ಸರಳಾದೇವಿ ಕಾಲೇಜಿನ ಅಭಿವೃದ್ಧಿಯಲ್ಲಿ ಮೌನೇಶ್ ಪಾತ್ರ ಅನನ್ಯ: ಡಾ.‌ಸಿ ಎಚ್ ಸೋಮನಾಥ್

Ravi Talawar
ಸರಳಾದೇವಿ ಕಾಲೇಜಿನ ಅಭಿವೃದ್ಧಿಯಲ್ಲಿ ಮೌನೇಶ್ ಪಾತ್ರ ಅನನ್ಯ: ಡಾ.‌ಸಿ ಎಚ್ ಸೋಮನಾಥ್
WhatsApp Group Join Now
Telegram Group Join Now
ಬಳ್ಳಾರಿ, ಮೇ 16: ನಗರದ ಪ್ರತಿಷ್ಠಿತ ಎಸ್ ಎಸ್ ಎ ಸರಕಾರಿ ಪ್ರಥಮ‌ದರ್ಜೆ ಕಾಲೇಜಿನ ಅಭಿವೃದ್ಧಿಯಲ್ಲಿ ಪತ್ರಾಂಕಿತ ವ್ಯವಸ್ಥಾಪಕ ಎ. ಮೌನೇಶ್ ಅವರ ಪಾತ್ರ ಅನನ್ಯ ಎಂದು ಪ್ರಾಚಾರ್ಯ ಡಾ.‌ಸಿ. ಎಚ್ ಸೋಮನಾಥ‌ ಅವರು ಶ್ಲಾಘಿಸಿದರು.
 ಕಾಲೇಜಿನ ಸಭಾಂಗಣದಲ್ಲಿ ಬುಧವಾರ,  ಸ್ವಯಂ ನಿವೃತ್ತಿ ಪಡೆದಿರುವ  ಎ.‌ಮೌನೇಶ ಅವರಿಗೆ ಅಧ್ಯಾಪಕರ ಸಂಘ ಸೇರಿದಂತೆ ವಿವಿಧ ಸಂಘಗಳು ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ತಮ್ಮ‌ ಕಾರ್ಯಕ್ಷಮತೆ, ದಕ್ಷತೆ, ಅನುಭವದಿಂದ ಕಾಲೇಜಿಗೆ ಅತ್ಯುತ್ತಮ ಸೇವೆ ಸಲ್ಲಿಸಿದ್ದಾರೆ ಎಂದು ಹೇಳಿದರು.ಕಾಲೇಜಿನ ಹಳೆಯ‌ ವಿದ್ಯಾರ್ಥಿಯಾಗಿರುವ ಎ. ಮೌನೇಶ ಅವರ ಆಡಳಿತ ಕೌಶಲ್ಯ ಇತರರಿಗೆ ಮಾದರಿ. ಕಾಲೇಜಿನ ಏಳ್ಗೆಗಾಗಿ ಸ್ವಯಂ ನಿವೃತ್ತಿ ಪಡೆಯುವುದು ಬೇಡವೆಂದು ತಾವು ಸೇರಿದಂತೆ ಹಿರಿಯ ಪ್ರಾದ್ಯಾಪಕರು ಒತ್ತಾಯಿಸಿದ್ದೆವು. ಆದರೆ ಆರೋಗ್ಯದ ದೃಷ್ಟಿಯಿಂದ ಸ್ವಯಂ‌ ನಿವೃತ್ತಿ ಪಡೆದಿರುವ ಅವರ ವಿಶ್ರಾಂತ ಜೀವನ‌ ಸುಖಕರವಾಗಿರಲಿ ಎಂದು‌ ಹಾರೈಸಿದರು.ನಿವೃತ್ತ ಪ್ರಾಚಾರ್ಯ ಡಿ. ಗಂಗಣ್ಣ ಅವರು ಮಾತನಾಡಿಪತ್ರಾಂಕಿತ ವ್ಯವಸ್ಥಾಪಕ ಎ. ಮೌನೇಶ್ ಅವರು ಸಂಸ್ಥೆಗೆ ಆಸ್ತಿಯಾಗಿದ್ದರು. ಕಾಲೇಜಿಗೆ ಇವರಿಂದ ಉತ್ತಮ ಸೇವೆ ದೊರಕಿದೆ. ದಕ್ಷತೆಯಿಂದ‌ ಕಾರ್ಯನಿರ್ವಹಿಸಿದ್ದಾರೆ ಎಂದರು.
