ಬಳ್ಳಾರಿ: 05̲ – ನಗರದಲ್ಲಿ ನಡೆದಿರುವ ಅಹಿತಕರ ಘಟನೆಗೆ ಸಂಬಂಧಿಸಿದಂತೆ ಪರಿಸ್ಥಿಯನ್ನು ಅವಲೋಕಿಸಲು ಕೆಪಿಸಿಸಿ ಆಯೋಜಿಸಿದ್ದ ಸತ್ಯಶೋದಕ ಸಮಿತಿಯ ಮುಖಂಡರಾದ ಕರ್ನಾಟಕ ರಾಜ್ಯ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಹೆಚ್.ಎಂ.ರೇವಣ್ಣ, ಲೋಕಸಭಾ ಸದಸ್ಯ ಕುಮಾರ್ ನಾಯ್ಕ್, ಚೆಳ್ಳಕೆರೆ ಶಾಸಕ ರಘುಮೂರ್ತಿ, ವಿಧಾನ ಪರಿಷತ್ ಸದಸ್ಯ ಜಕ್ಕಪ್ಪ ನವರ್, ಬಸವನಗೌಡ ಬಾದರ್ಲಿ,
ಮಾಜಿ ಸಂಸದ ಜಯಪ್ರಕಾಶ್ ಮತ್ತು ಶಾಸಕ ಗೋಪಾಲ ಕೃಷ್ಣ ಬಳ್ಳಾರಿ ಜಿಲ್ಲೆಗೆ ಆಗಮಿಸಿ, ವಿವಿಧ ಸಮಾಜದ ನಾಯಕರುಗಳೊಂದಿಗೆ, ಘಟನೆಯ ವೇಳೆ ಸ್ಥಳದಲ್ಲಿ ಪ್ರತ್ಯಕ್ಷ ಸಾಕ್ಷಿದಾರರೊಂದಿಗೆ ಮಾಹಿತಿ ಪಡೆದರು.
ಘಟನೆಯ ವೇಳೆ ಗಾಯಗೊಂಡ ಅಮಾಯಕರನ್ನು ಕಂಡು ಘಟನೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದರು.
ನಂತರ ಜಿಲ್ಲಾಡಳಿತ ಅಧಿಕಾರಿಗಳೊಂದಿಗೆ ಮತ್ತು ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳೊಂದಿಗೆ ಚರ್ಚಿಸಿ ಮಾಹಿತಿಯನ್ನು ಪಡೆದರು.
ನಂತರ ಸತ್ಯ ಶೋಧಕ ಸಮಿತಿಯು ಘಟನೆ ನಡೆದ ಸ್ಥಳ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ಮಾಹಿತಿ ಪಡೆದು ನಂತರ ಮೃತ ಪಟ್ಟ ಕಾಂಗ್ರೆಸ್ ಕಾರ್ಯಕರ್ತ ದಿವಗಂತ ರಾಜಶೇಖರ್ ರೆಡ್ಡಿ ಅವರ ನಿವಾಸಕ್ಕೆ ಭೇಟಿ ನೀಡಿ ಅವರ ಕುಟುಂಬಕ್ಕೆ ಸಂತಾಪ ಪಡಿಸಿ, ದಿನವಿಡೀ ಘಟನೆಯ ಬಗ್ಗೆ ಪಡೆದ ಸಂಪೂರ್ಣ ಮಾಹಿತಿಯನ್ನು ಕೆಪಿಸಿಸಿಗೆ ಸಲ್ಲಿಸಲಿದ್ದಾರೆ.
ಈ ಸಂದರ್ಭದಲ್ಲಿ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವಾರದ ಬಿ.ಜೆಡ್. ಜಮೀರ್ ಅಹಮ್ಮದ್ ಖಾನ್ , ನಗರ ಶಾಸಕ ನಾರಾ ಭರತ್ ರೆಡ್ಡಿ, ಕಂಪ್ಲಿ ಶಾಸಕ ಜೆ.ಎನ್.ಗಣೇಶ್, ಡಿಸಿಸಿ ಜಿಲ್ಲಾಧ್ಯಕ್ಷ ಅಲ್ಲಂ ಪ್ರಶಾಂತ್, ಕೆಪಿಸಿಸಿ ಪ್ರದಾನ ಕಾರ್ಯದರ್ಶಿ ಹುಮಯೂನ್ ಖಾನ್, ಲಿಡ್ಕರ್ ಅಧ್ಯಕ್ಷ ಮುಂಡ್ರಿಗಿ ನಾಗರಾಜ್, ಬುಡ ಅಧ್ಯಕ್ಷ ಅಂಜಿನೆಯಲು, ಮಹಾಪೌರ ಪಿ.ಗಾದೆಪ್ಪ, ಮತ್ತು ಪಕ್ಷದ ಹಿರಿಯ ಮುಖಂಡರುಗಳು ಉಪಸ್ಥಿರಿದ್ದರು.


