ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಸರ್ವಾಗೀಂಣ ಅಭಿವೃದ್ಧಿಗಾಗಿ ಪ್ರಾಮಾಣಿಕ ಪ್ರಯತ್ನ: ಸಚಿವ ಸತೀಶ ಜಾರಕಿಹೊಳಿ

Ravi Talawar
ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಸರ್ವಾಗೀಂಣ ಅಭಿವೃದ್ಧಿಗಾಗಿ ಪ್ರಾಮಾಣಿಕ ಪ್ರಯತ್ನ: ಸಚಿವ ಸತೀಶ ಜಾರಕಿಹೊಳಿ
WhatsApp Group Join Now
Telegram Group Join Now
ಹಾರೂಗೇರಿ: ಜಿಲ್ಲಾ ಉಸ್ತುವಾರಿ ಸಚಿವರಾದ ಆದ ಬಳಿಕ ಈ ಭಾಗದ ಸಮಸ್ಯೆಗಳ  ಅವಲೋಕನ ಮಾಡಲಾಗಿದೆ.  ರಾಜ್ಯ ಸರ್ಕಾರ 4 ವರ್ಷದ ಅವಧಿ,  ಪುತ್ರಿ ಪ್ರಿಯಂಕಾ ಅವರ ಐದು ವರ್ಷದ  ಆಡಳಿತ ಅವಧಿಯಲ್ಲಿ  ಈ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ನಡೆಯಲಿವೆ. ಶೈಕ್ಷಣಿಕ ಜಿಲ್ಲೆಯಲ್ಲಿ ಇನ್ನಷ್ಟು ಬದಲಾವಣೆ ತರುವ ಕೆಲಸಗಳು ಮಾಡೋಣ. ನಿಮ್ಮ ಕನಸನ್ನು ನನಸು ಮಾಡಲು  ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು” ಎಂದು ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಹಾರೂಗೇರಿಯ ಬಿ.ಆರ್. ದರೂರ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಸತೀಶ್ ಜಾರಕಿಹೊಳಿ ಅಭಿಮಾನಿ ಬಳಗದಿಂದ ಸಂಸದೆ ಪ್ರಿಯಂಕಾ ಜಾರಕಿಹೊಳಿ, ಬೂತ್ ಮಟ್ಟದ ಕಾರ್ಯಕರ್ತರಿಗೆ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಅಧಿಕಾರದಲ್ಲಿ ಇರಲಿ.. ಇಲ್ಲದೇ ಇರಲಿ ಈ ಭಾಗದಲ್ಲಿ ಪಕ್ಷದ ಸಂಘಟನೆಗೆ  ಕಳೆದ ಹಲವಾರು ವರ್ಷಗಳಿಂದ ಸಾಕಷ್ಟು ಶ್ರಮಿಸಲಾಗಿದೆ.  ಹಾಗಾಗಿ ಕಳೆದ ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಕಾರ್ಯಕರ್ತರು ಬೂತಮಟ್ಟದಲ್ಲಿ ಕೆಲಸ ಮಾಡಿ,  ಪಕ್ಷದ ಅಭ್ಯರ್ಥಿ ಪ್ರಿಯಂಕಾ ಜಾರಕಿಹೊಳಿ ಅವರನ್ನು  ಗೆಲಿಸುವಲ್ಲಿ ಯಶಸ್ಸಿಯಾಗಿದ್ದಾರೆ. ಆದ್ದರಿಂದ ಎಲ್ಲಾ ಕಾರ್ಯಕರ್ತರು ಪಕ್ಷದ ಆಸ್ತಿ ಎಂದು ಗುನಗಾಣ ಮಾಡಿದರು.
ಗೆದ್ದರು, ಸೋತರು ಕ್ಷೇತ್ರದ ಅಭಿವೃದ್ಧಿ ಕೆಲಸಗಳು ನಿತಂರವಾಗಿ ನಡೆಯಲಿವೆ. ಚುನಾಯಿತ ಪ್ರತಿನಿಧಿಯಾಗಬೇಕಾದರೆ ಕ್ಷೇತ್ರದ ಜನರ ಪ್ರೀತಿ -ವಿಶ್ವಾಸ ಗೆದ್ದಾಗ ಮಾತ್ರ ನಾವು ಪ್ರತಿನಿಧಿಯಾಗಲು ಸಾಧ್ಯ.  ಚುನಾವಣೆ ಬಂದಾಗ ನಾನು ಶಾಸಕ-ಎಂಪಿ ಆಗುತ್ತೆನೆ, ದುಡ್ಡಿನಿಂದಲೇ ಗೆಲುವು ಸಾಧಿಸುತ್ತೆನೆ ಎಂದರೇ  ಅದು ತಪ್ಪು…. ಜನರ ಪ್ರೀತಿ ಎಲ್ಲಿವರೆಗೂ ನಮ್ಮ ಮೇಲೆ ಇರುತ್ತೆ ಅಲ್ಲಿವರೆಗೂ ಜನರ ನಮ್ಮನ್ನು ಆಯ್ಕೆ ಮಾಡುತ್ತಾರೆ ವಿನಯಃ ದುಡ್ಡುನಿಂದ ಅಲ್ಲ ಎಂದ ಸಚಿವರು, ತಮ್ಮ ಅನುಭವನ್ನು ಎಳಿ-ಎಳಿಯಾಗಿ ಬಿಚ್ಚಿಟ್ಟರು.