ನಗರದ ಸರಕಾರಿಮಹಿಳಾ‌ ಪದವಿ ಕಾಲೇಜಿನ ಪ್ರಾಚಾರ್ಯ ನಾರಾಯಣಪ್ಪ ಅವರು ಮಾತನಾಡಿ, ಮೌನೇಶ್ ಅವರನ್ನುವಿದ್ಯಾರ್ಥಿ‌ ಜೀವನದಿಂದಲೂ ಬಲ್ಲೆ. ಕೌಶಲ್ಯ ಆಡಳಿತಗಾರ ಸ್ವಯಂ ನಿವೃತ್ತಿ ತೆಗೆದುಕೊಳ್ಳುತ್ತಿರುವುದಕ್ಕೆ ವಿಷಾಧಿಸಿದರು.ಸರಳ, ಸಜ್ಜನಿಕೆ ವ್ಯಕ್ತಿತ್ವದ‌ ಮೌನೇಶ್ ಅವರು ಸಮಯ ಲೆಕ್ಕಿಸದೇ ಕಚೇರಿಯಲ್ಲಿ ದುಡಿಯುತ್ತಿದ್ದರು ಎಂದು‌ ಹೇಳಿದರು. ನಿವೃತ್ತ ಪ್ರಾಧ್ಯಾಪಕಪ್ರೊ. ಆರ್. ಮನೋಹರ್ ಅವರು ಮಾತನಾಡಿ, ಕಾರ್ಯ ಒತ್ತಡಗಳಿಂದ ಆರೋಗ್ಯ ಕಳೆದುಕೊಂಡರು. ನಿವೃತ್ತಿ ಜೀವನ‌ ಸಂತಸದಿಂದ‌ ಕೂಡಿರಲಿ ಎಂದು ಹಾರೈಸಿದರು.ಸರಕಾರಿ ಮಹಿಳಾ ಪ್ರಥಮ ದರ್ಜೆ  ಕಾಲೇಜಿನ‌ ನಿವೃತ್ತ ಪ್ರಾಚಾರ್ಯ ಪ್ರೊ. ರಾಘುವಲು, ಹೈ.‌ಕ ಪ್ರದೇಶದಲ್ಲಿಯೇ ಆಡಳಿತ ವ್ಯವಹಾರದಲ್ಲಿ ಕೌಶಲ್ಯ ಹೊಂದಿದ್ದ ಮೌನೇಶ್ ಅವರುಮಂದಹಾಸದಿಂದ ನಮ್ಮ ಸಮಸ್ಯೆಗಳನ್ನು ಆಲಿಸಿ ಪರಿಹರಿಸುತ್ತಿದ್ದರು ಎಂದು ಕೊಂಡಾಡಿದರು.
ಜಿಲ್ಲಾ ಸರಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದ ಅಧ್ಯಕ್ಷ ಡಾ. ಟಿ. ದುರುಗಪ್ಪ ಮಾತನಾಡಿ,  ಮೌನೇಶ್ ಅವರು ಅತಿಥಿ ಉಪನ್ಯಾಸಕರ ಯಾವುದೇ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಿ ಪರಿಹರಿಸುತ್ತಿದ್ದರು. ಅನುದಾನ ಬಂದ‌ ಬಳಿಕವೂ ಕೆಲವು ಬೇರೆ ಕಾಲೇಜುಗಳ ಅತಿಥಿ ಉಪನ್ಯಾಸಕರ ತಿಂಗಳಾದರೂ‌ ಸಂಬಳವಾಗುವುದಿಲ್ಲ ಆದರೆ ನಮ್ಮ ಕಾಲೇಜಿನ ಉಪನ್ಯಾಸಕರ ಖಾತೆಗೆ ಅಂದೇ  ಜಮ ವಾಗುತ್ತಿದ್ದದ್ದು ಮೌನೇಶ್ ಅವರ  ಕಾರ್ಯಕ್ಷಮತೆ ಕಾರಣ ಎಂದು ತಿಳಿಸಿದರು.
ದೈಹಿಕ‌ ನಿರ್ದೇಶಕ ಪಂಪನಗೌಡ, ಕಾಲೇಜು ಹೆಮ್ಮರವಾಗಿ ಬೆಳೆಯಲು, ಅಭಿವೃದ್ಧಿ ಹೊಂದಲು ಮೌನೇಶ್ ಅವರ ಪಾತ್ರ ಇದೆ ಎಂದು ಶ್ಲಾಘಿಸಿದರು.ಎ. ಮೌನೇಶ್ ಅವರು ಮಾತನಾಡಿ ನಾನು ಉತ್ತಮವಾಗಿ‌ ಕರ್ತವ್ಯ ನಿರ್ವಹಿಸಲು ಕಾಲೇಜಿನ‌ ಎಲ್ಲಾ‌ ಪ್ರಾಚಾರ್ಯರು, ಅಧ್ಯಾಪಕರು, ಬೋಧಕೇತರ ಸಿಬ್ಬಂದಿ ಅವರ ಸಹಕಾರ, ಬೆಂಬಲ ಕಾರಣ. ಮುಂದೆಯೂ ಕಾಲೇಜಿನ‌ ಪ್ರಗತಿಗೆ ಶ್ರಮಿಸುವೆ ಎಂದರು.
