ನ. 21ರಿಂದ ಹಿಡಕಲ್ ಜಲಾಶಯದಿಂದ ನೀರು ಬಿಡುಗಡೆಗೆ ಸಚಿವ ಸತೀಶ್‌ ಜಾರಕಿಹೊಳಿ ಸೂಚನೆ

Ravi Talawar
ನ. 21ರಿಂದ ಹಿಡಕಲ್ ಜಲಾಶಯದಿಂದ ನೀರು ಬಿಡುಗಡೆಗೆ ಸಚಿವ ಸತೀಶ್‌ ಜಾರಕಿಹೊಳಿ ಸೂಚನೆ
WhatsApp Group Join Now
Telegram Group Join Now
ಬೆಳಗಾವಿ:  2025-26 ನೇ ಸಾಲಿನ ಹಿಂಗಾರು ಹಂಗಾಮಿನ ನೀರಾವರಿಗಾಗಿ ಅಚ್ಚುಕಟ್ಟು ಪ್ರದೇಶದ ರೈತರಿಗೆ ಬೆಳೆಗಳನ್ನು ಬೆಳೆಯಲು ಅನುಕೂಲವಾಗುವಂತೆ ಘಟಪ್ರಭಾ ಬಲದಂಡೆ ಕಾಲುವೆ ಹಾಗೂ ಚಿಕ್ಕೋಡಿ ಉಪ ಕಾಲುವೆಗೆ ಹಿಡಕಲ್ ಜಲಾಶಯದಿಂದ  21-11-2025 ರಿಂದ 11-12-2025 ರವರೆಗೆ ಒಟ್ಟು 20 ದಿನಗಳ ಕಾಲ ನೀರನ್ನು ಬಿಡುಗಡೆಗೊಳಿಸಲಾಗುವುದು ಎಂದು ಹಿಡಿಕಲ್‌ ಡ್ಯಾಂ ಅಧಿಕ್ಷಕ ಅಭಿಯಂತರ  ಎಂ. ಎಲ್‌. ಗಣಿ ತಿಳಿಸಿದ್ದಾರೆ.
 ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ವಿಷಯ ತಿಳಿಸಿದ ಅವರು, ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಸೂಚನೆ ಮೇರೆಗೆ  21-11-2025 ರಿಂದ 11-12-2025 ರವರೆಗೆ ಒಟ್ಟು 20 ದಿನಗಳ ಕಾಲ ಹಿಂಗಾರು ಹಂಗಾಮಿನ ನೀರಾವರಿಗಾಗಿ ನೀರು ಹರಿಸುವ ಕುರಿತು ಆದೇಶಿಸಲಾಗಿದೆ ಎಂದು ತಿಳಿಸಿದ್ದಾರೆ.
ಅದರಂತೆ ಘಟಪ್ರಭಾ ಬಲದಂಡೆ ಕಾಲುವೆಯ ಅಚ್ಚುಕಟ್ಟು ಪ್ರದೇಶದಲ್ಲಿ ಕಾಲುವೆಯ ಕೊನೆಯ ಭಾಗದವರೆಗೆ ನೀರು ತಲುಪುವಂತೆ ಸೂಕ್ತ ಕ್ರಮ ಕೈಗೊಳ್ಳಬೇಕಾಗಿರುವುದರಿಂದ ವಿಭಾಗಗಳಿಗೆ ನೀರು ಪೂರೈಸುವ ಅವಧಿಯನ್ನು ಈ ಕೆಳಗಿನಂತೆ ಮಾರ್ಪಡಿಸಲಾಗಿದೆ.
ಬಾಗಲಕೋಟೆ ಎಂಬಿಸಿ ವಿಭಾಗ ನಂ.1  ಕಾಲುವೆಗೆ 21.11.2025 ರಿಂದ 30.11.2025 ವರೆಗೆ ನೀರು ಬಿಡಲಾಗುವುದು. ಕೌಜಲಗಿಯ ಜಿಆರ್‌ಬಿಸಿಸಿ ವಿಭಾಗ ನಂ.5 ಕಾಲುವೆಗೆ  30.11.2025 ರಿಂದ  06.12.2025  ವರೆಗೆ ನೀರು ಬಿಡಲಾಗುವುದು.  ಗೋಕಾಕದ ಜಿಆರ್‌ಬಿಸಿಸಿ ವಿಭಾಗ ನಂ.3  ಕಾಲುವೆಗೆ 06.12.2025 ರಿಂದ 11.12.2025 ವರೆಗೆ ನೀರು ಬಿಡಲಾಗುವುದು.
