ಬೆಳಗಾವಿ: ಜಿಲ್ಲೆಯಲ್ಲಿ ಭಾಷೆಗೆ ಸಂಬಂಧಿಸಿದ ಎಲ್ಲ ತಂಟೆ ತಗಾದೆಗಳನ್ನು ತಮ್ಮ ಸರ್ಕಾರ ಕಿತ್ತುಹಾಕಿದೆ, ಯಾರೋ ನಾಲ್ಕೈದು ಪುಂಡರು ಕರ್ತವ್ಯನಿರತ ಕಂಡಕ್ಟರ್ ಮೇಲೆ ಹಲ್ಲೆ ನಡೆಸಿದಾಕ್ಷಾಣ ಅದು ಭಾಷೆಗೆ ಸಂಬಂಧಿಸಿದ ವಿವಾದ ಅಲ್ಲ, ಭಾಷೆಯ ಹೆಸರಲ್ಲಿ ರಾಜಕೀಯದ ಬೇಳೆ ಬೇಯಿಸಿಕೊಳ್ಳುವುದನ್ನು ತಾನು ಖಂಡಿಸುತ್ತೇನೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು. ತಾನು ಪ್ರತಿನಿಧಿಸುವ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಬಹಳಷ್ಟು ಜನ ಮರಾಠಿ ಭಾಷಿಕರಿದ್ದಾರೆ, ಅವರೆಲ್ಲ ಕನ್ನಡ ತನಗೆ ವೋಟು ನೀಡಿ ಗೆಲ್ಲಿಸಿದ್ದಾರೆ, ಅವರೆಲ್ಲ ಕನ್ನಡ ಮತ್ತು ಕನ್ನಡಿಗರ ವಿರೋಧಿಗಳು ಅಂತ ಹೇಳಲಾದೀತೇ ಎಂದು ಸಚಿವೆ ಹೇಳಿದರು.