ಸಾರ್ವಜನಿಕರ ಸಮಸ್ಯೆಗಳನ್ನು ಕಾಲಮಿತಿಯಲ್ಲಿ ಪರಿಹರಿಸಲು ಜನತಾದರ್ಶನ ಸಹಾಯ ; ಸಚಿವ ಸಂತೋಷ ಲಾಡ್

Ravi Talawar
ಸಾರ್ವಜನಿಕರ ಸಮಸ್ಯೆಗಳನ್ನು ಕಾಲಮಿತಿಯಲ್ಲಿ ಪರಿಹರಿಸಲು ಜನತಾದರ್ಶನ ಸಹಾಯ ; ಸಚಿವ ಸಂತೋಷ ಲಾಡ್
WhatsApp Group Join Now
Telegram Group Join Now
ಧಾರವಾಡ: ಮಾನ್ಯ ಮುಖ್ಯಮಂತ್ರಿಗಳ ಆದೇಶ ಮೇರೆಗೆ ಕಳೆದ 2 ವರ್ಷಗಳಿಂದ ಜನತಾ ದರ್ಶನ ಸಭೆ ಮಾಡಿದ್ದೇವೆ. ಜನರಿಗೆ ನೇರವಾಗಿ ಕಾನೂನಾತ್ಮಕ ಚೌಕಟ್ಟಿನಲ್ಲಿ ಸಾರ್ವಜನಿಕರ ಸಮಸ್ಯೆ, ಅಹವಾಲುಗಳನ್ನು ಕಾಲಮಿತಿಯಲ್ಲಿ ಮತ್ತು ಸಾಧ್ಯವಾದಷ್ಟು ಸ್ಥಳಿಯವಾಗಿ ಪರಿಹರಿಸಲು ಅನಕೂಲವಾಗುವಂತೆ ಎಲ್ಲಾ  ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಆದೇಶ ನೀಡುವುದಾಗಿ ಕಾರ್ಮಿಕ ಸಚಿವರು ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ ಲಾಡ್ ಅವರು ಹೇಳಿದರು.
 ಅಣ್ಣಿಗೇರಿ ಪಟ್ಟಣದ ಆದಿಕವಿ ಪಂಪ ಸ್ಮಾರಕ ಭವನದಲ್ಲಿ ಜಿಲ್ಲಾಡಳಿತ, ಅಣ್ಣಿಗೇರಿ ತಾಲೂಕಾಡಳಿತ, ತಾಲೂಕು ಪಂಚಾಯತ ಹಾಗೂ ಪುರಸಭೆ  ಸಹಯೋಗದೊಂದಿಗೆ ಆಯೋಜಿಸಿದ್ದ ಜಿಲ್ಲಾ ಮಟ್ಟದ ಜನತಾ ದರ್ಶನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ,  ಮಾತನಾಡಿದರು.
ಜಿಲ್ಲಾಡಳಿತ ನಿರಂತರವಾಗಿ ಸಾರ್ವಜನಿಕರ ಅಹವಾಲು, ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಿ, ಪರಿಹರಿಸಲು ಕ್ರಮವಹಿಸುತ್ತಿದೆ. ಜಿಲ್ಲೆಯ ಎಲ್ಲ ತಹಸೀಲ್ದಾರರು ಪ್ರತಿ ದಿನ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿ, ಕ್ರಮವಹಿಸುತ್ತಿದ್ದಾರೆ. ಜಿಲ್ಲಾಡಳಿತದಿಂದ ಸಾರ್ವಜನಿಕರ ಆಶಯಗಳಿಗೆ ತಕ್ಷಣ ಪ್ರತಿಕ್ರಿಯಿಸಲು ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಅವರು ತಿಳಿಸಿದರು.
ಶಿರುಗುಪ್ಪಿ ಭಾಗದಲ್ಲಿ ಬೆಣ್ಣೆಹಳ್ಳದ ಹುಳು ಎತ್ತಲು ರೂ. 1600 ಕೋಟಿ ಅನುದಾನ ಬೇಕು ಎಂದು ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದೇವೆ ಎಂದು ಅವರು ಹೇಳಿದರು.
 ರೈತರಿಗೆ ಸಿಗುವ ಗೊಬ್ಬರ ದರವನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ದಲ್ಲಾಳಿ ಹಾಗೂ ರಾಸಾಯನಿಕ ಗೊಬ್ಬರ ಮಾರಾಟ ಅಂಗಡಿಗಳನ್ನು ಜಿಲ್ಲಾಧಿಕಾರಿಗಳ ಮುಖಾಂತರ ಪರಿಶೀಲಿಸಿ, ಅಂತಹ ಅಂಗಡಿಗಳ ಪರವಾನಿಗೆ ರದ್ದು ಮಾಡಲಾಗುವದು ಮತ್ತು ಮಾಲಿಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.
