ರಜನಿಕಮಲ ಮನೆಯಿಂದ ಅನಾಥ, ವೃದ್ಧ ಹಾಗೂ ಮಾನಸಿಕ ಅಸ್ವಸ್ಥರಿಗೆ ಊಟ

Ravi Talawar
ರಜನಿಕಮಲ ಮನೆಯಿಂದ ಅನಾಥ, ವೃದ್ಧ ಹಾಗೂ ಮಾನಸಿಕ ಅಸ್ವಸ್ಥರಿಗೆ ಊಟ
WhatsApp Group Join Now
Telegram Group Join Now
ಅಥಣಿ: ಪಟ್ಟಣದಲ್ಲಿರುವ ರಜನಿಕಮಲ ಮನೆಯಿಂದ ಪ್ರತಿದಿನ ಅನಾಥರಿಗೆ, ವೃದ್ಧರಿಗೆ ನಿರ್ಗತಿಕರಿಗೆ ಮಾನಸಿಕ ಅಸ್ವಸ್ಥರು ಸೇರಿದಂತೆ ಪರ ಊರಿನಿಂದ ರಾತ್ರಿ ವೇಳೆ ಬಸ್ಸ್ ತಪ್ಪಿ ಬಸ್ ನಿಲ್ದಾನದಲ್ಲಿ ವಾಸಿಸುವ ಪರ ಊರಿನ ಸುಮಾರು 100 ಅಧಿಕ ಜನರಿಗೆ ರಜನಿಕಮಲ್ ಮನೆಯಿಂದ ರಾತ್ರಿ ಊಟವನ್ನು ಸುಮಾರು 12 ವರ್ಷಗಳಿಂದ ಕೊಡುತ್ತಾ ಬಂದಿದ್ದಾರೆ.
ಕೃಪಾ ಆರೋಗ್ಯ ಮತ್ತು ಸಮಾಜ ಸೇವಾ ಸಂಸ್ಥೆಯ ನೀಜಪ್ಪ ಹಿರೇಮನಿ ಹಾಗೂ ಸಂಗೀತಾ ಹಿರೇಮನಿ ದಂಪತಿಗಳು ಸೇರಿ ಅವರ ತಂದೆತಾಯಿ ರಜನಿ ಕಮಲ ಹೆಸರಿನಲ್ಲಿ ಪ್ರತಿದಿನ ಅನಾಥ, ವೃದ್ಧರಿಗೆ, ಹಾಗೂ ಮಾನಸಿಕ ಅಸ್ವಸ್ಥರಿಗೆ ರಾತ್ರಿ ವೇಳೆ ಊಟವನ್ನು ಕೊಡುತ್ತಿದ್ದಾರೆ.
ಇವರಿಗೆ ಸಹಾಯವೆಂಬಂತೆ ಪಟ್ಟಣದಲ್ಲಿ ಯಾರದಾದರೂ ಮದುವೆ, ಹುಟ್ಟುಹಬ್ಬ ಹಾಗೂ ಇನ್ನಿತರ ವಿವಿಧ ಸಭೆ ಸಮಾರಂಭಗಳಲ್ಲಿ ಉಳಿದ ಅನ್ನವನ್ನು ಈ ಆಶ್ರಮಕ್ಕೆ ತಂದುಕೊಡುತ್ತಿದ್ದಾರೆ ಮತ್ತು ಈ ಅನ್ನವನ್ನು ಸಹ ಸಂಸ್ಥಯ ವತಿಯಿಂದ ಪಟ್ಟಣದ ಅಲೆಮಾರಿ ಜನರಿಗೆ ಕೊಡುತಿದ್ದು ಇದು ಅಥಣಿ ಪಟ್ಟಣದಲ್ಲಿ ಇಂತಹ ಒಳ್ಳೆಯ ಕಾರ್ಯ ಮಾಡುತ್ತಿರುವ ಕೃಪಾ ಆರೋಗ್ಯ ಮತ್ತು ಸಮಾಜ ಸೇವಾ ಸಂಸ್ಥೆಯ ಮೊದಲ ಸಂಸ್ಥೆ ಇದಾಗಿದೆ.
ಇದಲ್ಲದೆ ಕೌಟುಂಬಿಕ ಕಲಹದಿಂದ ಗಂಡ ಹೆಂಡತಿ ಮನಸ್ಥಾಪ ಹಾಗೂ ಕುಟುಂಬ ಜಗಳದಿಂದ ಎಷ್ಟೊ ಪುರುಷರು ಕುಡಿತ ಚಟಕ್ಕೆ ಬಲಿಯಾಗಿದ್ದು ಅಂಥವರನ್ನು ಕೂಡ ಊಟ ಕೊಟ್ಟು ಆಪ್ತ ಸಮಾಲೋಚನೆ ಮಾಡಿ ಅವರ ಸಮಸ್ಯೆಯನ್ನು ಅರಿತು ಪೊಲೀಸ್ ಇಲಾಖೆಯ ಜೊತೆಗೂಡಿ ಗಂಡ ಹೆಂಡತಿಯನ್ನು ಒಂದು ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ.
