5 ಲಕ್ಷ ರೂ. ಪರಿಹಾರ ವಿತರಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

Pratibha Boi
5 ಲಕ್ಷ ರೂ. ಪರಿಹಾರ ವಿತರಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್
WhatsApp Group Join Now
Telegram Group Join Now
ಬೆಳಗಾವಿ : ಕೆಲಸದ ವೇಳೆ ವಿದ್ಯುತ್ ಪ್ರವಹಿಸಿ ಮೃತಪಟ್ಟಿದ್ದ ಯುವಕನ ಕುಟುಂಬಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಗುರುವಾರ ಪರಿಹಾರ ವಿತರಿಸಿದರು.
 ತುಮ್ಮರಗುದ್ದಿ ಗ್ರಾಮದ ಲಕ್ಷ್ಮಣ ಕೆಂಪದಿನ್ನಿ ಇವರ ಮಗ ಸಾಯಿನಾಥ್‌ ಕೆಲವು ದಿನಗಳ ಹಿಂದೆ ಗುತ್ತಿಗೆ ಆಧಾರದ ಮೇಲೆ ವಿದ್ಯುತ್ ಕೆಲಸಕ್ಕೆ ತೆರಳಿದ ವೇಳೆ ವಿದ್ಯುತ್ ತಂತಿ ಪ್ರವಹಿಸಿ ಮೃತಪಟ್ಟಿದ್ದ. ಈ ಹಿನ್ನೆಲೆಯಲ್ಲಿ ವ್ಯಕ್ತಿಯ ಕುಟುಂಬಕ್ಕೆ 5 ಲಕ್ಷ ರೂ,ಗಳ ಚೆಕ್ ನ್ನು ಹಸ್ತಾಂತರಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ಕುಟುಂಬಸ್ಥರಿಗೆ ಧೈರ್ಯ ತುಂಬಿದರು.
ಈ ವೇಳೆ ಶೇಖರ್ ಹೊಸೂರಿ, ಶಂಕರಗೌಡ ಪಾಟೀಲ, ಕಲ್ಲಪ್ಪ ಸುತಗಟ್ಟಿ, ಬಾಳಪ್ಪ ಸಿನಗಿ, ಸತ್ಯಪ್ಪ ನಂದ್ಯಾಗೋಳ, ಬಸುನಿ ಪಾಟೀಲ, ವಿಲ್ಸನ್ ಮಹಾರ್, ಮಲ್ಲಪ್ಪ ಗೋಸಾವಿ, ಶೇಖರ್ ಸಿನಗಿ, ಶಿವಾಜಿ ತಳವಾರ್, ಬಾಳಪ್ಪ ಯದ್ದಲಗುಡ್ಡ ಇದ್ದರು.
WhatsApp Group Join Now
Telegram Group Join Now
Share This Article