ಪುತ್ರಿ ಪ್ರಿಯಂಕಾ ಜಾರಕಿಹೊಳಿ ಅವರನ್ನು ಬಹುಮತದಿಂದ ಆಯ್ಕೆ ಮಾಡಿದ್ದ ಚಿಕ್ಕೋಡಿ ಕ್ಷೇತ್ರದ ಜನತೆಗೆ ಕೃತಜ್ಞತೆ ಹೇಳುತ್ತೇನೆ. ಮೊದಲ ಪ್ರಯತ್ನದಲ್ಲಿ ಆಯ್ಕೆ ಮಾಡಿ ಅಭಿವೃದ್ಧಿ ಮಾಡಲು ಅವಕಾಶ ಮಾಡಿಕೊಟ್ಟಿರುವ, ಅವರಿಗೆ ಧನ್ಯವಾದ ತಿಳಿಸುತ್ತೇನೆ ಎಂದರು.
 ಈ ವೇಳೆ ಸಂಸದೆ ಪ್ರಿಯಂಕಾ ಜಾರಕಿಹೊಳಿ ಅವರು ಮಾತನಾಡಿ,  ನಿಮ್ಮೆಲ್ಲರ ಶ್ರಮದ ಫಲದಿಂದ ಚಿಕ್ಕೋಡಿ ಲೋಕಸಭೆ ಕ್ಷೇತ್ರದಿಂದ ಸಂಸದೆಯಾಗಿ ಆಯ್ಕೆ  ಆಗಿದ್ದೆನೆ.  ನನಗೆ ಆಶೀರ್ವದಿಸಿದ ಆತ್ಮೀಯ ಮತಭಾಂದವರಿಗೆ  ಹೃದಯ ಪೂರ್ವಕ ಧನ್ಯವಾದಗಳನ್ನು ತಿಳಿಸುತ್ತೇನೆ.
ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸುವೆ: ಚಿಕ್ಕ ವಯಸ್ಸಿನಲ್ಲಿ ನನಗೆ ನೀವು ದೊಡ್ಡ ಜವಾಬ್ದಾರಿ ನೀಡಿದ್ದಿರಿ. ಈ ಭಾಗದ ಸರ್ವಾಗೀಂಣ ಅಭಿವೃದ್ಧಿಗೆ ಸದಾ ಸಿದ್ಧ ,  ನಿಮ್ಮ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ನಾನು ಸ್ಪಂದಿಸುತ್ತೇನೆ.  ಸಾಕಷ್ಟು ಮಹತ್ವದ ಕಾರ್ಯಗಳು ನಡೆಯಬೇಕಿದೆ ಹೀಗಾಗಿ ಹಿರಿಯ, ಈ ಭಾಗದ ನಾಯಕರ ಸಹಾಯ-ಸಹಾಯ ಅಗತ್ಯವಿದೆ. ಈ ಕ್ಷೇತ್ರವನ್ನು ಅಭಿವೃದ್ದಿಯತ್ತ ಕೊಂಡ್ಯೊಯಲು  ನಾವೆಲ್ಲರೂ ಜೊತೆಯಾಗಿ ಶ್ರಮಿಸೋಣ. ಚಿಕ್ಕೋಡಿ ಲೋಕಸಭಾ ಕ್ಷೇತ್ರವನ್ನ ದೇಶದಲ್ಲಿ ಮಾದರಿ ಕ್ಷೇತ್ರವನ್ನಾಗಿ  ರೂಪಿಸೋಣ ಎಂದರು.
