ನವದೆಹಲಿ: ಆರು ದಶಕಗಳ ಕಾಲ ಭಾರತೀಯ ಸೇನೆಯಲ್ಲಿ ಕಾರ್ಯ ನಿರ್ವಹಿಸಿದ ಯುದ್ಧ ವಿಮಾನ ಮಿಗ್ 21 ಇಂದು ನಿವೃತ್ತಿ ಹೊಂದುತ್ತಿದೆ. 1971ರ ಯುದ್ಧ, ಕಾರ್ಗಿ ಯುದ್ಧ ಹಾಗೂ ಆಪರೇಷನ್ ಸಿಂಧೂರ್ನಲ್ಲಿ ವಾಯು ದಾಳಿಗಳಲ್ಲಿ ಅಪ್ರತಿಮ ಸಾಮರ್ಥ್ಯ ಪ್ರದರ್ಶಿಸಿದ್ದ ಮಿಗ್ 21 ಸೇವೆಯಿಂದ ನಿವೃತ್ತಿ ಹೊಂದುತ್ತಿರುವ ಈ ಕ್ಷಣ ಭಾವನಾತ್ಮಕವಾಗಿದೆ ಎಂದು ಈಗಾಗಲೇ ಭಾರತೀಯ ವಾಯು ಸೇನೆಯ ಅನೇಕ ಹಿರಿಯರು ತಿಳಿಸಿದ್ದಾರೆ.
ಇದು ಭಾರತದ ಅತ್ಯುತ್ತಮ ಯುದ್ಧ ವಿಮಾನವಾಗಿದೆ. ಪ್ರಸ್ತುತ, ದೇಶದಲ್ಲಿ 2500 ಕ್ಕೂ ಹೆಚ್ಚು ಯುದ್ಧ ವಿಮಾನ ಪೈಲಟ್‌ಗಳು ಈ ವಿಮಾನವನ್ನು ಹಾರಿಸಲು ಅರ್ಹರಾಗಿದ್ದಾರೆ.ಮಿಗ್ 21 ಕುರಿತು: ಮಿಗ್ 21 ಯುದ್ದ ವಿಮಾನವನ್ನು ರಷ್ಯಾ ಮೊದಲ ಬಾರಿಗೆ 1959ರಲ್ಲಿ ತಯಾರಿಸಿತು. 1961ರಲ್ಲಿ ವಿಮಾನದ ತರಬೇತಿಗಾಗಿ ನಮ್ಮ ಪೈಲಟ್‌ಗಳು ರಷ್ಯಾಗೆ ತೆರಳಿದರು. ಬಳಿಕ 1963 ರಲ್ಲಿ ನಮ್ಮ ಸೇನೆಯನ್ನು ಮೊದಲು ಸೇರಿದ್ದು ಮಿಗ್ 21 ಸ್ಕ್ವಾಡ್ರನ್. ಇದಾದ ಬಳಿಕ ಹಲವು ಮಿಗ್ ವಿಮಾನಗಳು ನಮ್ಮ ಸೇನೆ ಹೊಂದಿತು. ರಷ್ಯಾ ಎಲ್ಲಾ ತಂತ್ರಜ್ಞಾನವನ್ನು ನೀಡಿದ ಬಳಿಕ ಹೆಚ್ಸಿಎಲ್ ದೇಶದಲ್ಲಿ ಈ ಮಿಗ್ ವಿಮಾನ ತಯಾರಿಸಲು ಮುಂದಾಯಿತು. ಭಾರತದಲ್ಲಿ ನಾವು 871 ಮಿಗ್ 21 ಯುದ್ದ ವಿಮಾನ ಹೊಂದಿದ್ದೇವೆ ಎಂದು ವಾಯು ಸೇನೆಯ ಹಿರಿಯ ಏರ್ ಮಾರ್ಷಲ್ ಒಪಿ ತಿವಾರಿ ತಿಳಿಸಿದ್ದಾರೆ.


