ಬಳ್ಳಾರಿ: 09.ತಾಲೂಕಿನ ಹೊಸಯರಗುಡಿ ಗ್ರಾಮದಲ್ಲಿ ಸಪ್ತಸ್ವರ ಸಾಂಸ್ಕೃತಿಕ ಬಯಲಾಟ ಕಲಾ ಟ್ರಸ್ಟ್ ಬಂಡಿಹಟ್ಟಿ ಇವರಿಂದ ಭಾನುವಾರ ರಾತ್ರಿ ಪಾರ್ಥ ವಿಜಯ ಬಯಲಾಟ ಪ್ರದರ್ಶನ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಜೆ.ಟಿ.ಫೌಂಡೇಷನ್ ಅಧ್ಯಕ್ಷರು ಹಾಗು ವಕೀಲರು ಆದ ಜೋಳದರಾಶಿ ತಿಮ್ಮಪ್ಪ ಅವರು ಮಾತನಾಡಿ, ಗಂಡು ಮೆಟ್ಟಿನ ಕಲೆ ಬಯಲಾಟವನ್ನು ಉಳಿಸಿ ಬೆಳೆಸಬೇಕು. ಇದಕ್ಕೆ ಕಲಾವಿದರಿಗೆ ಸರಕಾರ ಮತ್ತು ಕಲಾಭಿಮಾನಿಗಳು ಪ್ರೋತ್ಸಾಹ ನೀಡಬೇಕು ಎಂದರು.
ಗಂಡುಮೆಟ್ಟಿನ ಕಲೆ ಬಯಲಾಟವನ್ನು ರಾಜ್ಯ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆಸಲು ಎಲ್ಲರ ಪ್ರೋತ್ಸಾಹ ಅಗತ್ಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಯರಗುಡಿ ಚಂದ್ರಪ್ಪ, ಆಂಜನೇಯ, ಕುಬೇರಪ್ಪ, ಸುರೇಶ್, ಸೀನಪ್ಪ, ಸಪ್ತಸ್ವರ ಸಾಂಸ್ಕೃತಿಕ ಬಯಲಾಟ ಕಲಾ ಟ್ರಸ್ಟ್ ಅಧ್ಯಕ್ಷ ಹನುಮಾವಧೂತಪ್ಪ ಸೇರಿದಂತೆ ಮತ್ತಿತರರು ಉಪಸ್ಥಿತಿತರಿದ್ದರು.
ಹನುಮಾವಧೂತಪ್ಪ ಬಂಡಿಹಟ್ಟಿ ಹಾರ್ಮೋನಿಯಂ, ವೀರೇಶ್ ತಬಲಾ ಸಾಥ್ ನೀಡಿದರು.
ದ್ರೌಪದಿ ಪಾತ್ರದಲ್ಲಿ ನಾಗಮ್ಮ, ಶಚಿ ಪಾತ್ರದಲ್ಲಿ ಬಿ. ಸುಮಾ ಅವರು ಅಭಿನಯಿಸಿದರು.


