ಪತ್ರಕರ್ತ ಹೊನ್ನುರಸ್ವಾಮಿ ಕೆ.ಟಿ ಯವರಿಗೆ ಮಾಧ್ಯಮ ರತ್ನ’ ಪ್ರಶಸ್ತಿ ಪ್ರದಾನ

Ravi Talawar
ಪತ್ರಕರ್ತ ಹೊನ್ನುರಸ್ವಾಮಿ ಕೆ.ಟಿ ಯವರಿಗೆ ಮಾಧ್ಯಮ ರತ್ನ’ ಪ್ರಶಸ್ತಿ ಪ್ರದಾನ
WhatsApp Group Join Now
Telegram Group Join Now
ಬಳ್ಳಾರಿ : ನರದಲ್ಲಿ ಜನಮನಸೆಳೆದ ಸಂಜೆವಾಣಿ ದಿನಪತ್ರಿಕೆಯ ಉಪಸಂಪಾದಕರು,  ಜನಕೂಗು, ಮತ್ತು ವಿಜಯ ವಿಶ್ವವಾಣಿ ಪತ್ರಿಕೆ   ಹಾಗೂ ಬಂಗಾರದ ಗಣಿ ಮತ್ತು ಪಬ್ಲಿಕ್ ನೆಕ್ಸ್ಟ್ ಚಾನೆಲ್ ಜಿಲ್ಲಾ ವರದಿಗಾರಾದ ಹೊನ್ನುರಸ್ವಾಮಿ ಕೆ.ಟಿ ಯವರಿಗೆ   “ಮಾಧ್ಯಮ ರತ್ನ” ಪ್ರಶಸ್ತಿ ಪ್ರದಾನ ಮಾಡಲಾಗಿದೆ.
ಬೆಳಕು ಸಾಹಿತ್ಯಿಕ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ಕೆಲ ವರ್ಷಗಳಿಂದ ಸಾಧಕರನ್ನ ಗುರುತಿಸಿ ಗೌರವಿಸುವ ಕಾರ್ಯಕ್ಕೆ ಮುಂದಾಗಿದ್ದು. 120ನೇ ವರ್ಷದ ರಾಷ್ಟ್ರಮಟ್ಟದ ಬೆಳಕು ಸಮ್ಮೇಳನದಲ್ಲಿ ಪ್ರತಿವರ್ಷ ಕೊಡಮಾಡುವ “ಮಾಧ್ಯಮ ರತ್ನ” ಪ್ರಶಸ್ತಿಗೆ ಹೊನ್ನುರಸ್ವಾಮಿ ಕೆ. ಟಿ  ಆಯ್ಕೆಯಾಗಿದ್ದರು.
ಹೊನ್ನುರಸ್ವಾಮಿ ಕೆಟಿಯವರು ಮಾಧ್ಯಮ ಕ್ಷೇತ್ರದಲ್ಲಿ ಕಳೆದ 12 ವರ್ಷಗಳಿಂದ ಸೇವೆ ಸಲ್ಲಿಸಿದ್ದು. ಈ ಹಿನ್ನೆಲೆಯಲ್ಲಿ ಬೆಳಕು ಸಾಹಿತ್ಯಿಕ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ಸಂಸ್ಥೆಯ 120 ನೇ ರಾಷ್ಟ್ರ ಮಟ್ಟದ ಬೆಳಕು ಸಮ್ಮೇಳನದಲ್ಲಿ  ‘ಮಾಧ್ಯಮ ರತ್ನ’ ಪ್ರಶಸ್ತಿ ನೀಡಿ ಸನ್ಮಾನಿಸಲಾಗಿದೆ..
ರಾಯಚೂರು ನಗರದ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ  ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.   ಕಾರ್ಯಕ್ರಮದಲ್ಲಿ ಹಲವು ಗಣ್ಯರು ಭಾಗಿಯಾಗಿದ್ದರು
WhatsApp Group Join Now
Telegram Group Join Now
Share This Article