ಬಳ್ಳಾರಿ: 16…ಕಲ್ಕತ್ತದಲ್ಲಿ ನಡೆದ ವೈದ್ಯಕೀಯ ವಿದ್ಯಾರ್ಥಿನಿ ಸಾವಿಗೆ ನ್ಯಾಯ ದೊರಕಿಸಿಬೇಕು, ತಮ್ಮ ಶಿಷ್ಯ ವೇತನ ಹೆಚ್ಚಳ (ಸ್ಟೈಫಂಡ್) ಮಾಡಬೇಕು. ವೈದ್ಯಕೀಯ ಶುಲ್ಕ ಕಡಿಮೆ ಮಾಡಬೇಕು ಎಂದು ನಗರದ ಬಿಮ್ಸ್ ಆಸ್ಪತ್ರೆ ಮುಂದೆ ಹೌಸ್ ಮೆನ್ ಷಿಪ್ ಹಾಗು ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳು ನಡರಸಿರುವ ಮುಷ್ಕರ 5 ನೇ ದಿನಕ್ಕೆ ಕಾಲಿರಿಸಿದೆ.
ಕೊಲ್ಕತ್ತಾದಲ್ಲಿ ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿದೆ.
ವೈದ್ಯಕೀಯ ವಿದ್ಯಾರ್ಥಿಗಳಿಗೆ ಕ್ಯಾಂಪಸ್ ನಲ್ಲಿಯೇ ಭದ್ರತೆ ಇಲ್ಲವಾದ್ರೇ ಹೇಗೆ..? ಇದು ಇಡೀ ದೇಶವೇ ತಲೆ ತಗ್ಗಿಸುವ ವಿಚಾರವಾಗಿದೆ. ಇದೇ ವಿಷಯ ಮುಂದಿಟ್ಟುಕೊಂಡು ಕೆಲವರು ರಾಜಕೀಯ ಮಾಡುತ್ತಿದ್ದಾರೆ ನಮಗೆ ರಾಜಕೀಯ ಬೇಡ ನ್ಯಾಯ ಬೇಕು ಎಂದು ರೆಸಿಡೆಂಟ್ ಡಾಕ್ಟರ್ಸ್ ಅಸೋಸಿಯೇಷನ್ ಅಧ್ಯಕ್ಷ ಡಾ. ಎನ್.ಸಿಮಂಜುನಾಥ ಹೇಳಿದರು.
ಘಟನೆಯನ್ನು ಖಂಡಿಸಿ ಪ್ರತಿಭಟನೆ ಮಾಡಿದವರ ಮೇಲೆ ಹಲ್ಲೆ ಮಾಡಿದ್ದು ದುರದೃಷ್ಟಕರವಾಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಶಿಷ್ಯ ವೇತನ ಇತರೆ ರಾಜ್ಯಕ್ಕೆ ಹೊಲಿಕೆ ಮಾಡಿದರೆ ರಾಜ್ಯದಲ್ಲಿ ಅತಿ ಕಡಿಮೆ ಇದೆ. ರಾಜ್ಯದಲ್ಲಿ 45 ರಿಂದ 55 ಸಾವಿರ ಶಿಷ್ಯ ವೇತನ ನೀಡಲಾಗ್ತಿದೆ. ಆದರೆ ಮಹಾರಾಷ್ಟ್ರ ಗುಜರಾಜ್ ಸೇರಿದಂತೆ ಬೇರೆ ರಾಜ್ಯದಲ್ಲಿ ಹ 85 ರಿಂದ 1.15 ಲಕ್ಷದವರೆಗೂ ಇದೆ. ಹೀಗಾಗಿ ಈ ತಾರತಮ್ಯವೇಕೆ ಎಂದು ಪ್ರಶ್ನಿಸಿದರು. ಇನ್ನೂ ಶುಲ್ಕದ ವಿಚಾರದಲ್ಲಿಯೂ ಕರ್ನಾಟಕದಲ್ಲಿ ಅತಿ ಹೆಚ್ಚಳವಾಗಿದೆ.
ಪ್ರತಿಭಟನೆ ಕುರಿತು ಕಳೆದ ಅರು ತಿಂಗಳ ಹಿಂದೆಯೇ ಸರ್ಕಾರದ ಗಮನಕ್ಕೆ ತರಲಾಗಿದೆ. ಕಳೆದ ಒಂದು ತಿಂಗಳ ಹಿಂದೆಯೇ ಪ್ರತಿಭಟನೆ ಬಗ್ಗೆ ವಿವರಣೆ ನೀಡಿದ್ದೇವೆ. ಐದನೇ ತಾರಿಕಿನಿಂದ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ಮಾಡ್ತಿದ್ದೇವೆ ಇಷ್ಟೇಲ್ಲ ಆದರೂ ಸರ್ಕಾರ ನಮ್ಮ ಸಮಸ್ಯೆ ಬಗ್ಗೆ ಗಮನಹರಿಸಿಲ್ಲ ಎಂದು ತಮ್ಮ ಆಕ್ರೋಶವ್ಯಕ್ತಪಡಿಸಿದರು. ಈ ವೇಳೆ ಡಾ. ನೂರಿ, ತಬ್ಸಮ್, ಕಾರ್ತಿಕ್, ಸೇರಿದಂತೆ ನೂರಾರು ವಿದ್ಯಾರ್ಥಿಗಳಿದ್ದರು.