ಬೆಳಗಾವಿ ಕಂಟೋನ್ಮೆಂಟ್ ಪಾಲಿಕೆಯೊಂದಿಗೆ ವಿಲೀನ

Ravi Talawar
ಬೆಳಗಾವಿ ಕಂಟೋನ್ಮೆಂಟ್ ಪಾಲಿಕೆಯೊಂದಿಗೆ ವಿಲೀನ
WhatsApp Group Join Now
Telegram Group Join Now

ಬೆಳಗಾವಿ: ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಬೆಳಗಾವಿ ಕಂಟೋನ್ಮೆಂಟ್ ನ ನಾಗರಿಕ ಪ್ರದೇಶವನ್ನು ಬೆಳಗಾವಿ ಮಹಾನಗರ ಪಾಲಿಕೆಯೊಂದಿಗೆ ವಿಲೀನಗೊಳಿಸುವ ಬಗ್ಗೆ ಸಮಗ್ರ ವರದಿ ಕೇಳಿದ್ದಾರೆ.

ಈ ಸಂಬಂಧ ಶೀಘ್ರದಲ್ಲೇ ಜಂಟಿ ಸಲಹಾ ಸಮಿತಿ ರಚಿಸಲಾಗುವುದು ಮತ್ತು ಈ ಸಮಿತಿಯು ಕಂಟೋನ್ಮೆಂಟ್ ವ್ಯಾಪ್ತಿಯಲ್ಲಿರುವ 1763.78 ಎಕರೆ ನಾಗರಿಕ ಭೂಮಿಯ ಸಮೀಕ್ಷೆ ನಡೆಸಿ ಮುಂದಿನ 15 ದಿನಗಳಲ್ಲಿ ವರದಿ ಸಲ್ಲಿಸಲಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಇಂದು ರಕ್ಷಣಾ ಸಚಿವಾಲಯದ ಜಂಟಿ ನಿರ್ದೇಶಕರೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದ ಬೆನ್ನಲ್ಲೇ ಬೆಳಗಾವಿಯಲ್ಲಿ ಕಂಟೋನ್ಮೆಂಟ್ ನಾಗರಿಕ ಪ್ರದೇಶಗಳ ವಿಲೀನದ ವಿಷಯದ ಕುರಿತು ಸಭೆ ನಡೆಸಿದರು.

ಸಭೆಯಲ್ಲಿ ವಿಲೀನಕ್ಕೆ ಸಂಬಂಧಿಸಿದ ಹಲವಾರು ವಿಷಯಗಳ ಚರ್ಚಿಸಿದರು ಮತ್ತು ಅಂತಿಮವಾಗಿ ಕಂಟೋನ್ಮೆಂಟ್ ಬೋರ್ಡ್ ಪ್ರದೇಶಗಳ ಸಮೀಕ್ಷೆ ನಡೆಸಲು ಜಿಲ್ಲಾಧಿಕಾರಿ ನಿರ್ಧರಿಸಿದ್ದಾರೆ.

ವಿಲೀನಕ್ಕೆ ಸಂಬಂಧಿಸಿದಂತೆ ಸಭೆಯಲ್ಲಿ ಮುನ್ಸಿಪಲ್ ಅಡ್ಮಿನಿಸ್ಟ್ರೇಷನ್ ನಿರ್ದೇಶಕರಿಗೆ ಜಿಲ್ಲಾ ಮಟ್ಟದ ಜಂಟಿ ಸಲಹಾ ಸಮಿತಿ ರಚಿಸುವಂತೆ ಮನವಿ ಮಾಡಲಾಗಿದೆ.

ಜಿಲ್ಲಾಧಿಕಾರಿಗಳ ಪ್ರಕಾರ, ಈ ಸಲಹಾ ಸಮಿತಿಯು ಕಂಟೋನ್ಮೆಂಟ್ ವ್ಯಾಪ್ತಿಯ 1763.78 ಎಕರೆ ನಾಗರಿಕ ಪ್ರದೇಶದ ಸಮೀಕ್ಷೆ ನಡೆಸಲಿದೆ ಮತ್ತು ಮುಂದಿನ 15 ದಿನಗಳಲ್ಲಿ ವರದಿ ಸಲ್ಲಿಸಲಿದೆ.

WhatsApp Group Join Now
Telegram Group Join Now
Share This Article