ಕಾರ್ಯಕ್ರಮದಲ್ಲಿ  ಶಾಸಕ ಎನ್.ಎಚ್.ಕೋನರೆಡ್ಡಿ  ಅವರು ಮಾತನಾಡಿ, ಸಾರ್ವಜನಿಕರ ಸಮಸ್ಯೆ, ಅಹವಾಲುಗಳ ನಿವಾರಿಸಲು ಪ್ರತಿ ವಾರ ಕ್ಷೇತ್ರದಲ್ಲಿ ಜನಸಂಪರ್ಕ ಸಭೆ ನಡೆಸಲಾಗುತ್ತಿದೆ. ಜನಸಂಪರ್ಕ ಸಭೆ ಮೂಲಕ ಸಾರ್ವಜನಿಕರಿಗೆ ಅನುಕೂಲವಾಗಿದೆ ಎಂದರು.
  ಸಭೆಯಲ್ಲಿ ಜಿಲ್ಲಾಧಿಕಾರಿ ದಿವ್ಯ ಪ್ರಭು, ಜಿಲ್ಲಾ ಪಂಚಾಯತ ಕಾರ್ಯನಿರ್ವಾಹಕಾಧಿಕಾರಿ  ಭುವನೇಶ ಪಾಟೀಲ್,  ಧಾರವಾಡ ಜಿಲ್ಲಾ ಪೋಲೀಸ್ ವರಿಷ್ಠಧಿಕಾರಿ ಗುಂಜನ ಆರ್ಯ, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತ ರುದ್ರೇಶ ಘಾಳಿ, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಡಾ.ಸಂತೋಷ ಬಿರಾದರ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ  ಜಿಲ್ಲಾ ಗ್ಯಾರಂಟಿ ಪ್ರಾಧಿಕಾರ ಅಧ್ಯಕ್ಷ ಎಸ್.ಆರ್.ಪಾಟೀಲ ಸೇರಿದಂತೆ ಇತರ ಜನಪ್ರತಿನಿಧಿಗಳು, ಸಾರ್ವಜನಿಕರು ಸೇರಿದಂತೆ ಇತರರು ಉಪಸ್ಥಿತರಿದ್ದರು.
ಸಂಚಾರಿ ಆರೋಗ್ಯ ಘಟಕ ಚಾಲನೆ: ಈ ಸಂದರ್ಭದಲ್ಲಿ ಅಣ್ಣಿಗೇರಿ ತಾಲೂಕಿನ ಸಂಚಾರಿ ಆರೋಗ್ಯ ಘಟಕ ವಾಹನಕ್ಕೆ  ಕಾರ್ಮಿಕ ಸಚಿವ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರು ಸಂತೋಷ ಲಾಡ್ ಹಾಗೂ ನವಲಗುಂದ ಶಾಸಕ ಕೋನರೆಡ್ಡಿ, ಜಿಲ್ಲಾಧಿಕಾರಿ ದಿವ್ಯಾ ಪ್ರಭು, ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ, ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.
ಜನತಾ ದರ್ಶನದಲ್ಲಿ ಸಾರ್ವಜನಿಕರ ಅರ್ಜಿಗಳ ವಿಲೇವಾರಿ: ಜನತಾ ದರ್ಶನ ಕಾರ್ಯಕ್ರಮದಲ್ಲಿ ಸುಮಾರು 199 ಅರ್ಜಿಗಳನ್ನು ಸಾರ್ವಜನಿಕರು ಸಲ್ಲಿಸಿದ್ದರು. ಕಂದಾಯ ಇಲಾಖೆ 52, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ 48, ನಗರಾಭಿವೃದ್ಧಿ ಇಲಾಖೆ 34, ಇಂಧನ ಇಲಾಖೆ 10, ಕೃಷಿ ಇಲಾಖೆ 9, ಕಾರ್ಮಿಕ ಇಲಾಖೆ 8, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ 8, ಕನ್ನಡ ಮತ್ತು ಸಂಸ್ಕøತಿ ಇಲಾಖೆ 4, ರಾಷ್ಟ್ರೀಯ ಹೆದ್ದಾರಿ 3, ಸಮಾಜ ಕಲ್ಯಾಣ ಇಲಾಖೆ 3, ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ 3, ವಸತಿ ಇಲಾಖೆ 3, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ 2, ಗೃಹ ಇಲಾಖೆ 2, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ 2, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ 2, ಸಣ್ಣ ನೀರಾವರಿ ಇಲಾಖೆ 2, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ 1, ಸಾರಿಗೆ ಇಲಾಖೆ 2, ಸಹಕಾರ ಇಲಾಖೆ 1, ಒಟ್ಟು 199 ಅರ್ಜಿಗಳು ಸಲ್ಲಿಸಿದ್ದರು.
