ಪ್ರತಿ ಜಿಲ್ಲೆಗೂ ವಿದ್ಯಾರ್ಥಿಗಳಿಗೆ ಉಚಿತ ವಸತಿ ನಿಲಯ ನಿರ್ಮಾಣ: ಸಚಿವ ಈಶ್ವರ ಖಂಡ್ರೆ 

Pratibha Boi
ಪ್ರತಿ ಜಿಲ್ಲೆಗೂ ವಿದ್ಯಾರ್ಥಿಗಳಿಗೆ ಉಚಿತ ವಸತಿ ನಿಲಯ ನಿರ್ಮಾಣ: ಸಚಿವ ಈಶ್ವರ ಖಂಡ್ರೆ 
WhatsApp Group Join Now
Telegram Group Join Now

ಪ್ರತಿ ಜಿಲ್ಲೆಗೂ ವಿದ್ಯಾರ್ಥಿಗಳಿಗೆ ಉಚಿತ ವಸತಿ ನಿಲಯ ನಿರ್ಮಾಣ: ಸಚಿವ ಈಶ್ವರ ಖಂಡ್ರೆ

ಬೆಳಗಾವಿ: ಡಾ. ಪ್ರಭಾಕರ ಕೋರೆ ಅವರ ಕೃಪೆಯಿಂದ  ಬಡ ವಿದ್ಯಾರ್ಥಿಗಳಿಗೆ ಉಚಿತವಾದ ವಸತಿ ನಿಲಯ ನಿರ್ಮಾಣವಾಗಿದ್ದು, ಇದರಿಂದ ಪ್ರೇರಣೆಯಾಗಿ ಈಗ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾವೂ ಪ್ರತಿ ಜಿಲ್ಲೆಗೂ ಸಮುದಾಯದಿಂದ ಬಡ ವಿದ್ಯಾರ್ಥಿಗಳಿಗೆ ಉಚಿತವಾಗಿ ಉತ್ತಮವಾದ ವಸತಿ ನಿಲಯವನ್ನು ಸ್ಥಾಪಿಸಲು ನಾವು ಪ್ರಯತ್ನಿಸುತ್ತವೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಭರವಸೆ ನೀಡಿದರು.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ಜಿಲ್ಲಾ ಘಟಕ ಹಾಗೂ ವೀರಶೈವ ಲಿಂಗಾಯತ ಮಹಿಳಾ ವಸತಿ ಗೃಹ ಕ್ಷೇಮಾಭಿವೃದ್ಧಿ ಸಂಘದಿಂದ ಇಲ್ಲಿಯ ಸುಭಾಸ ನಗರದಲ್ಲಿ ನಿರ್ಮಾಣಕೊಂಡಿರುವ ಲಿಂಗೈಕ್ಯ ಶರಣೆ ಅನ್ನಪೂರ್ಣ ಬಸಲಿಂಗಪ್ಪ ಬೆಲ್ಲದ-ಕಬ್ಬೂರ ವೀರಶೈವ ಲಿಂಗಾಯತ ವಿದ್ಯಾರ್ಥಿನಿಯರ ಉಚಿತ ವಸತಿ ನಿಲಯಯವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಈಗಾಗಲ್ಲೇ ಬೆಂಗಾಳೂರಿನಲ್ಲಿ ವಸತಿನಿಲಯ ನಿರ್ಮಾಣಕ್ಕಾಗಿ ಸ್ಥಳವನ್ನು ಖರಿದಿ ಮಾಡಲಾಗಿದ್ದು, ಅದರ ಕಾರ್ಯ ಶ್ರೀಘ್ರವೇ ಕೈಗೊಳ್ಳುವುದು. ಇದಕ್ಕೆ ಲಿಂಗಾಯತ ಸಮುದಾಯ ಕೈಜೊಡಿಸಿದೆ. ಎಲ್ಲರೂ ಅಭಿವೃದ್ಧಿಗೆ ಸಹಾಯ ಮಾಡುತ್ತಿರುವುದರಿಂದ ಸಮುದಾಯ ಅಭಿವೃದ್ಧಿ ಅತ್ತ ಸಾಗುತ್ತದೆ. ಹೀಗೆ ಒಗ್ಗಟ್ಟಾಗಿ ಕಾರ್ಯ ಮಾಡಬೇಕು ಎಂದು ಅವರು ಹೇಳಿದರು.

ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಮಾತನಾಡಿ, ಬಡ ಮಕ್ಕಳಿಗೆ ಎಳಿಗೆಗಾಗಿ ಬಿ.ಎಸ್‌. ಯಡಿಯೂರಪ್ಪ ಸಾಕಷ್ಟು ಸಹಾಯ ಮಾಡಿದ್ದಾರೆ. ವೀರಶೈವ ಲಿಂಗಾಯತ ಸಮುದಾಯದ ವಿದ್ಯಾರ್ಥಿಗಳಿಗೆ  ಉಚಿತವಾಗಿ ಹಾಸ್ಟೆಲ್‌ಗಳು ನಿರ್ಮಾಣ ಮಾಡಿ ಕೊಡುಗೆ ನೀಡಿದ್ದಾರೆ. ಅವರು ಅಂದು 2 ಕೋಟಿಯ ಜಾಗ ಕೇವಲ 24 ಲಕ್ಷಕ್ಕೆ ಒದಗಿಸಿದ ಮಹಾನ್‌ ವ್ಯಕ್ತಿ. ಆದ್ದರಿಂದ  ಅವರಿಗೆ ಈ ಸಂದರ್ಭದಲ್ಲಿ ಕೃತಜ್ಞತೆ ಸಲ್ಲಿಸಬೇಕು ಎಂದು ಹೇಳಿದರು.

