ಹೊಸಪೇಟೆ : ವಿಜಯನಗರ ಜಿಲ್ಲೆ ಪರಿಶಿಷ್ಟ ಜಾತಿ ವಿಭಾಗದ ಸಂಘಟನಾ ಪ್ರಗತಿ ಪರಿಶೀಲನ ಸಭೆ ಮತ್ತು ಮುಖ್ಯ ಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ರಾಜ್ಯ ಸರ್ಕಾರವು ಪರಿಶಿಷ್ಟ ಸಮುದಾಯಗಳ ಅಭಿವೃದ್ಧಿಗೆ ಕೈಗೊಂಡ ಕ್ರಮಗಳ ಬಗ್ಗೆ ಹೊಸಪೇಟೆಯ ಕೊಂಡನಾಯಕನಹಳ್ಳಿಯಲ್ಲಿರುವ ಜಿಲ್ಲಾ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಸಭೆ ಜರುಗಿತು.
ಈ ಸಂದರ್ಭದಲ್ಲಿ ರಾಜ್ಯ ಅಧ್ಯಕ್ಷರಾದ ಆರ್ ಧರ್ಮಸೇನಾ ಅವರು ಮಾತನಾಡಿ ರಾಜ್ಯ ಮತ್ತು ದೇಶದಲ್ಲಿ ಪರಿಶಿಷ್ಟ ಸಮುದಾಯದ ಸಮಸ್ಯೆ ಗಳು ಮತ್ತು ಸವಾಲುಗಳ ಕರಿತು ಮಾತನಾಡಿದರು ಹಾಗೂ ಕೇಂದ್ರ ಸರಕಾರವು ದಲಿತ ಸಮುದಾಯಗಳ ಹಕ್ಕುಗಳನ್ನು ಮೋಟಕುಗೊಳಿಸುವ ಮತ್ತು ಸಂವಿಧಾನ ವಿರೋಧಿ ನಡೆಯನ್ನು ಮತ್ತು ದೇವದಾಸಿ ಮಹಿಳೆಯರ ಸಮಸ್ಯೆಗಳನ್ನ ರಾಜ್ಯ ಸರಕಾರದ ಗಮನ ಸೆಳೆಯುವದಾಗಿ ತಿಳಿಸಿದರು. ಜಿಲ್ಲೆಯ ವಿವಿಧ ಭಾಗಗಳಿಂದ ಬಂದಿದ್ದ ಪರಿಶಿಷ್ಟ ಸಮುದಾಯಗಳ ನಾಯಕರು ಮಾತನಾಡುತ್ತಾ ವಿಜಯನಗರ ಜಿಲ್ಲೆಯ ವಿವಿಧ ಗ್ರಾಮೀಣ ಪ್ರದೇಶಗಳಲ್ಲಿ ಪರಿಶಿಷ್ಟರು ಅನುಭವಿಸುತ್ತಿರುವ ಭೂಮಿ ಸಮಸ್ಯೆಗಳು ಮತ್ತು ವಿಶೇಷವಾಗಿ ಸ್ಮಶಾನದ ಸಮಸ್ಯೆಯನ್ನು ರಾಜ್ಯ ಅಧ್ಯಕ್ಷರ ಗಮನಕ್ಕೆ ತಂದರು.
ಇದಕ್ಕೂ ಮೊದಲು ನಗರದ ಹೃದಯ ಭಾಗದಲ್ಲಿರುವ ಉಕ್ಕಿನ ಮಹಿಳೆ ಮಾಜಿ ಪ್ರಧಾನಿ ಇಂದಿರಾಗಾಂಧಿ, ಬಾಬಾಸಾಹೇಬ್ ಡಾ. ಬಿ ಆರ್ ಅಂಬೇಡ್ಕರ್ ಮತ್ತು ಬಾಬು ಜಗಜೀವನ್ ರಾಮ್ ಅವರ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿ ಸಭೆ ನಡೆಯುವ ಸ್ಥಳಕ್ಕೆ ಆಗಮಿಸಿದರು, ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷರಾದ ಕನ್ನಿರಾಮ್ ರಾಥೋಡ್, ನಾಗರಾಜ್ ನಾಯಕ್, ಜಿಲ್ಲಾ ಅಧ್ಯಕ್ಷರಾದ ಸೋಮಶೇಖರ್ ಬಣ್ಣದಮನೆ, ಡಿ ಸಿ ಸಿ ಉಪಾಧ್ಯಕ್ಷರಾದ ಹಾಲಪ್ಪ, ಡಿಸಿಸಿ ಪ್ರಧಾನ ಕಾರ್ಯದರ್ಶಿಯಾದ ನಿಂಬಗಲ್ ರಾಮಕೃಷ್ಣ, ಸೇವದಳ ಜಿಲ್ಲಾ ಅಧ್ಯಕ್ಷರಾದ ಮಾರಣ್ಣ ಅವರು, ಪರಿಶಿಷ್ಟ ಜಾತಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಸ್ ಬಿ ಮಂಜುನಾಥ್, ನಾಗರಾಜ್, ಕನ್ನೇಶ್ವರ, ಹರಪನಹಳ್ಳಿ ಮಲ್ಲೇಶ್, ಕೊಟ್ರೇಶ್, ದುರ್ಗೇಶ್ ವಕೀಲರು, ಮಂಜಪ್ಪ, ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕರುಗಳಾದ ತಮ್ಮನಳಪ್ಪ, ಸಣ್ಣೀರಪ್ಪ, ಸೋಮಶೇಖರ್, ಕ್ವೊಟ್ಟಾಲ್ ವಿರೇಶ್, ಕೂಡ್ಲಿಗಿಯ ಪ್ರಕಾಶ್, ಮಾರಪ್ಪ, ಕಮಲಾಪುರದ ಈರಪ್ಪ, ಅಮರಾವತಿ ಸಣ್ಣ ಈರಣ್ಣ, ಗಿರೀಶ್, ರಾಮ್ ಮೋಹನ್, ಮಹೇಶ್, ಯಲ್ಲಪ್ಪ ಬಂಡರದರ್, ಸೇರಿದಂತೆ ಇನ್ನು ಅನೇಕರು ಪಾಲ್ಗೋಂಡಿದ್ದರು.