ಜಮಖಂಡಿ; ಶೈಕ್ಷಣಿಕವಾಗಿ ಮುಸ್ಲಿಂ ಸಮಾಜ ಹಿಂದಿದ್ದು ಲೌಕಿಕ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಬೇಕು ಎಂದು ವಸತಿ, ವಕ್ಫ್, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಸಚಿವ ಜಮೀರ ಅಹಮದ್‌ಖಾನ್ ಹೇಳಿದರು. ಗುರುವಾರ ಸಂಜೆ ನಗರದ ಎಪಿಜೆ ಅಬ್ದುಲ್ ಕಲಾಂ ಶಾಲೆಯ 18ನೇ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮುಸಲ್ಮಾನ ಸಮಾಜದ ಹೆಚ್ಚು ಮಕ್ಕಳು ಮದರಿಸ್ಸಾಗಳಲ್ಲಿ ಧಾರ್ಮಿಕ ಶಿಕ್ಷಣ ಪಡೆಯುತ್ತಿದ್ದಾರೆ, ಅದರ ಜೊತೆಗೆ ಶಾಲಾ ಶಿಕ್ಷಣ ಪಡೆಯಬೇಕು ಅಂದರೆ ಸರ್ಕಾರಿ ನೌಕರಿ ಸೇರಿದಂತೆ ಇತರ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು ಎಂದು ತಿಳಿಸಿದರು. ಬಿಜೆಪಿ ಹಾಗೂ ಕಾಂಗ್ರೆಸ್ – ಜೆಡಿಎಸ್‌ನ ಸಮಿಶ್ರ ಸರ್ಕಾರದ ಅವಧಿಯಲ್ಲಿ ಅತಿ ಕಡಿಮೆ ಅನುದಾನ ವಿತ್ತು ಸಧ್ಯ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು 4500 ಕೋಟಿಗೂಗಳ ಅನುದಾನವನ್ನು ಅಲ್ಪಸಂಖ್ಯಾತರ ಅಭಿವೃದ್ಧಿಗೆ ನೀಡಿದ್ದಾರೆ. ಆ ಪೈಕಿ 2900 ಕೋಟಿ ರೂಗಳನ್ನು ಶಿಕ್ಷಣಕ್ಕೆ ಬಳಸಲಾಗುತ್ತಿದೆ. ಪ್ರಾಥಮಿಕ 1 ರಿಂದ 7ನೇ ತರಗತಿ, ಪ್ರೌಢ 8 ರಿಂದ 10ನೇ ತರಗತಿ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ. ಜೋತೆಗೆ ರಾಜ್ಯದ 100 ಉರ್ದು ಮಾಧ್ಯಮದ ಶಾಲೆಗಳಿಗೆ ತಲಾ 5ಕೋಟಿ ರೂ ಅನುದಾನ ನೀಡಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಮುಸ್ಲಿಂ ಸಮಾಜದ ಬಡ ಮಕ್ಕಳು ಹಣದ ಕೊರತೆ ಯಿಂದಾಗಿ ಶಿಕ್ಷಣ ಮೊಟಕು ಗೊಳಿಸುತ್ತಿದ್ದು ಅಂಥಹ ಪ್ರತಿಭಾವಂತ ಮಕ್ಕಳಿಗೆ ಉನ್ನತ ಶಿಕ್ಷಣ ನೀಡಲು ಸರ್ಕಾರ ಮುಂದಾಗಿದೆ ಎಂದು ಹೇಳಿದರು. 