ಮೌನೇಶ್ ಅವರ ಪುತ್ರ, ಕಿಷ್ಕಿಂದೆ ವಿವಿಯ ಸಹಾಯಕ ಪ್ರಾಧ್ಯಾಪಕ ಗುರುರಾಜ ಆಚಾರ್ಯ ಮಾತನಾಡಿ,  ತಂದೆಯವರುವಿದ್ಯೆ, ಗುಣ, ಹಣ ನಿರ್ವಹಣೆ ಕಲಿತರೆ ಜೀವನವನ್ನು ಯಶಸ್ವಿಯಾಗಬಹುದು ಎಂಬ ಮಾತುಗಳು ನನ್ನ ಏಳ್ಗೆಗೆ ಕಾರಣವಾಗಿವೆ.ಇವರ ನಿಸ್ವಾರ್ಥ ಸೇವೆಯನ್ನು  ಕಾಲೇಜು ಯಾವತ್ತೂ ಮರೆಯುದಿಲ್ಲ. ಇದೇ ಕಾಲೇಜಿನಲ್ಲಿ ನಾನು ಪ್ರವೇಶ ಪಡೆದಾಗ ಅಪ್ಪ ಹೇಳಿದ್ದು ಒಂದೇ, ನನ್ನ ‌ಹೆಸರು ಉಳಿಯುವಂತೆ ನೀನಿರಬೇಕು ಎಂದು ಭಾವುಕರಾದರು.
ಕಾಲೇಜಿನ ನಿಕಟಪೂರ್ವ ಪ್ರಾಚಾರ್ಯರಾದ ಪ್ರೊ.‌ಮೋನಿಕಾ‌ ರಂಜನಾ, ಡಾ. ಮಂಜುನಾಥ ರೆಡ್ಡಿ, ಪ್ರೊ. ಇಂದಿರಾ, ಡಾ. ಶಾಂತಲಾ,ಡಾ. ಶ್ರೀದೇವಿ,   ಹೊಸಪೇಟೆ ಎಸ್ ಎಸ್ ಎ‌ ಎಸ್ ಸರಕಾರಿ ಪ್ರಥಮ‌ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕರಾದಪ್ರೊ. ಟಿ. ವೀರಭದ್ರಪ್ಪ, ಡಾ. ದೇವಣ್ಣ, ಕುರುಗೋಡು ಸರಕಾರಿ ಪದವಿ ಕಾಲೇಜಿನ ಸಹ ಪ್ರಾಧ್ಯಾಪಕ  ಡಾ. ಶಶಿಕಾಂತ‌ ಬಿಲ್ವ, ಕನ್ನಡ ಉಪನ್ಯಾಸಕ ಡಾ ಕೆ. ‌ಬಸಪ್ಪ, ನಿವೃತ್ತ ಅಧ್ಯಾಪಕ  ಪ್ರೊ. ಈಶ್ವರ್, ಅವರೊಂದಿಗಿನ ಒಡನಾಟ ಹಾಗೂ ಕಾರ್ಯಕ್ಷಮತೆ ಮೆಚ್ಚುಗೆ ವ್ಯಕ್ತಪಡಿಸಿದರು.
ಅಧೀಕ್ಷಕ ಯುವರಾಜ್ ಸೇರಿದಂತೆ ವಿವಿಧ ವಿಭಾಗಗಳ ಮುಖ್ಯಸ್ಥರು, ಬೋಧಕರೇತ ಸಿಬ್ಬಂದಿ, ಅತಿಥಿ ಉಪನ್ಯಾಸಕರು ಮೌನೇಶ್‌ ಅವರು ಸನ್ಮಾನಿಸಿ ಗೌರವಿಸಿದರು.ಅಧ್ಯಾಪಕರ ಸಂಘದ ಕಾರ್ಯದರ್ಶಿ ಡಾ. ಮಂಜುನಾಥ್ ಎಸ್. ಅವರು ಸ್ವಾಗತಿಸಿ, ನಿರೂಪಿಸಿದರು.
WhatsApp Group Join Now
Telegram Group Join Now
Share This Article