ಬೆಂಗಳೂರು: ಮಾರುಕಟ್ಟೆಯಲ್ಲಿ ಮೆಕ್ಕೆಜೋಳ ಬೆಲೆ ಕುಸಿತಗೊಂಡ ಕಾರಣ ರೈತರ ನಷ್ಟಕ್ಕೆ ಪಾರಿಹಾರ ನೀಡಲು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಖರೀದಿ ಕೇಂದ್ರಗಳ ವಿಳಂಬ ಹಾಗೂ ಮಾರುಕಟ್ಟೆ ಅಸ್ಥಿರತೆ ಬಗ್ಗೆ ಸಭೆ ಜರುಗಿತು.
ಈ ಸಭೆಯಲ್ಲಿ ಡಿಸ್ಟಿಲರಿ ಪ್ರತಿನಿಧಿಗಳು, ಕೃಷಿ, ಆಹಾರ ಇಲಾಖೆ ಅಧಿಕಾರಿಗಾಳು ಹಾಗೂ ನಾಫೆಡ್ ಅಧಿಕಾರಿಗಳು ಸೇರಿ ಅನೇಕರು ಭಾಗವಹಿಸಿದರು.
ಸಭೆಯಲ್ಲಿ ಎಥೆನಾಲ್ ಉತ್ಪಾದನೆಗೆ ರಾಜ್ಯಕ್ಕೆ ಕೇವಲ ಕಡಿಮೆ ಕೋಟಾ, ಖರೀದಿ ಸಂಸ್ಥೆಗಳ ನರ್ಲಕ್ಷ್ಯ, ಖಾಸಗಿ ಡಿಸ್ಟಿಲರಿಗಳ ಪಾತ್ರ ಹಾಗೂ ರ್ಕಾರದ ಸಾಧ್ಯ ಕ್ರಮಗಳು ಬಗ್ಗೆ ಸಭೆಯಲ್ಲಿ ರ್ಚೆ ನಡೆಯಿತು.
ಸಭೆಯ ನಂತರ ಮಾತನಾಡಿದ ಮುಖ್ಯಂಂತ್ರಿ ಸಿದ್ದರಾಮಯ್ಯ ಅವರು ಬೆಲೆಯಲ್ಲಿ ತೀವ್ರ ಕುಸಿತದಿಂದ ಸಂಕಷ್ಟಗೊಳಗಾದ ರೈತರಿಗೆ ರ್ಕಾರದಿಂದ ಸಹಾಯ ಒದಗಿಸಲಾಗುವುದು. ದೇಶದಲ್ಲೇ ಉತ್ಪಾದನೆ ಹೆಚ್ಚು ಇರುವ ಸಮಯದಲ್ಲಿ ಆಮದು ಅಗತ್ಯವಿಲ್ಲ. ಇದನ್ನು ತಡೆಯಲು ಕೇಂದ್ರಕ್ಕೆ ಪತ್ರ ಬರೆಯುತ್ತೇವೆ,” ಎಂದರು. ಅಲ್ಲದೆ, ಡಿಸ್ಟಿಲರಿ ಹಾಗೂ ಕುಕ್ಕುಟೋದ್ಯಮದ ಪ್ರತಿನಿಧಿಗಳೊಂದಿಗೆ ತರ್ತು ಸಭೆ ನಡೆಸಿ ಖರೀದಿ ಬಾಧ್ಯತೆ ವಿಧಿಸಲಾಗುವುದು ಎಂದು ಅವರು ತಿಳಿಸಿದರು.