ಸಾರ್ವಜನಿಕ ಅರ್ಜಿಗಳನ್ನು ಮುಂದಿನ ಕ್ರಮಕ್ಕಾಗಿ ಆಯಾ ಇಲಾಖೆಗಳ ಅಧಿಕಾರಿಗಳಿಗೆ ಕಳಿಹಿಸಿ, ಅವರಿಂದ ಉತ್ತರ ಪಡೆದು, ಜನತಾ ದರ್ಶನದಲ್ಲಿ ನೀಡಲಾಯಿತು. ಸರಕಾರದ ಮಟ್ಟದಲ್ಲಿ ನಿರ್ಣಯವಾಗಬೇಕಾದ ಅರ್ಜಿಗಳನ್ನು ಸೂಕ್ತ ಶಿಪಾರಸ್ಸುಗಳೊಂದಿಗೆ ಸರಕಾರದ ಸಂಬಂಧಿಸಿದ ಇಲಾಖೆಗೆ ಕಳಿಸಲಾಗುವುದು ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಅವರು ತಿಳಿಸಿದರು.
ಜನತಾ ದರ್ಶನದಲ್ಲಿ ಸಲ್ಲಿಕೆಯಾದ ಅಹವಾಲುಗಳು:
ಅಣ್ಣಿಗೇರಿ ಸರ್ಕಾರಿ ಆಸ್ಪತ್ರೆಯಲ್ಲಿ  ಔಷಧಿ ಪೂರೈಕೆಗೆ  ಮನವಿ: ಬಸವರಾಜ ಬೆಟಗೇರಿ  ಮಾತನಾಡಿ,  ಅಣ್ಣಿಗೇರಿ ಪಟ್ಟಣ ಹಾಗೂ ತಾಲೂಕಿನ ಗ್ರಾಮಗಳಲ್ಲಿ  ಸಾರ್ವಜನಿಕರಿಗೆ ಇಸಿಜಿ. ಚಿಕಿತ್ಸೆ ಕೆಲವು ವರ್ಷಗಳಿಂದ ಇಸಿಜಿ ಚಿಕಿತ್ಸೆ ಇಲ್ಲ ಹಾಗೂ ನಿರಂತರ ಔಷಧಿ ಸೌಲ್ಯಭ ಸಿಗುತಿಲ್ಲ ಎಂದು ಮನವಿ ಸಲ್ಲಿಸಿದರು. ಈ ಕುರಿತು ಕಾರ್ಮಿಕ ಸಚಿವ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರು ಮಾತನಾಡಿ, ಪ್ರತಿಕ್ರಿಯೆ ನೀಡಿ, ಸಂಬಂಧಿಸಿದ ಅಧಿಕಾರಿಗಳಿಗೆ  ನಿರಂತರ ಔಷಧಿಗಳು ಪೂರೈಸುವಂತೆ ಸೂಚನೆ ನೀಡಿದರು. ಹಾಗೂ ಮುಂದಿನ ಕೆಲವು ತಿಂಗಳಲ್ಲಿ ಇಸಿಜಿ ಸೌಲಭ್ಯ ನೀಡುವದಾಗಿ ಭರವಸೆ ನೀಡಿದರು.
ಅಣ್ಣಿಗೇರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ತಡೆಯಲು ಮನವಿ:  ಅಣ್ಣಿಗೇರಿ ಪಟ್ಟಣ ಹಾಗೂ ತಾಲೂಕಿನ ಗ್ರಾಮಸ್ಥರಿಗೆ ಹಾಗೂ ರೈತರಿಗೆ ಕೃಷಿಗೆ ತೆರಳಲು ಡಿವೈಡರ್ (ತಿರುವು) ಇಲ್ಲದ ಕಾರಣ 10ಕ್ಕೊ ಹೆಚ್ಚು  ಅಪಘಾತಗಳು  ಸಂಭವಿಸಿವೆ. ಆದಕಾರಣ ಬೇಗನೆ ಪರಿಹಾರ ನೀಡುವಂತೆ ಮನವಿ ಸಲ್ಲಿಸಿದರು.
ಸಚಿವರು ಮಾತನಾಡಿ, ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರಾಧಿಕಾರ 63 ರ  ಅಧಿಕಾರಿಯೊಂದಿಗೆ ಚರ್ಚೆ ಮಾಡಿ ಆದಷ್ಟು ಬೇಗನೆ ರಸ್ತೆಗಳನ್ನು ಸರಿಪಡಿಸುವಂತೆ ಅವರು ಹೇಳಿದರು.
