ಪೊಲೀಸರಿಂದ ಮಟಕಾ ಕಿಂಗ್ ಪಿನ್ ಗಳ ಮನೆಗಳ ಶೋಧ

Sandeep Malannavar
ಪೊಲೀಸರಿಂದ ಮಟಕಾ ಕಿಂಗ್ ಪಿನ್ ಗಳ ಮನೆಗಳ ಶೋಧ
WhatsApp Group Join Now
Telegram Group Join Now
ಬಳ್ಳಾರಿ:ಫೆ,11- ಜಿಲ್ಲೆಯಲ್ಲಿ ಕಳೆದ ಒಂದು ತಿಂಗಳ ಅವಧಿ ಯಲ್ಲಿ ಅಕ್ರಮ ದಂಧೆಗಳ ವಿರುದ್ಧ ಒಂದು ನೂರು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಈ ಕುರಿತು ಬಳ್ಳಾರಿ ವಲಯದ ಐಜಿಪಿ ಡಾ.ಪಿ.ಎಸ್. ಹರ್ಷ ಮತ್ತು ಎಸ್ಪಿ ಡಾ.ಸುಮನ್ ಡಿ ಪನ್ನೇಕರ್ ಅವರು ಜಂಟಿ ಹೇಳಿಕೆ ನೀಡಿದ್ದು . “ಬಳ್ಳಾರಿ ವಲಯದಲ್ಲಿ ಅಕ್ರಮ ಚಟುವಟಿಕೆಗಳ ವಿರುದ್ಧ ವ್ಯಾಪಕ ದಾಳಿ ಕೈಗೊಂಡಿದೆ. ಬಳ್ಳಾರಿ, ವಿಜಯನಗರ, ಕೊಪ್ಪಳ, ರಾಯಚೂರಿನಲ್ಲಿ ನಿರ್ದಿಷ್ಟವಾಗಿ ಮಟ್ಕಾ, ಜೂಜು, ಮರಳು ದಂಧೆ, ಪಡಿತರ ಅಕ್ಕಿ ಅಕ್ರಮ ಸಾಗಾಟ ವಿರುದ್ಧ ಕಾರ್ಯಾ ಚರಣೆ ನಡೆಸುತ್ತಿದೆ,
ಬಳ್ಳಾರಿ ಜಿಲ್ಲೆ ಒಂದರಲ್ಲೇ ಕಳೆದ ಒಂದು ತಿಂಗಳಲ್ಲಿ 100 ಪ್ರಕರಣ ದಾಖಲಿಸಿ, ಮಟಕಾ ಕಿಂಗ್ ಪಿನ್ ಗಳ ಮನೆ ಶೋಧನೆಗೆ ವಾರಂಟ್ ಪಡೆದು, ಅವರ ಮನೆಗಳಲ್ಲೂ ಹುಡುಕಾಟ ನಡೆಸುವ ಕಾರ್ಯ ನಡೆಯುತ್ತಿದೆಂದು ಹೇಳಿದ್ದಾರೆ. ಮಟಕಾ ಕಿಂಗ್ ಮನೆಗಳ ಶೋಧ ಕಾರ್ಯ ನಡೆಸುವ ಕಾರ್ಯ ಮುಂದುವರೆದಿದೆ.
“ಡ್ರಗ್ಸ್ ವಿರುದ್ಧವೂ ನಾವು ನಿರಂತರ ಕಾರ್ಯಾಚರಣೆ ನಡೆಸುತ್ತಿದ್ದೇವೆ. ಎಲ್ಲ ಬಗೆಯ ದಂಧೆಗಳಲ್ಲಿ ಆರೋಪಿಗಳನ್ನು ಸೆರೆಹಿಡಿಯುವುದರ ಜೊತೆಗೆ, ದಂಧೆಗಳ ಕಿಂಗ್ ಪಿನ್, ಬುಕ್ಕಿಗಳನ್ನು ಹತ್ತಿಕ್ಕುವ ಕಾರ್ಯ ನಡೆಯುತ್ತಿದೆಂದಿದ್ದಾರೆ.
WhatsApp Group Join Now
Telegram Group Join Now
Share This Article