ಬೆಳಗಾವಿ ಗಂಡುಮೆಟ್ಟಿದ ನಾಡು. ಕಿತ್ತೂರು ರಾನಿ ಚೆನ್ನಮ್ಮ, ಬೆಳವಡಿ ಮಲ್ಲಮ್ಮ ಬ್ರಿಟಿಷ್‌ರ ವಿರುದ್ಧ ಹೊರಾಡಿ ನಾಡಿಗೆ ಕೀರ್ತಿ ತಂದ ಮಹಾನ್‌ ಮಹಿಳೆಯರು ನಮ್ಮ ನೆಲದಲ್ಲಿ ಜನಿಸಿದರು ಎನ್ನುವುದು ನಮಗೆ ಹೆಮ್ಮೆ. ಇವರ ಸಾಲಿನಲ್ಲಿ ಅನೇಕ ಮಹಿಳೆಯರು ಸಾಗಬೇಕೆಂದು ಹೆಣ್ಣುಮಕ್ಕಳಿಗೆ ಉನ್ನತ ಶಿಕ್ಷಣ ನೀಡಲು ಶ್ರಮಿಸೋಣ. ಇದಕ್ಕಾಗಿ ಮಹೇಶ ಬೆಲ್ಲದ ಅವರು 1 ಕೋಟಿ ರೂ ದಾನ ಮಾಡಿದ್ದಾರೆ. ಹೀಗೆ ಮಹಾನ್‌ ವ್ಯಕ್ತಿಗಳು ಕೈಜೊಡಿಸಿದರೆ ಹೆಣ್ಣಮಕ್ಕಳು ಸಾಧನೆ ಮಾಡಲು ಸಾದ್ಯವಾಗುತ್ತದೆ ಎಂದರು.

ಪರಿಚತ್‌ ಸಭಾಪತಿ ಮಾತನಾಡಿ, ನಾವುಗಳು ಒಳಪಂಗಡ ಬಿಡುವವರೆಗೂ ಉದ್ಧಾರವಾಗುವುದಿಲ್ಲ. ಒಂದು ಕಾಲದಲ್ಲಿ ಸಮುದಾಯದ ಶಾಸಕರ ಒಗ್ಗಟ್ಟಿನಿಂದ ಸಕಾರ ಮೀಸಕಾಡುತ್ತಿರಲಿಲ್ಲ. ಇವತ್ತು ಸಮುದಾಯ ದೊಡ್ಡದಾಗಿದ್ದರೂ ಶಕ್ತಿ ಇಲ್ಲವಂತಾಗಿದೆ ಎಂದು ಬೇಸರ ವ್ಯಕ್ತ ಪಡಿಸಿದರು.

ಈ ಕಾರ್ಯಕ್ರಮದಲ್ಲಿ ಕಾರಂಜಿಮಠದ ಗುರುಸಿದ್ಧ ಸ್ವಾಮೀಜಿ ಸಾನ್ನಿಧ್ಯ ವಹಿಸಿದರು. ಸಚಿವೆ ಎಂ.ಬಿ. ಪಾಟೀಲ, ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌, ಮಹಾಸಭಾ ರಾಜ್ಯಾಧ್ಯಕ್ಷ ಶಂಕರ ಬಿದರಿ, ಮಾಜಿ ಸಂಸದ ರಮೇಶ ಕಾತ್ತಿ ವಿಧಾನ ಪಾರಿಷತ್‌ ಸದಸ್ಯ ಡಾ.ಬಿ.ಜಿ. ಪಾಟೀಲ, ಶಾಸಕ ರಾಜು ಕಾಗೆ, ಮಹಾಂತೇಶ ಕೌಜಲಗಿ. ಬಿ.ಆರ್.ಪಾಟೀಲ ಯಾವಗಲ್‌, ಎಂ.ವೈ. ಪಾಟೀಲ, ಅವರೇಗೌಡ ಬಯ್ಯಾಪುರ, ಲತಾ ಮಲ್ಲಿಕಾರ್ಜುನ, ಹನುಮಂತ ನಿರಾನಿ, ಶೈಲೇಂದ್ರ ಬೆಲ್ಲಾಳೆ, ಶಶಿಲ್‌ ನಮೋಸಿ, ಅಲ್ಲಮಪ್ರಭು ಪಾಟೀಲ, ಗಣೇಶ ಹುಕ್ಕೇರಿ, ಡಾ ಪ್ರೀತಿ ಕೋರೆ ಸೇರಿದಾಂತೆ ಅನೇಕರು ಇದ್ದರು.

ಕೋಟ್‌….

ವೀರಶೈವ ಲಿಂಗಾಯಾತ ಸಮುದಾಯಕ್ಕಾಗಿ ಡಾ.ಪ್ರಭಾಕರ ಕೋರೆಯವರು ತುಂಬಾ ಶ್ರಮೀಸಿದ್ದಾರೆ. ಅದರ ಪ್ರತಿಫಲವಾಗಿ ಇದು ವಿದ್ಯಾರ್ಥಿಗಳಿಗೆ ಉಚಿತ ವಸತಿ ನಿಲಯ ನಿರ್ಮಾಣ ಮಾಡುಲು ಸಹಾಯ ಮಾಡಿದ್ದಾರೆ. ಇದು ಅವರ ಬಹು ದಿನಗಾಳ ಕನಸು. ಇಂದು ನನಸಾಗಿದೆ.

ಬಿ. ವೈ. ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷರು.

 

WhatsApp Group Join Now
Telegram Group Join Now
Share This Article