ಯುವಜನತೆಗೆ ಉದ್ಯೋಗ ನೀಡುವಲ್ಲಿ ಹೆಚ್ಚಿನ ಮಹತ್ವ: ಸರ್ಕಾರದ ಬಹುತೇಕ ಯೋಜನೆಗಳು ಗ್ರಾಮಗಳಿಗೆ ತಲುಪಬೇಕಿದೆ.  ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ವಿದ್ಯುತ್, ಶೌಚಾಲಯಗಳ ನಿರ್ಮಾಣ, ಗ್ರಾಮೀಣ ಪ್ರದೇಶದ ರಸ್ತೆಗಳು ಇನ್ನಿತರ ಹಲವು ಯೋಜನೆಗಳು ಗ್ರಾಮಗಳಿಗೆ ತಲುಪಿಸಲು   ಸಾಧ್ಯವಾದಷ್ಟು ಪ್ರಯತ್ನಿಸೋಣ. ಯುವಜನತೆಗೆ ಉದ್ಯೋಗ ನೀಡುವಲ್ಲಿ ಹೆಚ್ಚಿನ ಮಹತ್ವ ನೀಡುವುದು, ಶಾಲಾ ಕಾಲೇಜುಗಳಲ್ಲಿನ ಶಿಕ್ಷಕರ ಕೊರತೆಯನ್ನು ನೀಗಿಸುವುದು, ವೈದ್ಯಕೀಯ ಸವಲತ್ತುಗಳು ಉತ್ತೇಜಿಸುವ ಕಾರ್ಯಗಳು ನಡೆಯಬೇಕಿದೆ ಎಂದು ಹೇಳಿದರು.
ಬೂಡಾ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ, ಸಂಸದರಾಗಿ ಪ್ರಿಯಂಕಾ ಜಾರಕಿಹೊಳಿಯವರು ಆಯ್ಕೆಯಾಗಲು ಕಾರಣಿಕರ್ತರಾದ ಕಾರ್ಯಕರ್ತರನ್ನು ಸನ್ಮಾನಿಸುತ್ತಿರುವುದು ಸಂತಸದ ವಿಚಾರ. ಸಚಿವ ಸತೀಶ್ ಜಾರಕಿಹೊಳಿ ಅವರ ದೂರದೃಷ್ಟಿಯ ವಿಚಾರದಿಂದ ಬೆಳಗಾವಿ ಜಿಲ್ಲೆ ಅಭಿವೃದ್ಧಿಪತದತ್ತ ಸಾಗತ್ತಿದೆ.
ತಂದೆಯಂತೆಯ ಅಭಿವೃದ್ಧಿ ಕನಸು ಕಂಡ ಸಂಸದೆ ಪ್ರಿಯಂಕಾ ಜಾರಕಿಹೊಳಿ ಅವರು ಚಿಕ್ಕೋಡಿ ಕ್ಷೇತ್ರದ ಪ್ರಗತಿಗೆ ಪ್ರಾಮಾಣಿಕವಾಗಿ
 ಶ್ರಮಿಸುತ್ತೆರೆಂಬ ವಿಶ್ವಾಸ ನಮ್ಮಲ್ಲಿದೆ ಎಂದರು.
ಇದಕ್ಕೂ  ಮುನ್ನ,  ಸಂಸದೆಯಾಗಿ ಆಯ್ಕೆಯಾದ ಬಳಿಕ ಮೊದಲ ಬಾರಿಗೆ ಹಾರೂಗೇರಿ ಪಟ್ಟಣಕ್ಕೆ ಆಗಮಿಸಿದ ಪ್ರಿಯಂಕಾ ಜಾರಕಿಹೊಳಿ ಅವರನ್ನು ಪಟಾಕಿ ಸಿಡಿಸುವ ಮೂಲಕ ಅತ್ಮೀಯವಾಗಿ ಬರಮಾಡಿಕೊಳ್ಳಲಾಯಿತು.
ಇದೇ ವೇಳೆ ಕುಡಚಿ ಮತಕ್ಷೇತ್ರದ  ನೂರಾರು ಕಾರ್ಯಕರ್ತರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಎಸ್ ಬಿ. ಘಾಟಗೆ, ಅಮೀತ್ ಘಾಟಗೆ, ರಾಮಣ್ಣ ಗಸ್ತಿ, ಎನ್. ಎಸ್. ಕಾಗವಾಡ, ಅರ್ಜುನ್ ನಾಯಕವಾಡಿ, ಗಿರೀಶ್ ದರೂರ, ಚಿನ್ನಪ್ಪ ಅಸ್ಟಗಿ, ಅಶೋಕ ತುಪ್ಪದ, ಸಂಜು ಬಾನೆ, ಶಂಕರ ದಳವಾಯಿ, ವಸಂತ ಲಟ್ಟೆ, ಮಹಾದೇವ ಮಗದುಮ್, ರಮೇಶ ಯಡನ್ನವರ್, ಯಲ್ಲಪ್ಪಾ ಸಿಂಗೆ, ಚಿಕ್ಕೋಡಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷ ನಿರ್ಮಲಾ ಪಾಟೀಲ್ ಸೇರಿದಂತೆ ಬೂತ್ ಮಟ್ಟದ ಸಾವಿರಾರು ಕಾರ್ಯಕರ್ತರು ಇದ್ದರು.
WhatsApp Group Join Now
Telegram Group Join Now
Share This Article