ವೈಯಕ್ತಿಕ ರಾಜಕಾರಣ ನನ್ನದಲ್ಲ, ಲೋಕ ಕದನದ ಉತ್ತರಕ್ಕಾಗಿ ಕಾಯುತ್ತಿದ್ದೇವೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

Ravi Talawar
ವೈಯಕ್ತಿಕ ರಾಜಕಾರಣ ನನ್ನದಲ್ಲ, ಲೋಕ ಕದನದ ಉತ್ತರಕ್ಕಾಗಿ ಕಾಯುತ್ತಿದ್ದೇವೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
WhatsApp Group Join Now
Telegram Group Join Now

ಬೆಳಗಾವಿ,ಏ.02: ನಾನು ವೈಯಕ್ತಿಕ ರಾಜಕಾರಣ ಮಾಡುವಷ್ಟು ಸಣ್ಣವಳಲ್ಲ ಎಂದು ಬಿಜೆಪಿಯವರ ಸೋಶಿಯಲ್ ಮೀಡಿಯಾ ಆರೋಪದ ಬಗ್ಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿರುಗೇಟು ನೀಡಿದರು.

ಲೋಕಸಭೆ ಚುನಾವಣೆಯ ಫಲಿತಾಂಶದ ನಂತರ ಶೆಟ್ಟರ್ ಕೇಂದ್ರ ಸಚಿವರಾಗುತ್ತಾರೆ ಆಗ ಕಾಂಗ್ರೆಸ್‌ನವರೇ ಅಡ್ರೆಸ್ ಹುಡುಕಿಕೊಂಡು ಬರುತ್ತಾರೆ ಎಂದು ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದ ಮಾತಿಗೆ ನಾವೂ ಫಲಿತಾಂಶಕ್ಕಾಗಿ ಕಾಯುತ್ತಿದ್ದೇವೆ ಯಾರು ಯಾರ ಅಡ್ರೆಸ್ ಹುಡುಕಿಕೊಂಡು ಹೋಗುತ್ತಾರೋ ನೋಡೋಣ ಅಂತ ಸಚಿವೆ ಟಾಂಗ್ ಕೊಟ್ಟರು.

ಬಿಜೆಪಿಯವರು ಅವರ ತಂತ್ರ ಅನುಸರಿಸುತ್ತಿದ್ದಾರೆ ನಾವು ನಮ್ಮ ತಂತ್ರ ಅನುಸರಿಸುತ್ತಿದ್ದೇವೆ. ಎಂದ ಸಚಿವೆ ಹೆಬ್ಬಾಳ್ಕರ್ ಮಾತಿಗೆ ಅಭ್ಯರ್ಥಿ ಮೃಣಾಲ್ ಹೆಬ್ಬಾಳ್ಕರ್ ಧ್ವನಿಗೂಡಿಸಿದರು. ಅವರೆಲ್ಲರೂ ಯಾವುದ್ಯಾವುದೋ ತಂತ್ರಗಾರಿಕೆ ಎದುರಿಸುತ್ತಿದ್ದಾರೆ. ನಮ್ಮ ವಿರುದ್ಧ ಗುಪ್ತ ಸಭೆಗಳನ್ನು ಕೈಗೊಂಡು ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ ನಾವು ಬಹಿರಂಗ ಪ್ರಚಾರದ ಜೊತೆಗೆ ಸೌಮ್ಯವಾಗಿ ಚುನಾವಣೆಯನ್ನು ಎದುರಿಸುತ್ತಿದ್ದೇವೆ ಎಂದರು.

ಬಿಜೆಪಿಯವರ ತಂತ್ರಗಾರಿಕೆ, ಅಪಪ್ರಚಾರಕ್ಕೆ ಕೆಲವೇ ದಿನಗಳಲ್ಲಿ ಕ್ಷೇತ್ರದ ಮತದಾರರೇ ತಕ್ಕ ಉತ್ತರವನ್ನು ನೀಡುತ್ತಾರೆ ಎಂದು ಬೆಳಗಾವಿ ಲೋಸಭಾ ಅಭ್ಯರ್ಥಿ ಮೃಣಾಲ್ ಹೆಬ್ಬಾಳ್ಕರ್ ಹೇಳಿದರು.

WhatsApp Group Join Now
Telegram Group Join Now
Share This Article