ಹಾಲು ಉತ್ಪಾದನೆ ಭಾರತದ ಆರ್ಥಿಕತೆಯ ಜೀವಾಳ : ಸಿದ್ದು ಸವದಿ

Hasiru Kranti
ಹಾಲು ಉತ್ಪಾದನೆ ಭಾರತದ ಆರ್ಥಿಕತೆಯ ಜೀವಾಳ : ಸಿದ್ದು ಸವದಿ
filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 2621440;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 40;
WhatsApp Group Join Now
Telegram Group Join Now

ಮಹಾಲಿಂಗಪುರ : ಬಡತನ ಬೇಗೆಯಿಂದ ಬಸವಳಿದಿದ್ದ ಗ್ರಾಮೀಣ ಜನತೆಗೆ ಬೆಳ್ಳಿ ಬೆಳಕನ್ನು ನೀಡಿದ್ದು ಕ್ಷಿರ ಕ್ರಾಂತಿ ಇದೆ ಮುಂದೆ ಗ್ರಾಮೀಣ ಜೀವನ ಮಟ್ಟ ಸುಧಾರಣೆಗೆ ಕಾರಣವಾಗಿ ಇಂದು ಭಾರತದ ಆರ್ಥಿಕತೆಯ ಒಂದು ಭಾಗವಾಗಿದೆ. ಎಂದು ತೇರದಾಳ್ ಮತಕ್ಷೇತ್ರದ ಶಾಸಕರಾದ ಸಿದ್ದು ಸವದಿ ಹೇಳಿದರು.

ಬುದ್ನಿ ಪಿ ಡಿಯ ಮೇಟಿ ಬಂದುಗಳ ತೋಟದಲ್ಲಿರುವ ಶ್ರೀ ಮಾತಾ ಲಕ್ಕಮ್ಮಾ ದೇವಿ ದೇವಸ್ಥಾನದ ಆವರಣದಲ್ಲಿ ನೂತನವಾಗಿ ನಿರ್ಮಿಸಿದ ಮಹಿಳಾ ಹಾಲು ಉತ್ಪಾದಕರ ಸಹಕಾರಿ ಸಂಘದ ನೂತನ ಕಟ್ಟಡ ಕೇಂದ್ರವನ್ನು ರಿಬ್ಬನ್ ಕಟ್ ಮಾಡುವ ಮೂಲಕ ಉದ್ಘಾಟನೆ ನೆರವೇರಿಸಿ ಮಾತನಾಡಿ ಭಾರತದಲ್ಲಿ ಕ್ಷಿರ್ ಕ್ರಾಂತಿಯನ್ನೇ ಮಾಡಿದ ಡಾ ವರ್ಗಿಸ್ ಕುರಿಯನ್ ಅಮೇರಿಕಾದಲ್ಲಿ ವ್ಯಾಸಂಗ ಮಾಡಿ ಭಾರತಕ್ಕೆ ಹಿಂತಿರುಗಿ ಗುಜರಾತಿನ ಆನಂದ ಅನ್ನು ತಮ್ಮ ಕರ್ಮ ಭೂಮಿಯಾಗಿ ಆಯ್ಕೆ ಮಾಡಿಕೊಂಡು ಎಂದರು.
ನಂತರ ಮಾತನಾಡಿದ ಜಮಖಂಡಿ ಸಹಾಯಕ ವ್ಯವಸ್ಥಾಪಕರಾದ ಎಸ್ ಎಸ್ ಅಥಣಿ ಡೇರಿ ಮುಖಾಂತರ ಎರಡು ಹಸುಗಳು ಇರುವವನಿಗೂ, ಸಣ್ಣ ರೈತನಿಗೂ, ಅತೀ ಸಣ್ಣ ರೈತನಿಗೂ ಪ್ರತಿವಾರ ಹಣಚುಕ್ತವಾಗುವಂತೆ ಮಾಡಿದ ಕೀರ್ತಿ ಕುರಿಯನ್ ಅವರಿಗೆ ಸಲ್ಲುತ್ತದೆ ಎಂದರು.

