭಾಗದ ಜನತೆಯ ಹಲವಾರು ಬೇಡಿಕೆ ಈಡೇರಿಸಲು ಸದಾಕಾಲ ಸಹಕಾರ ನೀಡಲಾಗುವುದು. ಕ್ಷೇತ್ರದ ಅಭಿವೃದ್ಧಿಯೊಂದೆ ನಮ್ಮ ಗುರಿಯಾಗಿದೆ. ಈಗಾಗಲೇ ಕ್ಷೇತ್ರಾದ್ಯಂತ ರಸ್ತೆಗಳು ಡಾಂಬರಿಕರಣ ಆಗಿವೆ. ಕುಡಿಯುವ ನೀರಿನ ಸಮಸ್ಯೆ ಆಗದಂತೆ ಹೆಚ್ಚಿನ ಕಾಳಜಿ ವಹಿಸಲಾಗಿದೆ. ಅದರಂತೆ ಇಂದು 1 ಕೋಟಿ 10 ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗೆ ಚಾಲನೆಯನ್ನು ಸಹ ನೀಡಲಾಗಿದೆ. ಇನ್ನು ಮೂರು ತಿಂಗಳಲ್ಲಿ ರಸ್ತೆ ಸೇರಿದಂತೆ ವಿವಿಧ ಕಾಮಗಾರಿಗಳನ್ನು ಮುಕ್ತಾಯ ಮಾಡುವ ಪ್ರಯತ್ನ ಮಾಡಲಾಗುವುದು ಎಂದರು.
ದುರದುಂಡೀಶ್ವರ ಮಠದ ಗುರುಬಸವಲಿಂಗ ಮಹಾಸ್ವಾಮೀಜಿ ಮಾತನಾಡಿ, ಪ್ರತಿ ವರ್ಷದಂತೆ ನಮ್ಮ ಶ್ರಿಮಠದ ಜಾತ್ರಾ ಮಹೋತ್ಸವ ಕಾರ್ಯಕ್ರಮಕ್ಕೆ ನಾವುಗಳು ಸಚಿವರನ್ನು ಆಹ್ವಾನಿಸಿದೇವು. ಅದರಂತೆ ಅವರು ಪ್ರೀತಿಗೆ ಅನುಗುನವಾಗಿ ಹಾಗೂ ನಮ್ಮ ಮಠದ ಮೇಲೆ ಗೌರವದಿಂದ ಇಂದು ಸಚಿವರು ನಮ್ಮ ಮಠಕ್ಕೆ ಆಗಮಿಸಿರುವುದು ಅತಿ ಸಂತೋಷ ತಂದಿದೆ. ಸಚಿವ ಸತೀಶ್ ಜಾರಕಿಹೊಳಿ ಅವರು ಶಾಸಕರಾಗಿ ಹಾಗೂ ಸಚಿವರಾಗಿ ಈ ಭಾಗದಲ್ಲಿ ಸಾಕಷ್ಟು ಕೆಲಸಗಳನ್ನು ಮಾಡಿ ಅಭಿವೃದ್ಧಿಯ ಹರಿಕಾರರಾಗಿದ್ದಾರೆ. ಯಮಕಮರಡಿ ಕ್ಷೇತ್ರಕ್ಕೆ ಬರುವ ಹಳ್ಳಿಗಳಲ್ಲಿ ರಸ್ತೆ, ಕುಡಿಯುವ ನೀರು, ಶಾಲೆ ಸೇರಿದಂತೆ ಇತರ ಎಲ್ಲ ಸೌಲಭ್ಯಗಳನ್ನು ನೀಡಿ ಗ್ರಾಮದ ಜನರ ಹೀತ ಕಾಪಾಡುವಲ್ಲಿ ಸಚಿವ ಸತೀಶ್ ಜಾರಕಿಹೊಳಿ ಮುಂದಾಗಿ ಮಾದರಿ ಗ್ರಾಮಗಳನ್ನಾಗಿ ಮಾಡಿದ್ದಾರೆ. ರಾಜ್ಯದಲ್ಲಿ ಯಾವುದೇ ಸರ್ಕಾರ ಇರಲಿ-ಬಿಡಲಿ ಅವರ ಅಭಿವೃದ್ಧಿಸೇವೆ ಮಾತ್ರ ನಿರಂತರವಾಗಿ ನಡೆಯತ್ತಲೇ ಇದೆ. ಇಂತಹ ಮಹಾ ನಾಯಕರ ಮೇಲೆ ನಮ್ಮ ಶ್ರೀ ಮಠ ಯಾವಾಗಲು ಆಶೀರ್ವಾದ ಮಾಡುತ್ತಲಿರುತ್ತದೆ. ಎಂದು ಹೇಳಿದರು.
