ಬೇಸಿಗೆ ಮಳೆಗೆ ಮೆಟ್ರೋ ನಿಲ್ದಾಣಗಳು, ರಸ್ತೆಗಳು ಜಲಾವೃತ; ತೆಲಂಗಾಣದಲ್ಲಿ ಭಾರೀ ಮಳೆ

Ravi Talawar
ಬೇಸಿಗೆ ಮಳೆಗೆ ಮೆಟ್ರೋ ನಿಲ್ದಾಣಗಳು, ರಸ್ತೆಗಳು ಜಲಾವೃತ; ತೆಲಂಗಾಣದಲ್ಲಿ ಭಾರೀ ಮಳೆ
WhatsApp Group Join Now
Telegram Group Join Now

ಹೈದರಾಬಾದ್(ತೆಲಂಗಾಣ): ತೆಲಂಗಾಣದ ಗ್ರಾಮೀಣ ಪ್ರದೇಶಗಳಲ್ಲಿ ಗುರುವಾರ ಸುರಿದ ಭಾರಿ ಮಳೆಯಿದ ಭತ್ತದ ಗದ್ದೆಗಳು ಜಲಾವೃತಗೊಂಡಿವೆ. ಮಾವಿನ ತೋಟಗಳಿಗೆ ಹಾನಿಯಾಗಿದ್ದು, ಹಣ್ಣುಗಳು ನೆಲಕ್ಕುರುಳಿವೆ. ಯಾದದ್ರಿ ಭುವನಗಿರಿ, ಮೇಡ್ಚಲ್ ಮಲ್ಕಾಜ್‌ಗಿರಿ, ಮೇಡಕ್ ಮತ್ತು ಸಂಗಾರೆಡ್ಡಿ ಜಿಲ್ಲೆಗಳಲ್ಲಿ ಹಣ್ಣು ಮತ್ತು ತರಕಾರಿ ಬೆಳೆಗಳಿಗೆ ಹಾನಿಯಾಗಿದ್ದು, ರೈತರು ಕಂಗಾಲಾಗಿದ್ದಾರೆ.

ಹೈದರಾಬಾದ್‌ನಲ್ಲಿ ಮೆಟ್ರೋ ನಿಲ್ದಾಣಗಳು, ರಸ್ತೆಗಳು ಜಲಾವೃತ: ಹೈದರಾಬಾದ್‌ನ ಬಹುತೇಕ ಕಡೆ ಗುರುವಾರ ಮಧ್ಯಾಹ್ನದಿಂದ ರಾತ್ರಿ 8 ಗಂಟೆಯವರೆಗೆ ಜೋರು ಮಳೆಯಾಗಿದೆ. ಮೆಟ್ರೋ ನಿಲ್ದಾಣಗಳಲ್ಲಿ 8ರಿಂದ 9 ಸೆಂ.ಮೀ ಮಳೆ ಮಳೆಯಾಗಿದ್ದರೆ, ಇತರ 12 ನಿಲ್ದಾಣಗಳಲ್ಲಿ 7 ರಿಂದ 8 ಸೆಂ.ಮೀ ಮಳೆಯಾಗಿದೆ. ಉಪ್ಪಲ್​, ಮಲಕ್‌ಪೇಟೆ, ಖೈರತಾಬಾದ್ ಮತ್ತು ಚಾದರ್ಘಾಟ್‌ನಂತಹ ಪ್ರಮುಖ ಪ್ರದೇಶಗಳಲ್ಲಿ ಬಸ್ ಸೇವೆಗಳು ಸ್ಥಗಿತಗೊಂಡಿದ್ದವು. ಬಾಗಲಿಂಗಂಪಳ್ಳಿಯ ಪದ್ಮಾ ಕಾಲೋನಿಯಲ್ಲಿ ದ್ವಿಚಕ್ರ ವಾಹನಗಳು ನೀರಿನಲ್ಲಿ ಕೊಚ್ಚಿ ಹೋಗಿವೆ.

ಇಬ್ಬರಿಗೆ ಗಂಭೀರ ಗಾಯ: ಎಂಜಿಬಿಎಸ್‌ ಬಸ್​ ನಿಲ್ದಾಣದಲ್ಲಿ ಪಾರ್ಕಿಂಗ್ ಶೆಡ್ ಕುಸಿದು ಬಿದ್ದಿದೆ. ಕರ್ಮಂಘಾಟ್‌ನಲ್ಲಿ ಆಟೋ ಮೇಲೆ ತಡೆಗೋಡೆ ಕುಸಿದು ಬಿದ್ದು ಇಬ್ಬರು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮೈತ್ರಿವನಂ, ಪಂಜಗುಟ್ಟ ಮಾಡೆಲ್ ಹೌಸ್ ಮತ್ತು ಚಂಪಾಪೇಟ್ ಡಿಮಾರ್ಟ್ ಬಳಿ ಮೊಣಕಾಲುದ್ದ ನೀರು ಹರಿದು ಸ್ಥಳೀಯರು ತೊಂದರೆ ಅನುಭವಿಸಿದರು. ಮಲಕ್‌ಪೇಟೆ, ಎರ್ರಗಡ್ಡ, ಅಮೀರಪೇಟ್, ಖೈರತಾಬಾದ್ ಮತ್ತಿತರ ಮೆಟ್ರೋ ನಿಲ್ದಾಣಗಳಲ್ಲಿ ಮಳೆ ನೀರು ನಿಂತು ಕೆರೆಯಂತಾದವು.

ಮೂಸರಂಬಾಗ್ ಸೇತುವೆಯ ಮೇಲೆ ನೀರು ನಿಂತಿದ್ದರಿಂದ ವಾಹನ ಸಂಚಾರ ಕೆಲಕಾಲ ಸ್ಥಗಿತಗೊಂಡಿತ್ತು. ಚೈತನ್ಯಪುರಿ ಬಳಿಯ ಮೂಸಿ ನದಿಯಲ್ಲಿ ಸಿಲುಕಿಕೊಂಡಿದ್ದ ಇಬ್ಬರು ಕಾರ್ಮಿಕರನ್ನು ರಕ್ಷಣಾ ತಂಡವು ರಕ್ಷಿಸಿತ್ತು.

WhatsApp Group Join Now
Telegram Group Join Now
Share This Article