ಅಥಣಿ: ಅಥಣಿ ತಾಲೂಕಿನ ಕೊಹಳ್ಳಿ ಗ್ರಾಮದಲ್ಲಿ ಸಣ್ಣ ನೀರಾವರಿ ಇಲಾಖೆಯ ೯ ಕೆರೆಗಳ ಗಂಗಾ ಪೂಜೆ ಸಲ್ಲಿಸಿ ಶನಿವಾರ ಸುದ್ದಿಗಾರೊಂದಿಗೆ ಮಾತನಾಡಿದ ಸಚಿವ ಎನ್ ಎಸ್ ಭೋಸರಾಜು ರಾಜ್ಯ ಬಜೇಟ್ ಮಂಡನೆ ಸಂದರ್ಭದಲ್ಲಿ ರಾಜ್ಯಪಾಲರು ನಡೆದುಕೊಂಡ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ ಸಂವಿಧಾನಿಕ ಹುದ್ದೆಯಲ್ಲಿರುವ ರಾಜ್ಯಪಾಲ ತೋಹಾರಚಂದ್ ಗೇಹೆಲೊಟ್ ಅವರು ರಾಜ್ಯ ಸರಕಾರದ ಕ್ಯಾಬಿನೇಟ್ನಲ್ಲಿ ನಿರ್ಧಾರ ಮಾಡಿರುವ ಭಾಷಣವನ್ನು ನಿಯಮಗಳ ಪ್ರಕಾರ ಒದಲೆಬೇಕು ಆದ್ರೆ ಸರಕಾರ ಕೊಟ್ಟ ಭಾಷಣವನ್ನು ಮಾಡದೆ, ರಾಷ್ಟ್ರಗೀತೆ ಆಗುವವರೆಗೆ ಅಲ್ಲೆ ಇರಬೇಕಾಗಿದ್ದ ಅವರು ಶೀಘ್ರವಾಗಿ ಅಲ್ಲಿಂದ ತೆರಳಿರುವದು ಸಂವಿಧಾನ ಹಾಗೂ ೭ ಕೋಟಿ ಕನ್ನಡಿಗರಿಗೆ ಮಾಡಿದ ಅವಮಾನವಾಗಿದೆ. ದೇಶದಲ್ಲಿ ಬಿಜೆಪಿ ಹೊರತುಪಡಿಸಿದ ರಾಜ್ಯಗಳಲ್ಲಿ ರಾಜ್ಯಪಾಲರು ಕೇಂದ್ರ ಸರಕಾರದ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆ. ಯಾರದ್ದೆ ಸರಕಾರದಲ್ಲಿ ಈ ರೀತಿ ರಾಜ್ಯಪಾಲರು ನಡೆದುಕೊಳ್ಳಬಾರದು. ಸಂವಿಧಾನಿಕ ಹುದ್ದೆಯಲ್ಲಿರುವವರು ಸಂವಿಧಾನದ ವಿಧಿ ನಿಯಮಗಳಂತೆ ನಡೆದುಕೊಳ್ಳಬೇಕು ಎಂದು ಹೇಳಿದರು