ಕೃಪಾ ಆರೋಗ್ಯ ಮತ್ತು ಸಮಾಜ ಸೇವಾ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ನೀಜಪ್ಪ ಹಿರೇಮನಿಧಾನಗಳಲ್ಲಿ ಶ್ರೇಷ್ಠದಾನ ಅನ್ನದಾನ ಎಂಬ ಪುರಾಣ ಪ್ರಸಿದ್ಧ ಸತ್ಯವನ್ನು ಅನ್ನದಾನದ ಮೂಲಕ ನಾನು ಕಾಣುತ್ತಿದ್ದೇನೆ ಜಾತಿ, ಮಥ, ಪಂಥ, ಬಡವ, ಎಂಬ ಭೇದಭಾವ ಇಲ್ಲದೆ ಇಂತಹ ಕಾರ್ಯವನ್ನು ಮಾಡಿ ಅವರಲ್ಲಿ ನಾನು ದೇವರ ಸ್ವರೂಪ ಕಾಣುತಿದ್ದೆನೆ ಹಾಗೆಯೇ ಅನಾಥರು ನಿರ್ಗತಿಕರು ವೃದ್ದರು ಮಾನಸಿಕ ಅಸ್ವಸ್ಥರು ಅವರು ಕೂಡ ನಮ್ಮನ್ನು ಹಾಗೂ ಸಂಸ್ಥೆಯ ಕಾರ್ಯವನ್ನು ಮನಸಾರೆ ಹರಿಸಿ ನಮ್ಮಲ್ಲಿ ದೈವ ಸ್ವರೂಪವನ್ನು ಕಾಣುತ್ತಿದೆ ಎಂದು ಹೇಳಿದರು.-ನೀಜಪ್ಪ ಹಿರೇಮನಿ,ಕೃಪಾ ಆರೋಗ್ಯ ಸಂಸ್ಥೆಯ ಅಧ್ಯಕ್ಷ
ಕಳೆದ 12 ವರ್ಷಗಳಿಂದ ಕೃಪಾ ಆರೋಗ್ಯ ಮತ್ತು ಸಮಾಜ ಸೇವಾ ಸಂಸ್ಥೆಯಿಂದ ಇಂತಹ ಹತ್ತು ಹಲವಾರು ಸಾಮಾಜಿಕ ಸೇವಾ ಕಾರ್ಯಗಳನ್ನು ಮಾಡುತ್ತಿದ್ದು ಈ ಸಂಸ್ಥೆ ಬಾಡಿಗೆ ಕಟ್ಟಡದಲ್ಲಿದ್ದು ಇಲ್ಲಿ ವಿಶೇಷ ಮಕ್ಕಳ ಸೇವೆ ಕೂಡಾ ನಡೆಯುತ್ತಿದೆ. ಈ ಸಂಸ್ಥೆಗೆ ಸ್ವಂತ ಕಟ್ಟಡ ಇಲ್ಲದಿರುವುದು ವಿಪರ್ಯಾಸ ಸರಿ. ಈಗಲಾದರೂ ಸರ್ಕಾರ ಇಂತಹ ಸಂಸ್ಥೆಯನ್ನು ಗುರುತಿಸಿ ಸ್ವಂತ ಕಟ್ಟಡಕ್ಕೆ ಸ್ಥಳಾವಕಾಶ ಹಾಗೂ ಅನುದಾನವನ್ನು ಕಲ್ಪಿಸಿಕೊಡಬೇಕೆಂದು ಪ್ರಜ್ಞಾವಂತ ನಾಗರಿಕರ ಒತ್ತಾಯವಾಗಿದೆ.
ಸಂಸ್ಥೆಗೆ ಯಾವುದೆ ರೂಪದಲ್ಲಿ ಸಹಾಯ, ಸಹಕಾರ, ದಾನ,ಧರ್ಮ, ಮಾಡುವವರೂ ಈ ಕೆಳಗಿನ ಬ್ಯಾಂಕ ಖಾತೆಗೆ ಕಳುಹಿಸಿ ತಾವು ಕೂಡಾ ಈ ಪುಣ್ಯದ ಕೆಲಸಕ್ಕೆ ಕೈ ಜೋಡಿಸಬೇಕು.
ಖಾತೆ ವಿವರ : ಕೃಪಾ ಆರೋಗ್ಯ ಮತ್ತು ಸಮಾಜ ಸೇವಾ ಸಂಸ್ಥೆ ಸಂಕೇಶ್ವರ
ಖಾತೆ ಸಂಖ್ಯೆ :375701010032104
IFSC CODE: UBIN0537578
ಬ್ಯ್ರಾಚ್. ಸಂಕೇಶ್ವರ
ಪೋನ್ ಪೇ…9964317012, 8970228824
WhatsApp Group Join Now
Telegram Group Join Now
Share This Article