ವಿಕಲಚೇತನರ ಉದ್ಯೋಗಕ್ಕೆ  ಮನವಿ: ಅಣ್ಣಿಗೇರಿ ಪಟ್ಟಣದ ವಿಕಲಚೇತನ ರಾಜೇಶಸಾಬಾ ಬಾಬು ಸಾಬ್ ಕಣವಿ ಮಾತನಾಡಿ,  ಕೆಲವು ವರ್ಷಗಳ ಹಿಂದೆ ಸೆಂಟ್ರಿಂಗ್ ಕೆಲಸ ಮಾಡಲು ಹೋಗಿ ಕಟ್ಟಡದಿಂದ ಬಿದ್ದು ಅಂಗವಿಕಲನಾಗಿರುವದರಿಂದ  ಯಾವಾದರೂ ಒಂದು ಉದ್ಯೋಗ ಕೊಡುವಂತೆ ಮನವಿ ಮಾಡಿದರು.
ಸಚಿವರು ಮಾತನಾಡಿ, ಸಂತೋಷ ಲಾಡ್ ಪೌಂಡೇಶನ್‍ವತಿಯಿಂದ ಅಂಗಡಿ ಮುಂಗಟ್ಟು ತೆರೆಯಲು ಸಹಾಯ ಮಾಡುತ್ತೇವೆ ಎಂದರು.
ಪೈಲ್ವಾನ್ ಸಂಘದಿಂದ ಕಟ್ಟಡಕ್ಕೆ ಮನವಿ: ಅಣ್ಣಿಗೇರಿ ಪಟ್ಟಣದ ಮಾಜಿ ಪೈಲ್ವಾನ್ ಶಂಕ್ರಪ್ಪ ಅಣ್ಣಿಗೇರಿ ಅವರು ಮಾತನಾಡಿ, ಪೈಲ್ವಾನ್ ಸಮಾಜಕ್ಕೆ ಕಚೇರಿಗಾಗಿ ಜಾಗವನ್ನು ಮಂಜೂರಿ ಮಾಡಲಾಗಿದ್ದು, ನೋಂದಣಿ ಮಾಡಿಕೊಡಿ ಎಂದು ಮನವಿ ಸಲ್ಲಿಸಿದರು.
ಸಚಿವರು ಮಾತನಾಡಿ, ಇನ್ನೂ ಉಳಿದ 2 ಲಕ್ಷ 15 ಸಾವಿರ ಹಣವನ್ನು ಸಚಿವರು ವೈಯಕ್ತಿಕವಾಗಿ ನೀಡಲು ಒಪ್ಪಿದರು.
ಗ್ರಾಮಗಳಲ್ಲಿ ಸಮಸ್ಯೆಗಳಿಗೆ ಸರಿಪಡಿಸುವ ಕುರಿತು ಮನವಿ:  ರಸ್ತೆಯಲ್ಲಿ ಅನವಶ್ಯಕವಾಗಿ ರಸ್ತೆ ತಡೆಗಳು (ರೋಡ್ ಜಂಪ್) ಇರುವುದರಿಂದ ವಾಹನಗಳಿಗೆ ಹಾಗೂ ಸಾರ್ವಜನಿಕರಿಗೆ ಬಹಳ ತೊಂದರೆ ಉಂಟಾಗುತ್ತದೆ. ಹಾಗೂ ಬೀದಿನಾಯಿಗಳು ಮಕ್ಕಳಿಗೆ ತೊಂದರೆ ಕೊಡುತ್ತಿವೆ. ಇದಕ್ಕೆ ನಮಗೆ ಸಮಸ್ಯೆಗೆ ಪರಿಹಾರ ನೀಡಬೇಕು ಎಂದು ಮನವಿ ಸಲ್ಲಿಸಿದರು.
ಕಾರ್ಮಿಕ ಸಚಿವರು ಮಾತನಾಡಿ,  ಸಾರ್ವಜನಿಕರ ಅಭಿಪ್ರಾಯ ಮೇರೆಗೆ ರೋಡ್ ಜಂಪ್ ತೆರುವ ಗೊಳಸಲಾಗುವುದು. ಹಾಗೂ ನಾಯಿ ಮತ್ತು ಹಂದಿ ಹಾವಳಿಗೆ ಅದಷ್ಟು ಬೇಗನೆ ಪರಿಹಾರ ಸಿಗುತ್ತದೆ ಎಂದು ಹೇಳಿದರು.
WhatsApp Group Join Now
Telegram Group Join Now
Share This Article