ಬೆಳಗಾವಿಅಮರ ಕವಿ ಡಾ.ಡಿ.ಎಸ್.ಕರ್ಕಿ ಕನ್ನಡ ಸಾಹಿತ್ಯಿಕ/ಸಾಂಸ್ಕೃತಿಕ ಭವನ ಲೋಕಾರ್ಪಣೆಯನ್ನು ಕಸಾಪ ಬೆಳಗಾವಿ ಜಿಲಾಧ್ಯಕ್ಷರು ಇವರು ದಿ:೦೯/೦೨/೨೦೨೬ ರಂದು ರಾಮದುರ್ಗ ತಾಲೂಕಿನ ಹಿರೇಕೊಪ್ಪ ಕೆ.ಎಸ್.ಗ್ರಾಮದಲ್ಲಿ ಲೋಕಾರ್ಪಣೆ ಮಾಡಿದರು. ಶ್ರೀಮತಿ.ಮಂಗಲಾ ಮೆಟಗುಡ್ಡ ಮಾತನಾಡುತ್ತಾ ನಾಡಿನ ಸಾಹಿತ್ಯ ಲೋಕಕ್ಕೆ ಬಹುದೊಡ್ಡ ಕೊಡುಗೆಯನ್ನು ಕೊಟ್ಟಿರುವ ಕವಿ ಯಾರದರೂ ಇದ್ದರೆ, ಅವರು ಅಮರಕವಿ ಡಾ.ಡಿ.ಎಸ್.ಕರ್ಕಿಯವರು ಎಂದು ನಾವೆಲ್ಲ ಹೆಮ್ಮೆಯಿಂದ ಹೇಳಬಹುದು. ನಾಡಗೀತೆಗೆ ಸರಿಸಮನಾಗಿ ಮತ್ತು ಅರ್ಥಗರ್ಭಿತವಾಗಿ ಹಚ್ಚೇವು ಕನ್ನಡದ ದೀಪ ಎಂಬ ಕವನವನ್ನು ರಚಿಸುವುದರ ಮೂಲಕ ನಾಡ ದೇವಿಗೆ ಮತ್ತು ಭಾರತಮಾತೆಗೆ ಕನ್ನಡದ ಜ್ಯೋತಿಯನ್ನು ಸದಾ ಕಾಲ ಬೆಳಗುವಂತೆ ಮಾಡಿದ್ದಾರೆ. ತಮ್ಮ ಬಾಲ್ಯದ ಜೀವನವನ್ನು ಕಷ್ಟದಲ್ಲಿ ಕಳೆದ ಡಾ.ಡಿ.ಎಸ್.ಕರ್ಕಿ ಅವರು ಕನ್ನಡ ಸಾರಸ್ವತ ಲೋಕಕ್ಕೆ ಚಿರಕಾಲ ನೆನಪಿನಲ್ಲಿ ಉಳಿಯುವಂತಹ ಕನ್ನಡ ಕವನ ಸಂಕಲನಗಳನ್ನು ಹಾಗೂ ಅನೇಕ ಪ್ರಬಂಧಗಳನ್ನು ಕೂಡ ರಚಿಸಿದ್ದಾರೆ. ಅವರು ಹಚ್ಚಿದ ಕನ್ನಡದ ದೀಪ ಸದಾ ಕಾಲ ಬೆಳಗುವಂತೆ ನಾವೆಲ್ಲರೂ ಕನ್ನಡ ತಾಯಿಯ ಸೇವೆಯನ್ನು ಮಾಡೋಣ ಎಂದರು.
