ಶಿಕ್ಷಕರ ಶಿರದಲ್ಲಿ ಜ್ಞಾನದ ನಂದಾದೀಪ ಸದಾ ಬೆಳಗಲಿ : ಪ್ರೊ ಸಿ.ಎಂ. ತ್ಯಾಗರಾಜ

Ravi Talawar
ಶಿಕ್ಷಕರ ಶಿರದಲ್ಲಿ ಜ್ಞಾನದ ನಂದಾದೀಪ ಸದಾ ಬೆಳಗಲಿ : ಪ್ರೊ ಸಿ.ಎಂ. ತ್ಯಾಗರಾಜ
WhatsApp Group Join Now
Telegram Group Join Now

ಬೆಳಗಾವಿ: ಮಹಾಂತೇಶ ನಗರ ರಹವಾಸಿಗಳ ಸಂಘದ ಶಿಕ್ಷಣ ಮಹಾವಿದ್ಯಾಲಯದ  2022- 24 ನೇ ಸಾಲಿನ  ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ದೀಪದಾನ ಸಮಾರಂಭವನ್ನು ಸಂಘದ ಮಹಾಂತ ಭವನದಲ್ಲಿ ನಡೆಯಿತು.

ಸಮಾರಂಭವನ್ನು  ಉದ್ಘಾಟಿಸಿ ಮಾತನಾಡಿದ ಪ್ರೊ.ಸಿ.ಎಮ್ . ತ್ಯಾಗರಾಜ ಮಾನ್ಯ  ಕುಲಪತಿಗಳು ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿ ರವರು ಶಿಕ್ಷಕರು ಸದಾ ಅಧ್ಯಯನದಲ್ಲಿ ತೊಡಗಿಕೊಂಡಿರಬೇಕು, ತಮ್ಮ ಜ್ಞಾನವನ್ನು ವಿಸ್ತರಿಸಿಕೊಂಡು, ವಿವಿಧ ಕೌಶಲ್ಯಗಳ ತರಬೇತಿ ಹೊಂದಿರಬೇಕು ಎಂದು ಹೇಳಿದರು.

ಭಾಷಾ ಪ್ರಬುದ್ಧತೆ, ಸಂವಹನ ಕೌಶಲ್ಯಗಳನ್ನು ಹಾಗೂ ತಾಂತ್ರಿಕ ಜ್ಞಾನವನ್ನು ನಿರಂತರವಾಗಿ ಪಡೆಯಬೇಕು. ಬದಲಾಗುತ್ತಿರುವ ಕಾಲಕ್ಕೆ  ತಕ್ಕಂತೆ ನಾವು ನಮ್ಮ ವ್ಯಕ್ತಿತ್ವ, ಜ್ಞಾನ, ಕೌಶಲ್ಯಗಳು ಬೆಳಸಿಕೊಳ್ಳಬೇಕು. ಮಾನವೀಯತೆಯ ಪ್ರತಿರೂಪವಾಗಬೇಕು, ಪುಸ್ತಕ ಪ್ರೇಮಿಗಳಾಗಬೇಕು. ಸಂಪೂರ್ಣ ಜ್ಞಾನದೊಂದಿಗೆ ವರ್ಗ ಕೋಣೆಗೆ ಪ್ರವೇಶಿಸಬೇಕು. ಶಿಕ್ಷಕ ವೃತ್ತಿ ಶ್ರೇಷ್ಠತಮವಾದದ್ದು. ಅದರ ಪಾವಿತ್ರ್ಯತೆಯನ್ನು ಸಂರಕ್ಷಿಸುವ ಗುರುತರ ಜವಾಬ್ದಾರಿ  ಶಿಕ್ಷಕರ ಮೇಲಿದೆ. ಅಧ್ಯಯನವೇ ಶಿಕ್ಷಕರ ಉಸಿರಾಗಬೇಕು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಶ್ರೀ ಲಕ್ಷ್ಮಿಕಾಂತ ಗುರುವ ಅಧ್ಯಕ್ಷರು ಮಹಾಂತೇಶ ನಗರ ರಹವಾಸಿಗಳ ಸಂಘ  ಅವರು  ಶಿಕ್ಷಕರು ಸಂಶೋಧನಾತ್ಮಕ ಮನೋಭಾವವನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುವುದರ ಮೂಲಕ ಹೊಸ ಹೊಸ ಸಂಶೋಧನೆಗಳನ್ನು ಕೈಗೊಂಡು ಸಮಾಜಕ್ಕೆ ಶ್ರೇಷ್ಠ ಕೊಡುಗೆ ನೀಡಲು ವಿದ್ಯಾರ್ಥಿಗಳನ್ನು ಪ್ರೇರೆಪಿಸಬೇಕೆಂದು ಹೇಳಿದರು. ಪ್ರಶಿಕ್ಷಣಾರ್ಥಿಗಳಿಗೆ ಜ್ಞಾನದ ಸಂಕೇತವಾದ ದೀಪದಾನ ಮಾಡಿ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.

