ಅಭಿವೃದ್ಧಿ ನೋಡಿ ಆಯ್ಕೆ ಮಾಡಿ: ಮಗ ಮೃಣಾಲ್ ಪರ ಸಚಿವೆ ಹೆಬ್ಬಾಳ್ಕರ್ ಪ್ರಚಾರ

Ravi Talawar
ಅಭಿವೃದ್ಧಿ ನೋಡಿ ಆಯ್ಕೆ ಮಾಡಿ: ಮಗ ಮೃಣಾಲ್ ಪರ ಸಚಿವೆ ಹೆಬ್ಬಾಳ್ಕರ್ ಪ್ರಚಾರ
WhatsApp Group Join Now
Telegram Group Join Now

ಬೆಳಗಾವಿ,ಮಾರ್ಚ್27: ನಗರದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಗ ಮೃಣಾಲ್ ಹೆಬ್ಬಾಳ್ಕರ್ ಪರವಾಗಿ ಭರ್ಜರಿ ಪ್ರಚಾರ ಮಾಡಿದರು. ನಗರದ ಬಹುತೇಕ ಕಡೆಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮೃಣಾಲ್ ಜೊತೆಗೂಡಿ ಮಹಿಳೆಯರು, ಕಾರ್ಮಿಕರು, ಆಟೋ ಚಾಲಕರನ್ನು ಭೇಟಿ ಮಾಡಿ ಕಾಂಗ್ರೆಸ್‌ಗೆ ಮತ ನೀಡುವಂತೆ ಮನವಿ ಮಾಡಿಕೊಂಡರು.

ಆಟೋ ಚಾಲಕರ ಜೊತೆ ಮಾತನಾಡಿದ ಸಚಿವೆ ಹಬ್ಬಾಳ್ಕರ್ ತಾಯಿಯಂತೆ ಮಗ ಅನ್ನುವುದನ್ನು ಗಮನದಲ್ಲಿಟ್ಟುಕೊಂಡು ಮತ ನೀಡಿ. ಗ್ರಾಮೀಣ ಕ್ಷೇತ್ರದಲ್ಲಿ ಬಹಳ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ. ಇದೀಗ ಇಡೀ ಜಿಲ್ಲೆಗೆ ಸೇವೆ ಮಾಡುವ ಅವಕಾಶವನ್ನು ನನ್ನ ಮಗನಿಗೆ ನೀಡಿ. ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ರಾಜ್ಯ ಮತ್ತು ದೇಶದ ಬೆಳವಣಿಗೆಗೆ ಸಹಕರಿಸಿ ಎಂದು ಮತದಾರರಲ್ಲಿ ಮನವಿ ಮಾಡಿಕೊಂಡರು.  ಪ್ರಚಾರದ ವೇಳೆಯಲ್ಲಿ ಸಚಿವೆ ಹೆಬ್ಬಾಳ್ಕರ್ ಜೊತೆಗೆ ಜಿಲ್ಲೆಯ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಭಾಗಿಯಾಗಿದ್ದರು.

WhatsApp Group Join Now
Telegram Group Join Now
Share This Article