ಬಳ್ಳಾರಿ, ನ.06.: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ರಾಜ್ಯಾಧ್ಯಕ್ಷರು ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸೂಚನೆ ಮೇರೆಗೆ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಶಿಕ್ಷಕರ ಘಟಕದ ಬಳ್ಳಾರಿ ಜಿಲ್ಲಾ ಅಧ್ಯಕ್ಷರಾಗಿ ಎಂ.ಜಿ. ಅಖಿಲ್ ಅಹಮದ್ ಅವರನ್ನು ರಾಜ್ಯ ಶಿಕ್ಷಕರ ಘಟಕದ ಅಧ್ಯಕ್ಷ ಬಸವರಾಜ ಗುರಿಕಾರ ಅವರು ನೇಮಕ ಮಾಡಿ ಅದೇಶಿ ಸಿದ್ದಾರೆ.
ಬೆಂಗಳೂರು ಕೆ ಪಿ ಸಿ ಸಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಬಳ್ಳಾರಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಅಲ್ಲಂ ಪ್ರಶಾಂತ್, ಹಾಗೂ ಹಿರಿಯ ನಾಯಕರಾದ ಶ್ರೀನಿವಾಸ ರೆಡ್ಡಿ (ಹೊಸಪೇಟೆ) ಮತ್ತು ತಿಮ್ಮಯ್ಯ ಪುರ್ಲೆ, ಸತೀಶ್ ಕಾಂಡ್ರಾ ಅವರ ಸಮ್ಮುಖದಲ್ಲಿ ಅಧಿಕೃತ ಆದೇಶ ಪತ್ರ ಅಖಿಲ್ ಅಹಮದ್ ಅವರಿಗೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಎಂ.ಜಿ. ಅಖಿಲ್ ಅಹಮದ್ ಅವರು ಮಾತನಾಡಿ
“ಈ ಜವಾಬ್ದಾರಿ ನನಗೆ ನೀಡಿರುವ ರಾಜ್ಯಾಧ್ಯಕ್ಷರಾದ ಡಿ.ಕೆ. ಶಿವಕುಮಾರ್, ಶಿಕ್ಷಕರ ಘಟಕದ ರಾಜ್ಯಾಧ್ಯಕ್ಷ ಬಸವರಾಜ ಗುರಿಕಾರ ಮತ್ತು ಜಿಲ್ಲಾ ಅಧ್ಯಕ್ಷ ಅಲ್ಲಂ ಪ್ರಶಾಂತ್ ಸೇರಿದಂತೆ ಬಳ್ಳಾರಿಯ ರಾಜ್ಯಸಭಾ ಸದಸ್ಯರಾದ ನಾಸಿರ್ ಹುಸೇನ್, ಲೋಕಸಭಾ ಸಾಧ್ಯಸ್ಯರಾದ ಈ ತುಕಾರಾಂ ಮಾಜಿ ಸಚಿವ ಬಿ. ನಾಗೇಂದ್ರ, ನಗರ ಶಾಸಕರಾದ ನಾರಾ ಭರತ್ ರೆಡ್ಡಿ, ಹಾಗೂ ಹಿರಿಯ ಮುಖಂಡ ಮುಂಡರಗಿ ನಾಗರಾಜ್ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು. ಪಕ್ಷದ ನಂಬಿಕೆಗೆ ತಕ್ಕಂತೆ ಬಳ್ಳಾರಿ ಜಿಲ್ಲೆಯ ಶಿಕ್ಷಕರ ಧ್ವನಿಯನ್ನು ಸರ್ಕಾರದ ಮಟ್ಟದಲ್ಲಿ ಪ್ರಬಲವಾಗಿ ಕೇಳಿಸಿಸುವೆ. ಪಕ್ಷದ ಆಶಯಗಳು ಮತ್ತು ನಾಯಕತ್ವದ ನಿರ್ದೇಶನದಂತೆ ನಿಷ್ಠೆಯಿಂದ ಕೆಲಸ ಮಾಡುವೆ,”ಶಿಕ್ಷಕರಿಗೆ ಏನಾದರು ನನ್ನ ಅವಶ್ಯಕತೆವಿದ್ದರೆ ನನ್ನ ಮೊಬೈಲ್ ಸಂಖ್ಯೆಗೆ 97314 97869 ಕರೆ ಮಾಡಿ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ನಗರ ಮತ್ತು ತಾಲ್ಲೂಕು ಕಾಂಗ್ರೆಸ್ ಘಟಕದ ಮುಖಂಡರು, ಶಿಕ್ಷಕರ ಸಂಘದ ಕಾರ್ಯಕರ್ತರು ಹಾಗೂ ಅನೇಕ ಶಿಕ್ಷಕರು ಭಾಗವಹಿಸಿ ಅಖಿಲ್ ಅಹಮದ್ ಅವರಿಗೆ ಅಭಿನಂದನೆ ಸಲ್ಲಿಸಿದರು.


