ಗಣಿತ ಕಲಿಕಾ ಆಂದೋಲನ : ಸ್ವಯಂ ಸೇವಕರ ತರಬೇತಿ ಕಾರ್ಯಾಗಾರ

Hasiru Kranti
ಗಣಿತ ಕಲಿಕಾ ಆಂದೋಲನ : ಸ್ವಯಂ ಸೇವಕರ ತರಬೇತಿ ಕಾರ್ಯಾಗಾರ
WhatsApp Group Join Now
Telegram Group Join Now

ಬೈಲಹೊಂಗಲ :  ತಾಲೂಕಿನ ಬೆಳವಡಿಯಲ್ಲಿ ಗಣಿತ ಕಲಿಕಾ ಆಂದೋಲನದ ಗ್ರಾಮ ಪಂಚಾಯಿತಿ ಮಟ್ಟದ ತಂಡದ ನಾಯಕರು ಮತ್ತು ಸ್ವಯಂ ಸೇವಕರ ತರಬೇತಿ ಕಾರ್ಯಾಗಾರ ಜರುಗಿತು.

ಬೈಲಹೊಂಗಲ ತಾಲೂಕಿನ ಬೆಳವಡಿಯ ಸಿ. ಆರ್. ಸಿ ಕೇಂದ್ರದಲ್ಲಿ ಬೆಳವಡಿ ಮತ್ತು ಬುಡರಕಟ್ಟಿ ಕ್ಲಸ್ಟರ್ ನ ಗ್ರಾಮ ಪಂಚಾಯಿತಿ ತಂಡದ ನಾಯಕರು ಮತ್ತು ಸ್ವಯಂಸೇವಕರ ತರಬೇತಿ ಕಾರ್ಯಾಗಾರವನ್ನು ಶಾಲಾ ಶಿಕ್ಷಣ ಇಲಾಖೆ ಹಾಗೂ ಅಕ್ಷರ ಫೌಂಡೇಶನ್ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ನಡೆಸಲಾಯಿತು. ಈ ವೇಳೆ ಬೆಳವಡಿಯ ಸರ್ಕಾರಿ ಶಾಲೆಯ ಎಸ್. ಡಿ .ಎಂ.ಸಿ ಅಧ್ಯಕ್ಷರು ಉದ್ಘಾಟನೆ ಮಾಡಿ ಗಣಿತ ಕಲಿಕಾ ಆಂದೋಲನ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ವೇಳೆ ಪ್ರಾಸ್ತಾವಿಕವಾಗಿ ಜಿಲ್ಲಾ ಸಂಯೋಜಕರಾದ ಹನುಮಂತ ಮಸಾಲಿ ಅವರು ಗಣಿತ ಕಲಿಕಾ ಆಂದೋಲನದ ಯೋಜನೆಯ ಉದ್ದೇಶದ ಕುರಿತು ತಂಡದ ನಾಯಕರಿಗೆ ಹಾಗೂ ಸ್ವಯಂ ಸೇವಕರಿಗೆ ಸವಿವರವಾಗಿ ಮಾಹಿತಿ ನೀಡಿ ತಮ್ಮ ಮನೆ, ಶಾಲೆ ,ಗ್ರಾಮದ ಶೈಕ್ಷಣಿಕ ಪ್ರಗತಿಗಾಗಿ ತಮ್ಮ ಜವಾಬ್ದಾರಿಯ ಕಾಳಿಜಿಯ ಕುರಿತು ಪ್ರೇರೇಪಿಸಿ ಮಾತನಾಡಿದರು .ನಂತರ ಜಿಲ್ಲಾ ಸಂಯೋಜಕರಾದ ಶ್ರೀ ಸಂಗಮೇಶ ಬ್ಯಾಡಗಿ ಅವರು ತಂಡದ ನಾಯಕರು ಹಾಗೂ ಸ್ವಯಂಸೇವಕರ ಜವಾಬ್ದಾರಿ ಕುರಿತಾದ ಮಾರ್ಗಸೂಚಿ ನೀಡಿ ಗಣಿತ ಸ್ಪರ್ಧೆಯ ಕುರಿತು ಮತ್ತು ಶಾಲೆಗೆ ಸಹಕಾರ ನೀಡುವ ಕುರಿತು ವಿವರಣೆ ನೀಡಿದರು.

ತದನಂತರ ಕ್ಲಸ್ಟರ್ ಸಂಯೋಜಕರಾದ ಗಿರಿಗೌಡ್ ಪಾಟೀಲ್ ಮತ್ತು ವಾಸುದೇವ್ ಅವರು GKA 1.0 ಮತ್ತು 2.0 ಗಣಿತ ಕಿಟ್ ನ ಪರಿಚಯ ಮತ್ತು ಬಳಕೆಯ ಬಗ್ಗೆ ಪರಿಚಯ ಮಾಡಿದರು. ಅಂತಿಮದಲ್ಲಿ ಸ್ವಯಂಸೇವಕರು ಮತ್ತು ತಂಡದ ನಾಯಕರು ಗ್ರಾಮದ ಶೈಕ್ಷಣಿಕ ಪ್ರಗತಿಗಾಗಿ ತಮ್ಮ ಅನುಭವವನ್ನು ಹಂಚಿಕೊಂಡರು . ಈ ತರಬೇತಿಯಲ್ಲಿ ಬೆಳವಡಿ ಮತ್ತು ಬುಡರಕಟ್ಟಿ ಕ್ಲಸ್ಟರ್ ನಿಂದ 43 ಜನ ತಂಡದ ನಾಯಕರು ಮತ್ತು ಸ್ವಯಂಸೇವಕರು ಹಾಜರಿದ್ದರು.

ಈ ಕಾರ್ಯಕ್ರಮದಲ್ಲಿ ಬೆಳವಡಿ ಶಾಲೆಗಳ ಎಸ್ ಡಿ ಎಂ ಸಿ ಅಧ್ಯಕ್ಷರುಗಳಾದ ಬಸಪ್ಪ ಪೂಜೇರಿ ,ಶೆಟ್ಟೆಪ್ಪ ಸತ್ತಿಗೇರಿ, ಸುರೇಶ ಹಡಪದ, ಸಂಗಯ್ಯ ಚಚಡಿ ಹಾಗೂ
ಬುಡರಕಟ್ಟಿ ಮತ್ತು ಬೆಳವಡಿ ಕ್ಲಸ್ಟರ್ ನ ತಂಡದ ನಾಯಕರು ಹಾಗೂ ಸ್ವಯಂಸೇವಕರು ಹಾಜರಿದ್ದರು.

WhatsApp Group Join Now
Telegram Group Join Now
Share This Article