ಮುಖ್ಯ ಅತಿಥಿಗಳಾಗಿ ಶ್ರೀ ಸಂಜೀವ ಪಟ್ಟಣಶೆಟ್ಟಿ ಗೌರವ  ಕಾರ್ಯದರ್ಶಿ ಮಹಾಂತೇಶ ನಗರ ರಹವಾಸಿಗಳ ಸಂಘ ಶ್ರೀ ರಾಜಶೇಖರ ಡೋಣಿ , ನಿರ್ದೇಶಕರು ಮಹಾಂತೇಶ ನಗರ ರಹವಾಸಿಗಳ ಸಂಘ ಹಾಗೂ ನಗರ ಸೇವಕರು ಮಹಾನಗರ ಪಾಲಿಕೆ , ನಿರ್ದೇಶಕರಾದ  ಅಪ್ಪಾಸಾಹೇಬ ವಿಭೂತಿ,  ಅರುಣ ನೇರ್ಲಿ ಉಪಸ್ಥಿತರಿದ್ದರು.

ನಯನಾ ಗಿರಿಗೌಡ ರವರು ಪ್ರಾರ್ಥಿಸಿದರು  ಡಾ. ನಿರ್ಮಲಾ ಜಿ ಬಟ್ಟಲ ಪ್ರಾಚಾರ್ಯರು  ಸ್ವಾಗತಿಸಿದರು.ಡಾ. ಗೀತಾ ದಯಣ್ಣವರ ಅತಿಥಿಗಳನ್ನು ಪರಿಚಯಿಸಿದರು. .ಪ್ರೊ.ರೂಪಾ ಅಕ್ಕಿ  ಶೈಕ್ಷಣಿಕ ವರದಿ ವಾಚಿಸಿದರು. ಡಾ.ಎಸ್ ವಿ ವಾಲಿಶೆಟ್ಟಿ ರವರು ವಿಶೇಷ ಬಹುಮಾನ  ವಿಜೇತರ ಹೆಸರಗಳನ್ನು ಘೋಷಿಸಿದರು.

ಪ್ರೊ.ಸೋನಲ ಚಿನಿವಾಲ ರವರು ನಿರೂಪಿಸಿದರು. ಕಾರ್ಯಕ್ರಮದಲ್ಲಿ ಪ್ರೊ. ಸುನೀಲ ಪಾಣಿ , ಪ್ರೊ.ಮಂಜುನಾಥ ಕಲಾಲ, ಪ್ರೊ.ಮಲ್ಲಿಕಾರ್ಜುನ ಜಮಖಂಡಿ,  ಪ್ರಶಾಂತ ಚಿನಕೋಟಿ,  ಶ್ವೇತಾ ಹೆದ್ದುರಿಶೆಟ್ಟಿ,  ವೀಣಾ ಕೋಣಿ
ಹಾಗೂ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article