ಹುಕ್ಕೇರಿ. : ಗುತ್ತಿಗೆದಾರರ ಅವೈಜ್ಞಾನಿಕ ಕಾಮಗಾರಿಗೆ ತಡೆ ಗಟ್ಟಲು ಗುತ್ತಿಗೆದಾರರ ಸಭೆ ಜರುಗಿಸ ಲಾಗುವದು ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೋಳಿ ಹೇಳಿದರು.
ಅವರು ಇಂದು ಹುಕ್ಕೇರಿ ನಗರದಲ್ಲಿ ತ್ರೈಮಾಸಿಕ ಸಭೆಯಲ್ಲಿ ಸಾರ್ವಜನಿಕರು ಮಾತನಾಡಿ ತಾಲೂಕಿನ ಜೆ ಜೆ ಎಂ ಕಾಮಗಾರಿ ಯನ್ನು ರಸ್ತೆ ಪಕ್ಕದಲ್ಲೇ ತಗ್ಗು ಗುಂಡಿ ತಗೆದು ಹಾಗೆ ಬಿಟ್ಟಿದ್ದಾರೆ ಅಲ್ಕದೆ ಕೆಲ ಗ್ರಾಮಗಳಲ್ಲಿ ರಸ್ತೆಯನ್ನೆ ಅಗೆದು ಹಾಗೆ ಬಿಟ್ಟಿದ್ದರಿಂದ ಒಂದು ಮಗು ಸಾವನ್ನಪ್ಪಿದೆ ಕಾರಣ ಗುತ್ತಿಗೆದಾರರ ಅವೈಜ್ಞಾನಿಕ ಕಾಮಗಾರಿಗಳಿಂದ ಗ್ರಾಮಗಳಲ್ಲಿ ರಸ್ತೆ ಹಾಳವಾಗುತ್ತಿವೆ ಅಲ್ಲದೆ ಅಪಘಾತಗಳು ಸಂಭವಿಸುತ್ತಿವೆ ಇದಕ್ಕೆಲ್ಲಾ ಅಧಿಕಾರಿಗಳು ಮತ್ತು ಗುತ್ತಿಗೆದಾರರ ಬೇಜವಾಬ್ದಾರಿ ಕಂಡು ಬರುತ್ತಿದೆ ಎಂದು ಆರೋಪಿಸಿದರು.
ಸಚಿವ ಸತೀಶ ಜಾರಕಿಹೋಳಿ ಮಾತನಾಡಿ ಮುಂಬರುವ ದಿನಗಳಲ್ಲಿ ಎಲ್ಲ ಗುತ್ತಿಗೆದಾರರ ಸಭೆ ಕರೆದು ಈ ಕುರಿತು ಕುಲಂಕುಷವಾಗಿ ಚರ್ಚಿಸಲಾಗುವದು ಹಾಗೂ ಈಗಾಗಲೇ ರಸ್ತೆ ಅಗೆದು ಕಾಮಗಾರಿ ಮಾಡುತ್ತಿರುವವರ ವಿರುದ್ಧ ಪೋಲಿಸ್ ಠಾಣೆ ಯಲ್ಲಿ ಪ್ರಕರಣ ಧಾಖಲಿಸಲು ಕ್ರಮ ಜರುಗಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಂತರ ಮಾತು ಮುಂದುವರೆಸಿ ಮುಂಬರುವ ದಿನಗಳಲ್ಲಿ ರಾಸಾಯನಿಕ ಗೋಬ್ಬರದಿಂದ ಮಾರಣಾಂತಿಕ ಕಾಯಿಲೆಗಳು ಬರುತ್ತಿರುವ ಹಿನ್ನಲೆಯಲ್ಲಿ ರೈತರು ಎಮ್ಮೆ ಮತ್ತು ಹಸು ಸಾಕುವ ಮೂಲಕ ಸಾವಯವ ಗೋಬ್ಬರ ಬಳೆಸಿ ನೈಸರ್ಗಿಕವಾಗಿ ಬೆಳೆಗಳನ್ನು ಬೆಳೆಸುವ ದನ್ನು ಪ್ರೋತ್ಸಾಹಿಸಲು ಕ್ರಮ ಜರುಗಿಸ ಬೇಕು ಎಂದರು.
ತಹಸಿಲ್ದಾರ ಬಲರಾಮ ಕಟ್ಟಿಮನಿ, ತಾಲೂಕಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಟಿ ಆರ್ ಮಲ್ಲಾಡದ, ಗ್ಯಾರಂಟಿ ಯೋಜನೆಗಳ ಅದ್ಯಕ್ಷ ಶಾನೂಲ ತಹಸಿಲ್ದಾರ, ನಾಮ ನಿರ್ದೆಶನ ಸದಸ್ಯ ಬಸವರಾಜ ಕೋಳಿ, ಲಕ್ಷ್ಮಣ ಹೋಲಿ ಹಾಗೂ ವಿವಿಧ ಇಲಾಖೆ ಅಧಿಕಾರಿಗಳಾದ ಆರ್ ಬಿ ನಾಯ್ಕರ, ಶಶಿಕಾಂತ ವಂದಾಳೆ,
ಉದಯ ಕುಡಚಿ, ಪೋಲಿಸ್ ಅಧಿಕಾರಿಗಳಾದ ಮಹಾಂತೇಶ ಬಸ್ಸಾಪೂರೆ, ಶಿವಶಂಕರ ಅವುಜಿ, ಜಾವೇದ ಮುಶಾಪೂರೆ ಮಿದಲಾದವರು ಉಪಸ್ಥಿತರಿದ್ದರು.