ಶ್ರೀಮಠದ ಮೇಲೆ ಸಚಿವರಿಗಿದೆ ಅಪಾರ ಪ್ರೀತಿ: ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಶ್ರಿಮಠದ ಮೇಲೆ ಅಪಾರ ಗೌರವವನ್ನು ಇಟ್ಟುಕೊಂಡಿದ್ದಾರೆ. ಈಗಾಗಲೇ ಈ ಭಾಗದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಕ್ರಗಳನ್ನು ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನು ಹೆಚ್ಚು ಅಭಿವೃದ್ಧಿಕರ ಕೆಲಸಗಳು ನಡೆಯಲಿ ಎನ್ನುವ ಭಾವನೆಯೊಂದಿಗೆ ಸಚಿವರು ನಿರಂತರ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಾ ಜನರ ಮನಸ್ಸಿನಲ್ಲಿ ಶಾಸ್ವತವಾಗಿ ಉಳಿಯಲಿ ಎನ್ನುವುದು ಅಮ್ಮ ಅಭಿಪ್ರಾಯವಾಗಿದೆ ಎಂದರು.
ಅಭಿವೃದ್ಧಿ ಕಾರ್ಯಕ್ಕೆ 1 ಕೋಟಿ 10 ಲಕ್ಷ ರೂ. ನೀಡಿದ ಸಚಿವರು: ಕಡೋಲಿ ಗ್ರಾಮದಲ್ಲಿ ಈಗಾಗಲೇ ಸಾಕಷ್ಟು ಕೆಲಸಗಳನ್ನು ಸಚಿವರು ಮಾಡಿದ್ದಾರೆ. ಅದರಂತೆ ಇನ್ನುಳಿದ ಅಭಿವೃದ್ದಿ ಕಾಮಗಾರಿಗಾಗಿ ಸಚಿವರು 1 ಕೋಟಿ 10 ಲಕ್ಷ ರೂ. ಅನುದಾನ ಮಂಜೂರು ಮಾಡಿಸಿದ್ದಾರೆ. ಹೀಗಾಗಿ ಗ್ರಾಮದ ಜನರ ಸಚಿವರ ಮೇಲೆ ಸಹಕಾರ ಹಾಗೂ ನಂಬಿಕೆಯನ್ನು ಇಡಬೇಕು. ಇಂತಹ ಅಭಿವೃದ್ದಿಯ ಹರಿಕಾರ ಎಂಬ ಮಹಾ ನಾಯಕನ್ನು ನಾವು ಯಾವಾಗಲು ಕ್ಷೇತ್ರದಲ್ಲಿ ಉಳಿಸಿಕೊಳ್ಳಲು ನಾವು ಅವರ ಮೇಲೆಯೂ ಜನರು ನಂಬಿಕೆ ಇಡಬೇಕು ಎಂದು ತಿಳಿ ಹೇಳಿದರು.
ಇದಕ್ಕೂ ಮೊದಲು ಶ್ರೀ ದುರದುಂಡೀಶ್ವರ ಮಠಕ್ಕೆ ಭೇಟಿ ನೀಡಿದ ಸಚಿವ ಸತೀಶ್ ಜಾರಕಿಹೊಳಿ ಅವರು ಶ್ರೀ ಗುರುಬಸವಲಿಂಗ ಮಹಾಸ್ವಾಮಿಗಳು ಆಶೀರ್ವಾದ ಪಡೆದರು. ಬಳಿಕ ಮಠದ ಆವರಣದಲ್ಲಿ ಮಹಾಶಿವರಾತ್ರಿ ಜಾತ್ರಾ ಮಹೋತ್ಸವದ ನಿಮಿತ್ತ ಆಯೋಜಿಸಲಾದ ಕುಸ್ತಿ ಪಂದ್ಯಾವಳಿಗೆ ಸಚಿವರು ಚಾಲನೆ ನೀಡಿದರು. ಈ ವೇಳೆ ಸಚಿವರ ಆಪ್ತಸಹಾಯಕ ಮಲಗೌಡ ಪಾಟೀಲ್, ಗ್ರಾಪಂ ಸದಸ್ಯ ರಾಜು ಮಾಯಣ್ಣ, ಗಜಾನನ ಕಾಗನೇಕರ್, ಶಿವಾಜಿ ದೇಸಾಯಿ, ಸಾಗರ ಪಾಟೀಲ್, ಸುದೀರ ದೇಸಾಯಿ, ಶಿವಾಜಿ ಕುಟ್ಟರೆ, ದೀಪಕ ಮರಗಾಳೆ, ಶ್ರೀ ಶೈಲ ದೇಸಾಯಿ, ಪ್ರೇಮಾ ನರೋಟ್ಟಿ, ಲಕ್ಷ್ನೀ ಕುಟ್ಟರೆ, ರೇಖಾ ನರೋಟ್ಟಿ, ದತ್ತಾ ಸುತ್ತಾರ , ಸಂಜು ಕಾಂಬಳೆ, ಸುನೀಲ ಪಾವನೋಜಿ. ಅರುಣ ಕಂಟಾಬಳೆ, ಕೃಷ್ಣಾ ಭಂಡಾರಿ ಪಿಡಿಓ ಸೇರಿದಂತೆ ಇತರರು ಇದ್ದರು.


