ಬೆಂಗಳೂರು: ಪಹಲ್ಗಾಮ್ ದಾಳಿಯ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ ಇಂದಿರಾಗಾಂಧಿ ಮಾದರಿಯಲ್ಲಿ ಇಂದು ಪಾಕಿಸ್ತಾನಕ್ಕೆ ಪಾಠ ಕಲಿಸೋ ಅಗತ್ಯವಿದೆ ಎಂದು ಸಚಿವ ಎಂಬಿ ಪಾಟೀಲ್ ತಿಳಿಸಿದರು. ನಾವೆಲ್ಲಾ ಜೊತೆಯಾಗಿ ಇರುವ ಕಾಲವಾಗಿದೆ.ಇಡೀ ದೇಶ ಒಂದಾಗಬೇಕು. ಚುನಾವಣೆ, ಪಕ್ಷ ಅವೆಲ್ಲ ಬೇರೆ. ದೇಶದ ರಕ್ಷಣೆ ಭದ್ರತೆಗೆ ಎಲ್ಲ ರೀತಿಯ ತ್ಯಾಗ ಮಾಡಬೇಕು ಎಂದು ಕರೆ ಕೊಟ್ಟರು
ದೇಶಕ್ಕಾಗಿ 140 ಕೋಟಿ ಜನರ ಬೆಂಬಲ ಇದೆ. ನಮ್ಮ ಜನರ ರಕ್ಷಣೆ ದೇಶದ ರಕ್ಷಣೆ ಗೆ ಎಲ್ಲರ ಬೆಂಬಲ ಇದೆ. ದೇಶ ಪ್ರಥಮ, ಪಕ್ಷ ನಂತರವಾಗಿದೆ.ಯಾವುದೇ ಕ್ರಮಗಳನ್ನು ನಿರ್ಣಯ ಸರ್ಕಾರ ತೆಗೆದುಕೊಂಡರೂ ಅದಕ್ಕೆ ಬೆಂಬಲವಿದೆ ಎಂದರು.ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ಸ್ಪಷ್ಟವಾಗಿ ಹೇಳಿದ್ದಾರೆ. ನಮ್ಮ ಸಿಎಂ ಸಿದ್ದರಾಮಯ್ಯ ಹಾಗೂ ಸಚಿವರು ಎಲ್ಲರೂ ಸ್ಪಷ್ಟಪಡಿಸಿದ್ದಾರೆ. ಕೇಂದ್ರ ಸರ್ಕಾರದ ಎಲ್ಲ ಮಾರ್ಗಸೂಚಿ ಡೈರೆಕ್ಷನ್ ಕೂಡ ಫಾಲೋ ಮಾಡುತ್ತೇವೆ ಎಂದರು.