ಫ್ರೆಡರಿಕ್ ಎಂಗೆಲ್ಸ್, ಶಿವದಾಸ್ ಘೋಷ್‌ರವರ ಸ್ಮರಣ ದಿನ ಆಚರಣೆ

Ravi Talawar
ಫ್ರೆಡರಿಕ್ ಎಂಗೆಲ್ಸ್, ಶಿವದಾಸ್ ಘೋಷ್‌ರವರ ಸ್ಮರಣ ದಿನ ಆಚರಣೆ
WhatsApp Group Join Now
Telegram Group Join Now
ಬಳ್ಳಾರಿ,ಆ.೦6. ಎಸ್‌ಯುಸಿಐ ಪಕ್ಷದ ಬಳ್ಳಾರಿಯ ಜಿಲ್ಲಾ ಕಛೇರಿಯಲ್ಲಿ ಕಾರ್ಮಿಕ ವರ್ಗದ ಮಹಾನ್ ನಾಯಕರಾದ ಫ್ರೆಡರಿಕ್ ಎಂಗೆಲ್ಸ್ ಮತ್ತು ಎಸ್‌ಯುಸಿಐ ಕಮ್ಯುನಿಷ್ಟ್ ಪಕ್ಷದ ಸಂಸ್ಥಾಪಕ ಶಿವದಾಸ್ ಘೋಷ್ ರವರ ಸ್ಮರಣ ದಿನವನ್ನು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಪಕ್ಷದ ಜಿಲ್ಲಾ ಕಾರ್ಯದರ್ಶಿ ರಾಧಾಕೃಷ್ಣ ಉಪಾಧ್ಯ ಮಾತನಾಡಿ, “ಕಾರ್ಮಿಕವರ್ಗದ ಮಹಾನ್ ನಾಯಕ ಫ್ರೆಡರಿಕ್ ಎಂಗೆಲ್ಸ್ ರವರ ಕೊಡುಗೆಗಳನ್ನು ನೆನೆದರು. ಎಂಗೆಲ್ಸ್ ರವರು ಕಾರ್ಲ್ ಮಾರ್ಕ್ಸ್ ರವರೊಂದಿಗೆ  ಸರಿಸಮಾನವಾಗಿ ನಿಂತು ಮಾರ್ಕ್ಸ್ವಾದದ ತತ್ವಶಾಸ್ತçವನ್ನು ಬೆಳೆಸಿ ಜಗತ್ತಿಗೆ ನೀಡಿದರು. ಅವರು ಒಬ್ಬ ಬಂಡವಾಳಶಾಹಿ ಮಾಲೀಕನ ಮಗನಾಗಿದ್ದರೂ ಸಹ ಕಾರ್ಖಾನೆಯಲ್ಲಿ ಕಾರ್ಮಿಕರ ಶೋಷಣೆಯನ್ನು ಕಣ್ಣಾರೆ ಗಮನಿಸಿ ಅವರ ವಿಮುಕ್ತಿಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟವರು. ಮಾರ್ಕ್ಸ್ವಾದಕ್ಕೆ ಕಾರ್ಲ್ ಮಾರ್ಕ್ಸ್ ರಂತೆಯೇ ಹಲವಾರು ಕೊಡುಗೆಗಳನ್ನು ಕೊಟ್ಟರು ಕೂಡ ‘ಹೆಚ್ಚೆಂದರೆ ನಾವೆಲ್ಲರೂ ಬುದ್ಧಿಜೀವಿಗಳು. ಆದರೆ ಮಾರ್ಕ್ಸ್ ಒಬ್ಬ ಮೇಧಾವಿ’ ಎಂದು ಹೇಳುವುದರ ಮೂಲಕ ತಮ್ಮ ಉನ್ನತ ಸಾಂಸ್ಕೃತಿಕ ಮಟ್ಟವನ್ನು ಮೆರೆದವರು ಫ್ರೆಡರಿಕ್ ಎಂಗೆಲ್ಸ್.
