ವೃದ್ದಾಶ್ರಮಕ್ಕೆ ಟಿವಿ, ಗೀಜರ್ ನೀಡಿದ ಸಚಿವೆ ಹೆಬ್ಬಾಳಕರ್

Pratibha Boi
ವೃದ್ದಾಶ್ರಮಕ್ಕೆ ಟಿವಿ, ಗೀಜರ್ ನೀಡಿದ ಸಚಿವೆ ಹೆಬ್ಬಾಳಕರ್
WhatsApp Group Join Now
Telegram Group Join Now
ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಅವರು, ಬೆಳಗಾವಿಯ ಬಸವನ ಕುಡಚಿಯ ದೇವರಾಜ ಅರಸ ಕಾಲೋನಿಯಲ್ಲಿರುವ ಶ್ರೀಮತಿ ಚನ್ನಮ್ಮ ಬಸವಂತಯ್ಯಾ ಹಿರೇಮಠ ವೃದ್ಧಾಶ್ರಮಕ್ಕೆ ವೈಯಕ್ತಿಕವಾಗಿ ಟಿ.ವಿ ಹಾಗೂ ವಾಟರ್ ಗೀಜರ್ ನ್ನು ಕೊಡುಗೆಯಾಗಿ ನೀಡಿದರು.
ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಅವರು ಇತ್ತೀಚೆಗೆ ವೃದ್ದಾಶ್ರಮಕ್ಕೆ  ಭೇಟಿ ನೀಡಿದ್ದ ವೇಳೆ ಕೊಟ್ಟ ಭರವಸೆಯಂತೆ ಬುಧವಾರ ಸ್ವ ಗೃಹದಲ್ಲಿ  ಪರಿಕರಗಳನ್ನು ಸಚಿವರು ಹಸ್ತಾಂತರಿಸಿದರು.
ಈ ವೇಳೆ ಮಾತನಾಡಿದ ಸಚಿವರು, ಮಾತೃ–ಪಿತೃ ಸಮಾನ ಹಿರಿಯರನ್ನು ಗೌರವಿಸಿ, ಅವರಿಗೆ ಅಗತ್ಯವಿರುವ ಸೌಲಭ್ಯಗಳನ್ನು ಒದಗಿಸುವುದು ನಮ್ಮೆಲ್ಲರ ಸಾಮಾಜಿಕ ಜವಾಬ್ದಾರಿ ಎಂದರು.
WhatsApp Group Join Now
Telegram Group Join Now
Share This Article