ಡಾ.ಹೆಬ್ಬಾಳಕರ್ಸ್ ಕ್ಲಿನಿಕ್ ಆರಂಭ ಉದ್ಘಾಟಿಸಿ ಶುಭ ಹಾರೈಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

Ravi Talawar
ಡಾ.ಹೆಬ್ಬಾಳಕರ್ಸ್ ಕ್ಲಿನಿಕ್ ಆರಂಭ  ಉದ್ಘಾಟಿಸಿ ಶುಭ ಹಾರೈಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್
WhatsApp Group Join Now
Telegram Group Join Now
ಬೆಳಗಾವಿ: ಡಾ. ಹಿತಾ ಮೃಣಾಲ್ ಹೆಬ್ಬಾಳಕರ್ ಅವರು ಆರಂಭಿಸಿರುವ ಸ್ಕಿನ್ ಆ‌್ಯಂಡ್ ಹೇರ್ ಕೇರ್ ಕ್ಲಿನಿಕ್ ನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಭಾನುವಾರ ಸಂಜೆ  ಉದ್ಘಾಟಿಸಿದರು.
ಕಾಲೇಜು ರಸ್ತೆಯ ಹೋಟೆಲ್ ಸನ್ಮಾನ್ ಹಿಂಭಾಗದಲ್ಲಿರುವ ದಾಸಪ್ಪ ಶಾನಭಾಗ್ ಎಂಪೈರ್ ನಲ್ಲಿ ಕ್ಲಿನಿಕ್ ಆರಂಭವಾಗಿದೆ. ಹಿತಾ ಅವರು ಬಹಳಷ್ಟು ಅಧ್ಯಯನ ಮಾಡಿದ್ದು, ಅತ್ಯಾಧುನಿಕ ಯಂತ್ರೋಪಕರಣಗಳನ್ನು ತರಿಸಿದ್ದಾರೆ. ನೂತನ ಕ್ಲಿನಿಕ್ ಬೆಳಗಾವಿ ಹಾಗೂ ಉತ್ತರ ಕರ್ನಾಟಕ ಭಾಗದ ಜನರ ಆರೋಗ್ಯ ಕಾಳಜಿ ಇಟ್ಟುಕೊಂಡು ಕೆಲಸ ಮಾಡಲಿದ್ದು, ಸಾರ್ವಜನಿಕರು ಇದರ ಪ್ರಯೋಜನ ಪಡೆಯಬೇಕೆಂದು ವಿನಂತಿಸುತ್ತೇನೆ. ಕ್ಲಿನಿಕ್ ಯಶಸ್ವಿಯಾಗಿ ಮುನ್ನಡೆಯಲಿ, ಡಾ. ಹಿತಾ ಅವರು ಕಟ್ಟಿಕೊಂಡಿರುವ ಕನಸುಗಳು ನನಸಾಗಲಿ ಎಂದು ಲಕ್ಷ್ಮೀ ಹೆಬ್ಬಾಳಕರ್ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಮೃಣಾಲ್ ಹೆಬ್ಬಾಳಕರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article