ನವದೆಹಲಿ: ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ ಕೆ ಸಕ್ಸೇನಾ ಅವರು ದಾಖಲಿಸಿದ್ದ 23 ವರ್ಷಗಳ ಹಿಂದಿನ ಮಾನನಷ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ನರ್ಮದಾ ಬಚಾವೋ ಆಂದೋಲನ ನಾಯಕಿ ಮೇಧಾ ಪಾಟ್ಕರ್ ಅವರ ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಿದ ನಂತರ ದೆಹಲಿ ಪೊಲೀಸರು ಶುಕ್ರವಾರ ಅವರನ್ನು ಬಂಧಿಸಿದ್ದಾರೆ.
ವಿ ಕೆ ಸಕ್ಸೇನಾ ಅವರು ರಾಷ್ಟ್ರೀಯ ನಾಗರಿಕ ಸ್ವಾತಂತ್ರ್ಯ ಮಂಡಳಿಯ ನೇತೃತ್ವ ವಹಿಸಿದ್ದಾಗ ಮೇಧಾ ಪಾಟ್ಕರ್ ಅವರು ನವೆಂಬರ್ 24, 2000 ರಂದು ಹೊರಡಿಸಿದ ಪತ್ರಿಕಾ ಪ್ರಕಟಣೆಯ ಕೇಸು ಇದಾಗಿದೆ.
ಅದರಲ್ಲಿ, ಮೇಧಾ ಪಾಟ್ಕರ್ ವಿ ಕೆ ಸಕ್ಸೇನಾ ಅವರನ್ನು ಹೇಡಿ ಎಂದು ಕರೆದು ಹವಾಲಾ ವಹಿವಾಟಿನಲ್ಲಿ ಭಾಗಿಯಾಗಿದ್ದಾರೆಂದು ಆರೋಪಿಸಿದ್ದಾರೆ. ಗುಜರಾತ್‌ನ ಜನರು ಮತ್ತು ಸಂಪನ್ಮೂಲಗಳನ್ನು ವಿದೇಶಿ ಹಿತಾಸಕ್ತಿಗಳಿಗೆ ಅಡಮಾನ ಇಡುತ್ತಿದ್ದಾರೆ ಎಂದು ಆರೋಪಿಸಿದ್ದರು ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಕಳೆದ ವರ್ಷ ಮ್ಯಾಜಿಸ್ಟರಿಯಲ್ ನ್ಯಾಯಾಲಯ, ಈ ಹೇಳಿಕೆಗಳು ಮಾನನಷ್ಟಕರ ಮತ್ತು ನಕಾರಾತ್ಮಕ ಸಾರ್ವಜನಿಕ ಭಾವನೆಯನ್ನು ಕೆರಳಿಸುವ ಉದ್ದೇಶವನ್ನು ಹೊಂದಿವೆ ಎಂದು ತೀರ್ಪು ನೀಡಿದೆ.