ತಮ್ಮ ವಿಭಾಗದ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಎಸ್ಕೆಪ್ ಗೇಟುಗಳನ್ನು ಹಿಂಗಾರು ಹಂಗಾಮು ಅವಧಿ ಮುಗಿಯುವರೆಗೂ ಸಂಪೂರ್ಣವಾಗಿ ಮುಚ್ಚಿರುವಂತೆ ಹಾಗೂ ನೀರು ಪೂರೈಸುವ ಅವಧಿ ಮುಗಿದ ನಂತರ ವಿಭಾಗದಡಿಯಲ್ಲಿ ಬರುವ ಎಲ್ಲ ವಿತರಣಾ ಕಾಲುವೆಗಳ ಗೇಟುಗಳನ್ನು ಬಂದು ಮಾಡಲು ಕಟ್ಟುನಿಟ್ಟಿನ ಕ್ರಮ ಕೈಕೊಳ್ಳಲು ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.
ಹಿಂಗಾರು ಹಂಗಾಮಿನ ನೀರು ಪೂರೈಕೆ ಅವಧಿ ಮುಗಿಯುವರೆಗೂ ಮೇಲಾಧಿಕಾರಿಗಳ ಅನುಮತಿ ಇಲ್ಲದೇ ಕೇಂದ್ರ ಸ್ಥಾನ ಬಿಡದಂತೆ ಎಲ್ಲ ಅಭಿಯಂತರವರಿಗೆ ಸೂಚಿಸಲಾಗಿದೆ. ಸದರಿ ಕಾಲುವೆ ಮುಖಾಂತರ ಹರಿಸುವ ನೀರನ್ನು ರೈತರ ಜಮೀನುಗಳಿಗೆ ಸಮರ್ಪಕವಾಗಿ ತಲುಪುವಂತೆ, ನೀರು ಪೋಲಾಗದಂತೆ ಹಾಗೂ ಕಾಲುವೆಯ ಕೊನೆಯ ಭಾಗದವರೆಗೆ ಎಲ್ಲ ರೈತರ ಜಮೀನುಗಳಿಗೆ ನೀರು ಸುರಳಿತವಾಗಿ ತಲುಪುವಂತೆ ಕ್ರಮ ಕೈಕೊಳ್ಳಲು ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.
ಸದರಿ ನೀರು ನಿರ್ವಹಣೆ ಸಲುವಾಗಿ ಕ್ರಮ ಕೈಕೊಳ್ಳುವಲ್ಲಿ ವಿಫಲರಾದಲ್ಲಿ ಸಮರ್ಪಕವಾಗಿ ಕೊನೆಯ ಭಾಗದವರೆಗೆ ಎಲ್ಲ ರೈತರ ಜಮೀನುಗಳಿಗೆ ನೀರು ಸುರಳಿತವಾಗಿ ತಲುಪುವಂತೆ ಕ್ರಮ ಕೈಕೊಳ್ಳಲು ಸೂಚಿಸಲಾಗಿದೆ. ಸದರಿ ನೀರು ನಿರ್ವಹಣೆ ಸಲುವಾಗಿ ಕ್ರಮ ಕೈಕೊಳ್ಳುವಲ್ಲಿ ವಿಫಲರಾದಲ್ಲಿ ಸಮರ್ಪಕವಾಗಿ ನಿರ್ವಹಿಸದೇ ಇರುವುದಕ್ಕೆ ದೂರುಗಳು ಬಂದಲ್ಲಿ ಮುಂದಿನ ಆಗು-ಹೋಗುಗಳಿಗೆ ತಮ್ಮನ್ನೇ ಜಬ್ಬಾರರನ್ನಾಗಿ ಮಾಡಲಾಗುವುದು ಎಂದು ತಿಳಿಸಿದ್ದಾರೆ.
WhatsApp Group Join Now
Telegram Group Join Now
Share This Article