ಮುಂದಿನ ಒಂದು ವಾರಗಳ ಕಾಲ ಭಾರಿ ಮಳೆ ; ಹವಾಮಾನ ಇಲಾಖೆ ಮುನ್ಸೂಚನೆ

Ravi Talawar
ಮುಂದಿನ ಒಂದು ವಾರಗಳ ಕಾಲ ಭಾರಿ ಮಳೆ ; ಹವಾಮಾನ ಇಲಾಖೆ ಮುನ್ಸೂಚನೆ
WhatsApp Group Join Now
Telegram Group Join Now

ಕಳೆದ ಒಂದು ತಿಂಗಳಿಂದ ಕರಾವಳಿ, ಮಲೆನಾಡಿನಲ್ಲಿ ಅಬ್ಬರಿಸಿದ್ದ ಮಳೆರಾಯ ಕೊಂಚ ಬಿಡುವು ಪಡೆದಿದ್ದ, ಇದೀಗ ಬುಧವಾರದಿಂದ ಮತ್ತೆ ಮಳೆ ಶುರುವಾಗಿದೆ. ಇಂದಿನಿಂದ ಒಂದು ವಾರಗಳ ಕಾಲ ಕರಾವಳಿಯಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್​ ನೀಡಲಾಗಿದೆ. ಉಡುಪಿ, ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿಯಲ್ಲಿ ಮಳೆಯಾಗಲಿದೆ.

ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು, ವಿಜಯನಗರದಲ್ಲಿ ಮಳೆಯಾಗಲಿದೆ.

ಅಂಕೋಲಾ, ಕಾರವಾರ, ಕ್ಯಾಸಲ್​ರಾಕ್​, ಹೊಸದುರ್ಗದಲ್ಲಿ ಭಾರಿ ಮಳೆಯಾಗಲಿದೆ. ಹೊನ್ನಾವರ, ಮಂಕಿ, ಗಂಗಾವತಿ, ಕೂಡಲಸಂಗಮ, ಕದ್ರಾ, ಹುಣಸಗಿ, ದೇವದುರ್ಗ, ನಾರಾಯಣಪುರ, ಕಡೂರು, ಪಣಂಬೂರು, ಲಿಂಗಸುಗೂರು, ಮಾನ್ವಿ, ಭಾಗಮಂಡಲ, ಯುಗಟಿ, ಕುಕನೂರು, ಕುರ್ಡಿ, ಶಿರಾಲಿಯಲ್ಲಿ ಮಳೆಯಾಗಲಿದೆ.

ಲಿಂಗನಮಕ್ಕಿ, ಕಲಘಟಗಿ, ಧರ್ಮಸ್ಥಳ, ಮುದಗಲ್, ಗಂಗಾವತಿ, ಕಿರವತ್ತಿ, ಖಜೂರಿ, ಇಳಕಲ್, ಲೋಕಾಪುರ, ಶೋರಾಪುರ, ಯಡವಾಡ, ಕೋಲಾರ, ಆಗುಂಬೆ, ಚನ್ನಪಟ್ಟಣ, ಸಿದ್ದಾಪುರ, ಬೆಳ್ಳೂರು, ಬನವಾಸಿ, ಬಾದಾಮಿ, ಲೋಂಡಾ, ಕುಷ್ಟಗಿ, ತರೀಕೆರೆ, ತ್ಯಾಗರ್ತಿ, ತರೀಕೆರೆ, ಬರಗೂರು, ಮಾಗಡಿ, ಕಳಸ, ಸಿರಾದಲ್ಲಿ ಮಳೆಯಾಗಿದೆ.

WhatsApp Group Join Now
Telegram Group Join Now
Share This Article