ಚಿನ್ಮಯಾನಂದ ಸ್ವಾಮೀಜಿ : ದಿವ್ಯ ಸಾನಿಧ್ಯ ವಹಿಸಿದ ಶಿರೂರಿನ ಬ್ರಹ್ಮ ವಿದ್ಯಾಶ್ರಮದ ಪ ಪೂ ಶ್ರೀ ಚಿನ್ಮಯಾನಂದ ಸ್ವಾಮೀಜಿ ಆಶೀರ್ವಚನ ನೀಡಿ ಮನು?ನಿಗೆ ಹಾಲು ಅಮೃತ ಇದ್ದಂತೆ ಭೂಮಿಗೆ ಸೆಗಣಿ ಗೊಬ್ಬರ ಅಮೃತ ಹೈನುಗಾರಿಕೆಯಿಂದ ಮನು?ನ ಆರೋಗ್ಯದ ಜೊತೆ ಆಯು? ವೃದ್ಧಿಯಾಗುತ್ತದೆ. ಭೂಮಿಗೆ ಫಲವತತ್ತೆ ಹೆಚ್ಚುತ್ತದೆ ಇದರಿಂದ ಬದುಕು ಸುಂದರವಾಗುತ್ತದೆ. ಎಂದರು.
ಸನ್ಮಾನ : ದೇವಿ ಟ್ರಸ್ಟಿಗೆ ಧನ ಸಹಾಯ ಮಾಡಿದ ಮಲ್ಲಪ್ಪ ಕಳ್ಯಾಗೋಳ, ರಾಮಣ್ಣ ಹುಣಶೀಕಟ್ಟಿ, ಅರ್ಜುನ್ ಮೇಟಿ ದೇವಪ್ಪ ಮೇಟಿ, ಆರ್ ಎಸ್ ಪಾಟೀಲ್, ನಾಗರ್ಜುನ್ ಮೇಟಿ, ತಿಪ್ಪಣ್ಣ ಹುಣಶೀಕಟ್ಟಿ ಶ್ರೀಮತಿ ಲಕ್ಕವ್ವಾ ಮೇಟಿ, ರಾಜು ಹುಚ್ಚಣ್ಣವರ, ಮಹಾನಂದಾ ಅಂಗಡಿ, ಶಿವಲಿಂಗ ದೇಸಾಯಿ, ಲಕ್ಕಪ್ಪ ದೇಸಾಯಿ, ಶ್ರೀಮತಿ ಯಲ್ಲವ್ವಾ ದೇಸಾಯಿ, ವೇದಿಕೆ ಮೇಲಿನ ಗಣ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು.

ಈ ಸಂಧರ್ಭದಲ್ಲಿ ಮುಖಂಡರಾದ ಧರೆಪ್ಪ ಸಾಂಗ್ಲಿಕರ, ರಂಗನಗೌಡ ಪಾಟೀಲ ಮಾತನಾಡಿದರು.

ಶ್ರೀಮತಿ ಲಲಿತಾ ಅರ್ಜುನ್ ಮೇಟಿ ಅಧ್ಯಕ್ಷತೆ ವಹಿಸಿದರು. ಚಂದ್ರಶೇಖರ ಆದಬಸಪ್ಪಗೋಳ, ಲಕ್ಕಪ್ಪ ಪಾಟೀಲ, ಮಾತನಾಡಿದರು. ಮಹಾಂತೇಶ್ ಹಿಟ್ಟಿನಮಠ,ಪರಮೇಶ ಜಾಧವ ಬಸವರಾಜ ನಾಗನೂರ್, ಮಹಾದೇವ ಮಾರಾಪುರ್, ಸಂಗಪ್ಪ ಹಲ್ಲಿ.ವೇದಿಕೆ ಮೇಲೆ ಉಪಸ್ಥಿತರಿದ್ದರು.ಮುಖಂಡರಾದ ಮಹಾಲಿಂಗಪ್ಪ ಜಕ್ಕಣ್ಣವರ ಅರವಿಂದ ಮಾಲಬಸುರಿ, ಚನ್ನಪ್ಪ ಪಟ್ಟಣಶೆಟ್ಟಿ, ವೀರೇಶ ಆಸಂಗಿ,ಚಂದ್ರಪ್ಪ ದೋಣಿ, ಶ್ರೀಶೈಲ್ ಕಳ್ಯಾಗೋಳ, ಕರೆಪ್ಪ ಮೇಟಿ, ಹಣಮಂತ ಜಮಾದಾರ, ಈಶ್ವರ ಮುರಗೋಡ ಶಿವಲಿಂಗ ಟಿರ್ಕಿ, ರಫೀಕ್ ಮಾಲದಾರ, ಸಿದ್ದು ಶಿರೋಳ್, ಮಹಾಲಿಂಗ ಬಾಡಗಿ, ಪರಶು ಕೊಣ್ಣೂರ, ಜೊತೆಪ್ಪ ಕಪರಟ್ಟಿ, ಮಾಳಪ್ಪ ಕಪರಟ್ಟಿ, ನಿಂಗಪ್ಪ ಬಾಳಿಕಾಯಿ, ಶಿವಾನಂದ ಪಾಟೀಲ್, ಆನಂದ ಗಿರಡ್ಡಿ, ರಮೇಶ ಸಾಲವಾಡಗಿ ಸೇರಿ ಹಲವರು ಇದ್ದರು. ಕಾರ್ಯಕ್ರಮವನ್ನು ಪತ್ರಕರ್ತರಾದ ಜಯರಾಮ್ ಶೆಟ್ಟಿ ನಿರೂಪಿಸಿದರು, ಲಕ್ಷ್ಮಣ ಕಿಶೋರ ಸ್ವಾಗತಿಸಿ ವಂದಿಸಿದರು.

WhatsApp Group Join Now
Telegram Group Join Now
Share This Article