ಇನ್ನೊಬ್ಬ ಮಹಾನ್ ನಾಯಕ ಶಿವದಾಸ್ ಘೋಷ್ ರವರು ಮಾರ್ಕ್ಸ್ವಾದವನ್ನು ಇನ್ನೂ ಸಂಪದ್ಭರಿತಗೊಳಿಸಿದವರು. ಮಾರ್ಕ್ಸ್ವಾದವನ್ನು ನಮ್ಮ ದೇಶದ ಪರಿಸ್ಥಿತಿಗೆ ತಕ್ಕಂತೆ ಅಳವಡಿಸಿ ಕಾರ್ಮಿಕ ವರ್ಗದ ಹೋರಾಟಕ್ಕೆ ಭದ್ರ ಅಡಿಪಾಯವನ್ನು ಹಾಕಿ ಕೊಟ್ಟಿದ್ದಾರೆ. ಇಂದು ನಾವು ಅನುಭವಿಸುತ್ತಿರುವ ಹಲವಾರು ಸಮಸ್ಯೆ ಗಳಿಗೆ ಅವರು ೧೯೪೮ ರಲ್ಲೆ ಉತ್ತರ ಕೊಟ್ಟಿದ್ದಾರೆ. ನಮ್ಮ ಸ್ವಾತಂತ್ರö್ಯ ಹೋರಾಟದಲ್ಲಿ ರಾಜಿ ಪರವಾದ ನಾಯಕತ್ವ ಮೇಲುಗೈ ಪಡೆದ ಪರಿಣಾಮವಾಗಿ, ಮಿಲಿಯಾಂತರ ಶೋಷಿತ ಜನರ ಹೋರಾಟ ತ್ಯಾಗದ ಫಲವನ್ನು ಬೆರಳೆಣಿಕೆಯ ಟಾಟಾ ಬಿರ್ಲಾಗಳಂತಹ ಬಂಡವಾಳಶಾಹಿಗಳು ಕಬಳಿಸುತ್ತಿರುವುದನ್ನು ಕಂಡು ಅವರು ದುಃಖಿತರಾದರು. ದುಡಿಯುವ ವರ್ಗ ಅಧಿಕಾರದ ಚುಕ್ಕಾಣಿ ಹಿಡಿದು, ಆರ್ಥಿಕವಾಗಿ, ಸಾಮಾಜಿಕವಾಗಿ ಎಲ್ಲಾ ರೀತಿಯ ಅಸಮಾನತೆಗಳು ಸಂಪೂರ್ಣವಾಗಿ ತೊಲಗಬೇಕಾದರೆ, ಬಂಡವಾಳಶಾಹಿ ವಿರೋಧಿ ಸಮಾಜವಾದಿ ಕ್ರಾಂತಿ ನೆರವೇರಬೇಕು ಎಂಬ ಸತ್ಯವನ್ನು ಕಾ. ಶಿವದಾಸ್ ಘೋಷ್ ಅವರು ಮನಗಂಡರು. ಅದಕ್ಕಾಗಿ ಜೈಲಿನಲ್ಲಿದ್ದಾಗಲೇ ಒಂದು ನೈಜ ಕಮ್ಯುನಿಸ್ಟ್ ಪಕ್ಷ ಕಟ್ಟುವ ಶ್ರಮದಾಯಕ ಹೋರಾಟವನ್ನು ಆರಂಭಿಸಿದರು. ಅದಾಗಲೇ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಸಿಪಿಐ) ಎಂಬ ಪಕ್ಷ ಇದ್ದಾಗಲೂ, ವಿಚಾರ ಹಾಗೂ ಆಚರಣೆಯಲ್ಲಿ ಸಿಪಿಐ ಪಕ್ಷವು ಒಂದು ನೈಜ ಕಮ್ಯುನಿಸ್ಟ್ ಪಕ್ಷದ ಗುಣ ಲಕ್ಷಣ ಹೊಂದಿಲ್ಲವೆAದು ಕಾ. ಘೋಷ್ ವಿಶ್ಲೇಷಣೆ ಮಾಡಿ ತೋರಿಸಿದರು. ‘ಯಾವುದೇ ದೇಶ ಹಸಿವೆಯಿಂದ ಬಳಲುತ್ತಿದ್ದರು ಸಹ ಮಾನವ ಮೌಲ್ಯಗಳನ್ನು ಹೊಂದಿದ್ದರೆ ಅನ್ಯಾಯದ ವಿರುದ್ಧ ಸಿಡಿದೇಳಬಹುದು. ಆದರೆ ಮಾನವ ಮೌಲ್ಯಗಳಿಲ್ಲದಿದ್ದರೆ ಸರ್ವಸ್ವವನ್ನೂ ಕಳೆದುಕೊಂಡAತೆ’ ಎಂದು ಹೇಳಿದ್ದಾರೆ. ಈ ಸಂದರ್ಭದಲ್ಲಿ ಯಾವುದೇ ಸಿದ್ಧಾಂತ ಬರೀ ಆಚರಣೆ ಇಲ್ಲದೆ ಭಾಷಣದಲ್ಲಿ ಇದ್ದರೆ ಉಪಯೋಗ ಇಲ್ಲ, ಹಾಗಾಗಿ ನಾವು ಈ ಮಹಾನ್ ವ್ಯಕ್ತಿಗಳು ಹಾಕಿಕೊಟ್ಟ ಮಾರ್ಗದರ್ಶನವನ್ನು ಪಾಲಿಸಿ ಉನ್ನತ ಸಮಾಜ ಕಟ್ಟಲು ಮುಂದೆ ಬರಬೇಕಿದೆ” ಎಂದು ಕರೆ ನೀಡಿದರು.