ಈ ಕನ್ನಡ ಸಾಂಸ್ಕೃತಿಕ ಭವನದ ಸದುಪಯೋಗವನ್ನು ಚಿಕ್ಕೊಪ್ಪ, ಬಾಗೋಜಿಕೊಪ್ಪ ಗ್ರಾಮಸ್ಥರು ಪಡೆಯಬೇಕು ಎಂದರು. ತ್ರಿವಿದ ದಾಸೋಹ ಮೂರ್ತಿ ಪೂಜ್ಯ ಶ್ರೀ.ವೀರಭದ್ರ ಮಹಾಸ್ವಾಮಿಗಳು ಅಂಕಲಿ, ಚಿಕ್ಕೊಪ್ಪ ಕೆ.ಎಸ್.ಹಾಗೂ ಶ್ರೀ.ಮ.ಘ.ಚ.ಡಾ.ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು ಬಾಗೋಜಿಕೊಪ್ಪ ದಿವ್ಯ ಸಾನಿಧ್ಯವನ್ನು ವಹಿಸಿದ್ದರು. ವಿದ್ಯಾರ್ಥಿಗಳೆಲ್ಲ ತಾವು ಉತ್ತಮ ವ್ಯಾಸಂಗ ಮಾಡಿ, ಡಾ.ಡಿ.ಎಸ್.ಕರ್ಕಿ ಅವರಂತೆ ಆಗಬೇಕು ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು. ಶ್ರೀ.ವೆಂಕಟೇಶ ಹುಣಶಿಕಟ್ಟಿ ಹಿರಿಯ ಸಾಹಿತಿಗಳು ಹಲಗತ್ತಿ ಅವರು ಮಾತನಾಡಿ ವಿದ್ಯಾರ್ಥಿಗಳು ಕನ್ನಡ ಭಾಷೆಯ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಲು ತಿಳಿಸಿದರು. ಸಾಹಿತಿ ಹಾಗೂ ಹು-ಧಾ ಮಾಜಿ ಮಹಾ ಪೌರರಾದ ಶ್ರೀ ಪಾಂಡುರಂಗ ಪಾಟೀಲ ಅತಿಥಿಗಳಾಗಿ ಮಾತನಾಡಿ ಡಾ.ಡಿ.ಎಸ್.ಕರ್ಕಿ ಅವರ ನೆನಪಿನಲ್ಲಿ ಗ್ರಾಮಕ್ಕೆ ಸೇರುವ ರಸ್ತೆ ಮಹಾದ್ವಾರ ನಿರ್ಮಿಸಿ ಸದಾ ನೆನಪಿನಲ್ಲಿ ಉಳಿಯುವಂತೆ ಮಾಡಬೇಕು ಎಂದರು.
ಶ್ರೀ.ಪಾಂಡುರಂಗ ಜಟಗನ್ನವರ ರಾಜಶೇಖರ ಕರ್ಕಿ ಭವನದಲ್ಲಿ ಕನ್ನಡ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕೆಂಬ ರೂಪರೇಷೆ ತಿಳಿಸಿದರು. ಸಣ್ಣಪ್ಪ ಸನದಿ ಗ್ರಾಮಪಂಚಾಯತಿ ಅಧ್ಯಕ್ಷರು ಹಿರೇಕೊಪ್ಪ ಕೆ.ಎಸ್. ಅಧ್ಯಕ್ಷತೆಯನ್ನು ವಹಿಸಿದ್ದರು. ವಿ.ಎಂ.ಅಂಗಡಿ ಸ್ವಾಗತಿಸಿದರು. ಎಂ.ವೈ.ಮೆಣಸಿನಕಾಯಿ ವಂದಿಸಿದರು. ಕೃಷ್ಣಾ ಪಂಚಗಾವಿ, ಉಮೇಶ ಕೊಳವಿ, ಮಹಾದೇವ ಆರೇರ, ಪತ್ರೆಪ್ಪ ಮೆಳವಂಕಿ, ಪ್ರಕಾಶ ಕಾತರಕಿ, ಗುರು ಕರ್ಕಿ, ಶ್ರೀಕಾಂತ ಮೆಳವಂಕಿ, ಎಂ.ಪಿ.ಕರ್ಕಿ, ಸಚಿನ ಹತ್ತಿಕಟಗಿ, ರವಿ ಕರ್ಕಿ, ಮೋಹನ ಕರ್ಕಿ, ಬಾಬಣ್ಣ ಕರ್ಕಿ, ತಾಲೂಕು ಕಸಾಪ ಗೌ.ಕಾರ್ಯದರ್ಶಿ ರಮೇಶ ಬಿಕ್ಕನ್ನವರ, ಕಲ್ಲಪ್ಪ ಪೂಜೇರ, ಸುರೇಶ ಹುಚ್ಚನ್ನವರ, ಬೆಳಗಾವಿ ಕಸಾಪ ಅಧ್ಯಕ್ಷ ಸುರೇಶ ಹಂಜಿ, ರಂಗನಾಥ ಪಾಟೀಲ, ಅನ್ನಪೂರ್ಣ ಕನೋಜ, ಗೌರಿ ಕರ್ಕಿ, ಸಾವಿತ್ರಿ ಹೊತ್ತಗಿಮಠ, ಗೌರಾದೇವಿ ತಾಳಿಕೋಟಿಮಠ, ಸಾಹಿತ್ಯ ಭವನದ ಉಸ್ತುವಾರಿ ಸಮಿತಿಯವರು ದಾನಿಗಳಾದ ರವಿ ಶಿವಲಿಂಗಪ್ಪ ಕರ್ಕಿ, ಎಲ್ಲ ಶಾಲೆಯ ಶಿಕ್ಷಕರು, ಗ್ರಾಮಸ್ಥರು, ವಿದ್ಯಾರ್ಥಿ, ವಿದ್ಯಾರ್ಥಿಯರು ಉಪಸ್ಥಿತರಿದ್ದರು. ದಿ:೧೦/೦೨/೨೦೨೬


