ತಾಲೂಕಿನ ಹರಗಾಪೂರ ಗ್ರಾಮದಲ್ಲಿ ಅಬ್ಬರ ಪ್ರಚಾರ ನಡೆಸಿದ ಸಚಿವರು
ಹುಕ್ಕೇರಿ: ಜನರಿಗೆ, ರೈತರಿಗೆ ಸ್ಪಂದಿಸುವ ನಾಯಕರನ್ನು ಆಯ್ಕೆ ಮಾಡಿದಾಗ ಮಾತ್ರ ಈ ಭಾಗದ ಅಭಿವೃದ್ಧಿಯಾಗಲು ಸಾಧ್ಯ, ಹೀಗಾಗಿ ನಿಮ್ಮೆಲ್ಲರ ಕನಸು ನನಸಾಗಬೇಕಾದರೆ ದಿ. ಅಪ್ಪಣಗೌಡ ಪಾಟೀಲ್ ಪೆನಲ್ ಗೆ ಬೆಂಬಲ ನೀಡಬೇಕು ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಅವರು ಮನವಿ ಮಾಡಿಕೊಂಡರು.
ತಾಲೂಕಿನ ಹರಗಾಪೂರ ಗ್ರಾಮದಲ್ಲಿ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಚುನಾವಣೆಯಲ್ಲಿ ಬಾಗಿಯಾಗಿ, ಅಬ್ಬರ ಪ್ರಚಾರ ನಡೆಸಿ ಅವರು ಮಾತನಾಡಿದರು, ದಿ. ಅಪ್ಪಣಗೌಡ ಪಾಟೀಲ್ ಅವರಿಗೆ ರೈತರ ಬಗ್ಗೆ ವಿಶೇಷ ಕಾಳಜಿ ಇತ್ತು, ಹೀಗಾಗಿ ವಿದ್ಯುತ್ ಸಹಕಾರಿ ಸಂಘ ನಿರ್ಮಿಸಿ, ಅನೇಕ ಮಹತ್ವದ ಕಾರ್ಯಗಳನ್ನು ಮಾಡಿದ್ದಾರೆ. ಆದರೆ, 30 ವರ್ಷದ ಕತ್ತಿಯವರ ಆಡಳಿತದಲ್ಲಿ ಈ ಭಾಗದಲ್ಲಿ ಹೇಳಿಕೊಳ್ಳವಷ್ಟು ಕೆಲಸ ನಡೆದಿಲ್ಲ. ರೈತರು ಆರ್ಥಿಕವಾಗಿ ಸದೃಢರಾಗಬೇಕಾದರೆ ದಿ. ಅಪ್ಪಣಗೌಡ ಪಾಟೀಲ್ ಪೆನಲ್ ಗೆ ನೀವೆಲ್ಲರೂ ಬೆಂಬಲ ಸೂಚಿಸಬೇಕು. ನಿಮ್ಮ ಕೆಲಸಗಳಿಗೆ ಧ್ವನಿಯಾಗಲು ಮಾಜಿ ಸಂಸದ ಅಣ್ಣಾ ಸಾಹೇಜ್ ಜೊಲ್ಲೆ, ಸಂಗಮ ಸಕ್ಕರೆ ಕಾರ್ಖಾನೆಯ ಅಧ್ಯಕ್ಷರಾದ ರಾಜೇಂದ್ರ ಪಾಟೀಲ, ಹಿರಾ ಸಕ್ಕರೆ ಕಾರ್ಖಾನೆಯ ಅಧ್ಯಕ್ಷರಾದ ಅಜ್ಜಪ್ಪಾ ಕಲ್ಲಹಟ್ಟಿ ಹಾಗೂ ಅಪ್ಪಸಾಹೇಬ್ ಸಿರಕೋಳಿ ಅವರು ಸದಾ ಮುಂದಾ ಇದ್ದಾರೆ. ನೀವು ಆಶೀರ್ವಾದ ಮಾಡಿದರೆ ನಿಮ್ಮ ಕನಸುಗಳು ಈಡೇರಲಿವೆ ಎಂದು ಹೇಳಿದರು.
ಕಳೆದ ಮೂರು ತಿಂಗಳ ಅವಧಿಯಲ್ಲಿ ಹುಕ್ಕೇರಿ ವಿದ್ಯುತ್ ಸಹಕಾರಿ ಸಂಘದಲ್ಲಿ ಒಳ್ಳೆಯ ಕೆಲಸಗಳನ್ನು ಮಾಡಲಾಗಿದೆ. ಟಿಸಿ ಅಳವಡಿಕೆ, ನಿರಂತರ ಜ್ಯೋತಿ, ರೈತರಿಗೆ ಸ್ಪಂದಿಸುವ ಕಾರ್ಯವಾಗಿದೆ. ಇದು ಮುಂದುವರೆಬೇಕು, ರೈತರ ಪರವಾಗಿ ಸಂಸ್ಥೆ ಇರಬೇಕೆಂಬ ಉದ್ದೇಶದಿಂದ ಮುಂದಿನ ಐದು ವರ್ಷದ ವರೆಗೂ ನಿಮ್ಮ ಸೇವೆ ಮಾಡಲು ಅವಕಾಶ ಮಾಡಕೊಡಬೇಕು. ಇದೇ ತಿಂಗಳು ಸೆ. 28 ರಂದು ನಡೆಯಲಿರುವ ಚುನಾವಣೆಯಲ್ಲಿ ದಿ. ಅಪ್ಪಣಗೌಡ ಪಾಟೀಲ್ ಪೆನಲ್ ಗೆ ಬೆಂಬಲಿಸಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಶಶಿಕಾಂತ ನಾಯಿಕ, ಬುಡಾ ಅಧ್ಯಕ್ಷರಾದ ಲಕ್ಷ್ಮಣರಾವ್ ಚಿಂಗಳೆ, ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್ ಜಾರಕಿಹೊಳಿ, ಸಂಗಮ ಸಕ್ಕರೆ ಕಾರ್ಖಾನೆಯ ಅಧ್ಯಕ್ಷರಾದ ರಾಜೇಂದ್ರ ಪಾಟೀಲ, ಹಿರಾ ಸಕ್ಕರೆ ಕಾರ್ಖಾನೆಯ ಅಧ್ಯಕ್ಷರಾದ ಅಜ್ಜಪ್ಪಾ ಕಲ್ಲಹಟ್ಟಿ ಹಾಗೂ ಅಪ್ಪಸಾಹೇಬ್ ಸಿರಕೋಳಿ ಹಾಗೂ ಇತರರು ಇದ್ದರು.