ಜಿಲ್ಲಾ ಸಮಿತಿಯ ಸದಸ್ಯರಾದ ಕಾಮ್ರೇಡ್ ಸೋಮಶೇಖರ ಗೌಡ ರವರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ ‘ಎಂಗೆಲ್ಸ್ ರವರು ಕಾರ್ಲ್ ಮಾರ್ಕ್ಸ್ ರವರ ಉತ್ತಮ ಸ್ನೇಹಿತರಾಗಿ ಅವರ ಪ್ರತಿಯೊಂದು ಕೆಲಸಗಳಿಗೆ ಜೊತೆಯಾಗಿದ್ದು ಕಾರ್ಮಿಕ ವರ್ಗವನ್ನು ಬಂಡವಾಳಿಗರು ಹೇಗೆ ಶೋಷಣೆ ಮಾಡುತ್ತಾರೆ ಎಂಬ ‘ದಾಸ್ ಕ್ಯಾಪಿಟಲ್’ ಕೃತಿಯನ್ನು ಪೂರ್ಣಗೊಳಿಸಿ ಸಮಾಜಕ್ಕೆ ನೀಡಿದರು.
   ಹಾಗೆಯೇ ಶಿವದಾಸ್ ಘೋಷ್ ರವರು ಮಾರ್ಕ್ಸ್ವಾದಕ್ಕೆ ತಮ್ಮದೇ ಆದ ಕೊಡುಗೆಗಳನ್ನು ನೀಡಿ ಕಾರ್ಮಿಕ ವರ್ಗದ ಹೋರಾಟವನ್ನು ಬಲಪಡಿಸಿದವರು. ಈ ವಿಚಾರಗಳನ್ನು ಜನತೆಗೆ ತಲುಪಿಸುತ್ತಾ ಅವರ ಜೀವನದ ಎಲ್ಲಾ ಸಮಸ್ಯೆಗಳಿಗೆ ಅಂತಿಮ ಪರಿಹಾರವನ್ನು ನೀಡಬಲ್ಲ, ಶೋಷಣಾ ಮುಕ್ತ ಸಮಾಜವನ್ನು ಸ್ಥಾಪಿಸಲು, ಕಾರ್ಮಿಕ ವರ್ಗವನ್ನು ಸಮಾಜವಾದಿ ಕ್ರಾಂತಿಗೆ ಸಜ್ಜುಗೊಳಿಸಬೇಕಿದೆ. ಇದುವೇ ನಾವು ಈ ಇಬ್ಬರೂ ಮಹನೀಯರಿಗೆ ನೀಡುವ ನಿಜವಾದ ಗೌರವ’ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಕ್ಷದ ಜಿಲ್ಲಾ ಸಮಿತಿಯ ಸದಸ್ಯರಾದ ಕಾಮ್ರೇಡ್ ಮಂಜುಳ ಎಂ. ಎನ್. ಅವರು ವಹಿಸಿದ್ದರು.ಕಾರ್ಯಕ್ರಮದಲ್ಲಿ ಜಿಲ್ಲಾ ಸಮಿತಿಯ ಸದಸ್ಯರಾದ ಕಾಮ್ರೇಡ್ ದೇವದಾಸ್, ಡಿ.ನಾಗಲಕ್ಷಿö್ಮ, ಎ. ಶಾಂತ, ಡಾ|| ಪ್ರಮೋದ್ ಹಾಗೂ ಪಕ್ಷದ ಕಾರ್ಯಕರ್ತರು, ಸದಸ್ಯರು ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article