ರೈತರ ಮನವಿ ಸ್ವೀಕರಿಸದ ಸಚಿವ ಗುಂಡೂರಾವ್‌ ಕಾರಿಗೆ ಮುತ್ತಿಗೆ

Ravi Talawar
ರೈತರ ಮನವಿ ಸ್ವೀಕರಿಸದ ಸಚಿವ ಗುಂಡೂರಾವ್‌ ಕಾರಿಗೆ ಮುತ್ತಿಗೆ
WhatsApp Group Join Now
Telegram Group Join Now
 ಹುಕ್ಕೇರಿ :9 ನಗರದಲ್ಲಿ ಇವತ್ತು ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವರಾದ ದಿನೇಶ್ ಗುಂಡೂರಾವ್ ಇವರು ತಾಲೂಕಿನ ಸಂಕೇಶ್ವರ, ಅಮ್ಮಣಗಿ, ಹುಕ್ಕೇರಿ ನಗರಗಳ ಸರ್ಕಾರಿ ಆಸ್ಪತ್ರೆಗಳಲ್ಲಿ ವಿವಿಧ ಸರಕಾರಿ  ಕಾಮಗಾರಿಗಳಿಗೆ ಉದ್ಘಾಟನೆ ನೀಡಿದರು. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ವತಿಯಿಂದ ಹುಕ್ಕೇರಿ ನಗರದ ತಾಲೂಕು ಆಸ್ಪತ್ರೆಯ ಅವ್ಯವಸ್ಥೆ ಕುರಿತು ಮಾನ್ಯ ಸಚಿವರ ಗಮನಕ್ಕೆ ತರಲು ಮನವಿ ನೀಡಲು ಮುಂದಾದಾಗ ಸಚಿವರು ತಮ್ಮ ಉದ್ಧಟತನವನ್ನು ಮೆರೆದು ರೈತರಿಗೆ ಆಗುತ್ತಿರುವ ಸಮಸ್ಯೆಯನ್ನು ಆಲಿಸದೆ ಅವರ ಮನವಿಯನ್ನು ಸ್ವೀಕರಿಸದೆ ಹೋಗಿರುವುದು ರೈತರ ಕೆಂಗಣ್ಣಿಗೆ ಕಾರಣವಾಗಿದೆ. ಸಂದರ್ಭದಲ್ಲಿ ರೈತರು ಸಚಿವರ್ ಕಾರಿಗೆ ಮುತ್ತಿಗೆ ಹಾಕಿ ತಮ್ಮ ಆಕ್ರೋಶವನ್ನು ಹೊರ ಹಾಕಿದರು  ಈ ಕುರಿತು ಮಾತನಾಡಿದ ಸಂಘಟನೆಯ ತಾಲೂಕ ಅಧ್ಯಕ್ಷರ ಸಂಜು ಹಾವನ್ನವರ ರೈತ ವಿರೋಧಿ ಆರ್ ಗುಂಡುರಾವ್ ಅವರು ಅವರ ಅವಧಿಯಲ್ಲಿ ನಿಪ್ಪಾಣಿಯ ರೈತರ ತಂಬಾಕು ಆಂದೋಲನದಲ್ಲಿ ಗೋಲಿಬಾರ್ ಮಾಡಿಸುವ ಮೂಲಕ ಅವರ ರೈತ ವಿರೋಧಿಯನ್ನು ತೋರಿದ್ದರು  ಇವತ್ತು ದಿನೇಶ್ ಗುಂಡೂರಾವ್ ಅವರು ರೈತರ ಸಮಸ್ಯೆಯ ಮನವಿಯನ್ನು ಸ್ವೀಕರಿಸದೆ ತಮ್ಮ ರೈತ ವಿರೋಧಿ ನೀತಿಯನ್ನು ತೋರಿದ್ದಾರೆ ಎಂದು 30 40 ವರ್ಷಗಳ ಹಿಂದಿನ ಕಹಿ ಘಟನೆಯನ್ನು ಮತ್ತೊಮ್ಮೆ ಸ್ಮರಿಸಿದರು  ರೈತರ ಕಷ್ಟಗಳಿಗೆ ಸ್ಪಂದಿಸದ ಸಚಿವರ ರೈತ ವಿರೋಧಿ ನೀತಿಗೆ ಧಿಕ್ಕಾರ ತಿಳಿಸಿ ತಮ್ಮ ಆಕ್ರೋಶ ಹೊರ ಹಾಕಿದರು ಅಲ್ಲದೆ ಇದು ರೈತರಿಗೆ ಮಾಡುತ್ತಿರುವ ದೊಡ್ಡ ಅನ್ಯಾಯ ಸರ್ಕಾರದ ರೈತ ವಿರೋಧಿ ನೀತಿ ಬಗ್ಗೆ ಇನ್ನು ಮುಂದೆ ರಾಜ್ಯದ ಮೂಲೆ ಮೂಲೆಗಳಲ್ಲಿ ಹೋರಾಟ ನಡೆಸುವುದಾಗಿ ಅವರು ತಿಳಿಸಿದರು.ಈ ಸಂದರ್ಭದಲ್ಲಿ ತಾಲೂಕಿನ ನೂರಾರು ಜನ ರೈತರು ಉಪಸ್ಥಿತರಿದ್ದು ಬೆಂಬಲವನ್ನು ಸೂಚಿಸಿದರು
WhatsApp Group Join Now
Telegram Group Join Now
Share This Article