5 ಲಕ್ಷ ಮಕ್ಕಳು ಇದರ ಲಾಭ ಪಡೆಯುತ್ತಿದ್ದಾರೆ. ಕರ್ನಾಟಕದ ಹಜ್ ಕ್ಯಾಂಪ್‌ನಲ್ಲಿ ಐಎಎಸ್, ಐಪಿಎಸ್ ತರಬೇತಿ ನೀಡಲಾಗುತ್ತಿದ್ದು, ಕಳೆದ ವರ್ಷ 107 ಜನ ಮಕ್ಕಳು ಸರ್ಕಾರಿ ಉದ್ಯೋಗ ಪಡೆದುಕೊಂಡಿದ್ದಾರೆ. ವಿದೇಶಗಳಲ್ಲಿ ಹೆಚ್ಚಿನ ವ್ಯಾಸಾಂಗ ಮಾಡಲು ಇಚ್ಚಿಸುವ ಮಕ್ಕಳಿಗೆ 30 ಲಕ್ಷದ ವರೆಗೆ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ ಈ ಎಲ್ಲ ಯೋಜನೆಗಳ ಸದುಪಯೋಗ ಪಡಿಸಿಕೊಂಡು ಸಮಾಜ ಮುಖ್ಯ ವಾಹಿನಿಗೆ ಬರಬೇಕು. ರಾಜ್ಯದ ಸಾವಿರ ಜನ ಮುಸಲ್ಮಾನ ಸಮಾಜದ ಆಟೋ ಡ್ರೈವರಗಳಿಗೆ ಸರ್ಕಾರ ಹೊಸ ಆಟಟೋಗಳನ್ನು ಖರೀದಿಸಲು 3 ಲಕ್ಷರುಗಳ ಸಬ್‌ಸೀಡಿ ನೀಡಿದ್ದೇವೆ ಎಂದು ತಿಳಿಸಿದರು. ಜಮಖಂಡಿಯ ವಿದ್ಯಾರ್ಥಿ ಜಿಶಾನ್ ಪಠಾಣ 10ನೇ ತರಗತಿಯಲ್ಲಿ ಶೇ.99 ರಷ್ಟು ಅಂಕಗಳನ್ನು ಪಡೆದಿದ್ದು ವಿದ್ಯಾರ್ಥಿಗೆ 1 ಲಕ್ಷರೂಗಳ ಆರ್ಥಿಕ ಸಹಾಯ ನೀಡಿದರು. ಶಾಲೆಯ ಅಧ್ಯಕ್ಷ ಸಮೀರ ಕಂಗನೊಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಪಿಜೆ ಅಬ್ದುಲ್ ಕಲಾಮ್ ಶಾಲೆಯ ಮಕ್ಕಳು ಉನ್ನತ ಶಿಕ್ಷಣ ಪಡೆದಿದ್ದಾರೆ. 18 ವರ್ಷಗಳಿಂದ ಶಾಲೆ ನಡೆದುಕೊಂಡು ಬಂದಿದೆ. ಎಂಬಿಬಿಎಸ್, ಬಿಇ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ನಮ್ಮ ಶಾಲೆಯ ಮಕ್ಕಳು ಸಾಧನೆ ಮಾಡಿದ್ದಾರೆ ಎಂದು ಹೇಳಿದರು. ಶಿಕ್ಷಣ ಸಂಸ್ಥೆಯ ವತಿಯಿಂದ ಬಿಎಎಂಎಸ್ ಮೆಡಿಕಲ್ ಕಾಲೇಜು, ನೂರು ಬೆಡ್‌ಗಳ ಆಸ್ಪತ್ರೆ ಪ್ರಾರಂಭಿಸಲು ಉದ್ದೇಶಿಸಲಾಗಿದೆ. ಆ ಕಾಲೇಜಿಗೆ ಸಚಿವ ಜಮೀರ ಅಹಮದ್ ಖಾನ್ ಅವರ ಹೆಸರನ್ನು ಇಡುವದಾಗಿ ಹೇಳಿದರು. ಓಲೆ ಮಠದ ಆನಂದ ದೇವರು, ಶಾಲೆಯ ಸಂಸ್ಥಾಪಕ ಅಧ್ಯಕ್ಷ ಹಾಜಿ ಜಿಲಾಹಿ ಕಂಗನೊಳ್ಳಿ, ಮಾಜಿ ಶಾಸಕ ಆನಂದ ನ್ಯಾಮಗೌಡ, , ವಕ್ಫ್‌ಬೋಲ್ಡನ ಆಯ್ಕೆ ಸಮಿತಿಯ ಅಧ್ಯಕ್ಷ ಕೆ. ಅನ್ವರ ಬಾಷಾ, ಡಿಎಸ್‌ಪಿ ಸೈಯದ್ ರೋಶನ್ ಜಮೀರ, ಶಾಲಾ ಆಡಳಿತ ಮಂಡಲಿಯ ಸದಸ್ಯರು ವೇದುಕೆಯಲ್ಲಿದ್ದರು.


