ಮಾರೇಡುಮಿಲ್ಲಿ: ಆಂಧ್ರಪ್ರದೇಶದ ಅಲ್ಲೂರಿ ಸೀತಾರಾಮ ರಾಜು ಜಿಲ್ಲೆಯ ಮಾರೇಡುಮಿಲ್ಲಿ ಅರಣ್ಯ ಪ್ರದೇಶದಲ್ಲಿ ಮಂಗಳವಾರ ಭದ್ರತಾ ಪಡೆಗಳೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಕನಿಷ್ಠ ಆರು ಮಾವೋವಾದಿಗಳು ಸಾವನ್ನಪ್ಪಿದ್ದು, ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ ಪ್ರಮುಖ ಯಶಸ್ಸಿನಲ್ಲಿ ಒಂದಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹಿರಿಯ ಮಾವೋವಾದಿ ನಾಯಕ ಮತ್ತು ಕೇಂದ್ರ ಸಮಿತಿ ಸದಸ್ಯ ಮದ್ವಿ ಹಿಡ್ಮಾ ಸತ್ತವರಲ್ಲಿ ಸೇರಿದ್ದಾರೆ ಎಂದು ತಿಳಿದು ಬಂದಿದೆ.
ನಕ್ಸಲೀಯ ಕಮಾಂಡರ್ ಹಿಡ್ಮಾ ಸಾವಿನ ಸುದ್ದಿ ಮತ್ತೊಮ್ಮೆ ಅವರ ರಕ್ತಸಿಕ್ತ ಇತಿಹಾಸವನ್ನು ಬೆಳಕಿಗೆ ತಂದಿದೆ. 1 ಕೋಟಿ ರೂ. ಬಹುಮಾನವನ್ನು ಹೊಂದಿದ್ದ ಮಾದ್ವಿ ಹಿಡ್ಮಾ ಭಯ ಹುಟ್ಟಿಸುವ ವ್ಯಕ್ತಿಯಾಗಿದ್ದು, ಭದ್ರತಾ ಪಡೆಗಳು ಸಹ ಈತನ ಬಗ್ಗೆ ಕಾಡಿನಲ್ಲಿ ಹೆಚ್ಚು ಅಲರ್ಟ್ ಆಗಿದ್ದರು.
ಈತ ಛತ್ತೀಸ್‌ಗಢ, ಒಡಿಶಾ, ತೆಲಂಗಾಣ ಮತ್ತು ಮಹಾರಾಷ್ಟ್ರದ ದಟ್ಟ ಕಾಡುಗಳನ್ನು ತನ್ನ ಸುರಕ್ಷಿತ ತಾಣವಾಗಿ ಬಳಸಿಕೊಂಡಿದ್ದು, ಆಗಾಗ್ಗೆ ಹೊಂಚುದಾಳಿಗಳ ಮೂಲಕ ಸೈನಿಕರ ಮೇಲೆ ದಾಳಿ ಮಾಡುತ್ತಿದ್ದರು. ಜಿರಾಮ್ ಕಣಿವೆ (2013) ಮತ್ತು ಬಿಜಾಪುರ (2021) ನಂತಹ ದೇಶದ ಕೆಲವು ದೊಡ್ಡ ನಕ್ಸಲೀಯ ದಾಳಿಗಳ ಮಾಸ್ಟರ್ ಮೈಂಡ್ ಕೂಡ ಹಿಡ್ಮಾ ಎಂದು ಪರಿಗಣಿಸಲಾಗಿದೆ.


