ಧಾರವಾಡ: ಕಲಘಟಗಿ ಭಾಗದ ರೈತರೊಂದಿಗೆ ಕಬ್ಬು ಸಾಗಾಣಿಕೆ ದರ ನಿಗದಿ ಬಗ್ಗೆ ಧಾರವಾಡ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಸಭೆ ಜರುಗಿಸಿದರು.
ಸಭೆಯಲ್ಲಿ ಮಾತನಾಡಿ, ಕಲಘಟಗಿ ತಹಶೀಲ್ದಾರ ಮತ್ತು ಪೋಲಿಸ್ ಅಧಿಕಾರಿಗಳಿಗೆ ಜಿಲ್ಲಾ ಉಸ್ತವಾರಿ ಸಚಿವರು ಹಾಗೂ ಜಿಲ್ಲಾಡಳಿತ ನೀಡಿರುವ ಸೂಚನೆಗಳನ್ನು ಪಾಲಿಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು.
ಜಿಲ್ಲೆಯ ಎಲ್ಲ ಕಾರ್ಖಾನೆಗಳು ಕಬ್ಬು ಕಟಾವಣೆಯ ದರವನ್ನು ಸರ್ಕಾರದ ನಿಯಮಾನುಸಾರ ತೆಗೆದುಕೊಳ್ಳಬೇಕು. ನಿಯಮಾನುಸಾರ ತೆಗೆದುಕೊಳ್ಳದೇ ಇರುವದರಿಂದ ರೈತರಿಗೆ ಬಹಳಷ್ಟು ತೊಂದರೆಯಾಗುತ್ತಿದೆ. ಅದೇ ರೀತಿ ಪ್ಯಾರಿ ಶುಗರ್ ಕಾರ್ಖಾನೆಯವರು ಸಹ ನಿಯಮಾನುಸಾರ ಹಣ ತೆಗೆದುಕೊಳ್ಳಬೇಕು ಎಂದು ಅವರು ಹೇಳಿದರು.
ಬೇರೆ ಪ್ಯಾಕ್ಟರಿ ಸಿಬ್ಬಂದಿಗಳು ರೈತರಿಗೆ ತಪ್ಪು ಮಾಹಿತಿ ನೀಡದಂತೆ ಕ್ರಮವಹಿಸಬೇಕು. ಕಬ್ಬಿಗೆ ಮತ್ತು ಕಬ್ಬು ಸಾಗಾಣಿಕೆಯಲ್ಲಿ ನ್ಯಾಯಯುತ ದರ ನೀಡುವಲ್ಲಿ ಕ್ರಮವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ತಿಳಿಸಿದರು.
ಸಭೆಯಲ್ಲಿ ಉಪವಿಭಾಗಾಧಿಕಾರಿ ಶಾಲಂ ಹುಸೇನ್, ಆಹಾರ ಇಲಾಖೆ ಜಂಟಿ ನಿರ್ದೇಶಕ ಡಾ.ವಿನೋದ ಹೆಗ್ಗಳಗಿ, ಕಲಘಟಗಿ ತಹಶಿಲ್ದಾರ ಬಸವರಾಜ ಹೊಂಕಣದವರ, ರೈತ ಮುಖಂಡರಾದ ಮಹೇಶ ಬೆಳಗಾಂವಕರ್, ಉಳವಪ್ಪಾ ಬಡಿಗೇರ, ವಸಂತ ಲಕ್ಕಪ್ಪನವರ, ಪರುಶುರಾಮ ಎತ್ತಿನಗುಡ್ಡ, ಶಿವು ತಡಸ, ಬಸನಗೌಡ ಸಿದ್ದನಗೌಡರ ಸೇರಿದಂತೆ ಇತರ ರೈತ ಪ್ರಮುಖರು, ಅಧಿಕಾರಿಗಳು ಭಾಗವಹಸಿದ್ದರು.