ಧರ್ಮಸ್ಥಳ ವಿರುದ್ಧ ಅಪಪ್ರಚಾರ ಖಂಡಿಸಿ ಬೆಳಗಾವಿಯಲ್ಲಿ ಬೃಹತ್ ಪ್ರತಿಭಟನೆ

Ravi Talawar
ಧರ್ಮಸ್ಥಳ ವಿರುದ್ಧ ಅಪಪ್ರಚಾರ ಖಂಡಿಸಿ ಬೆಳಗಾವಿಯಲ್ಲಿ ಬೃಹತ್ ಪ್ರತಿಭಟನೆ
WhatsApp Group Join Now
Telegram Group Join Now
ಬೆಳಗಾವಿ: ಶ್ರೀ ಮಂಜುನಾಥಸ್ವಾಮಿ ನೆಲೆಸಿರುವ ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡಲು ಷಡ್ಯಂತ್ರ ನಡೆದಿದೆ. ಸೂಕ್ತ ತನಿಖೆ ನಡೆಸಿ ಧರ್ಮಸ್ಥಳ ಹೆಸರಿಗೆ ಧಕ್ಕೆ ತರುವವರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿ  ಧರ್ಮಸ್ಥಳ ಭಕ್ತಾಭಿಮಾನಿಗಳ ವೇದಿಕೆ ವತಿಯಿಂದ  ಬೃಹತ್ ಪ್ರತಿಭಟನೆ ನಡೆಸಿ ಬುಧವಾರ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ನಗರದ ರಾಣಿ ಚನ್ನಮ್ಮ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೂ ಧರ್ಮಸ್ಥಳ ಭಕ್ತಾಭಿಮಾನಿಗಳ ವೇದಿಕೆ ವತಿಯಿಂದ ಧರ್ಮಸ್ಥಳದ ಹೆಸರಿಗೆ ಮಸಿ ಬಳಿಯುತ್ತಿರುವವರ ವಿರುದ್ದ ಕ್ರಮಕ್ಕೆ ಆಗ್ರಹಿಸಿ, ಬೃಹತ್‌ ಪ್ರತಿಭಟನೆ ನಡೆಸಲಾಯಿತು.

ಬಳಿಕ ,  ಧರ್ಮಸ್ಥಳ ಭಕ್ತಾಭಿಮಾನಿಗಳಿಂದ   ರಾಣಿ ಚನ್ನಮ್ಮ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಧರ್ಮ ಪರವಾಗಿ ಜೈಕಾರ ಕೂಗಿ ಪ್ರತಿಭಟನೆ ನಡೆಸಿದರು.  ಜಿಲ್ಲಾಧಿಕಾರಿ ಕಚೇರಿ ಎದುರು  ಭಕ್ತರು ‘ಧರ್ಮ ಸಂರಕ್ಷಣೆ, ನಮ್ಮೆಲ್ಲರ ಹೊಣೆ’,    ‘ಜೈ ಧರ್ಮಸ್ಥಳ’,  ಎಂದು ಜೈಘೋಷಣೆ ಮೊಳಗಿಸಿ,  ಧರ್ಮಸ್ಥಳ  ಫಲಕಗಳನ್ನು ಪ್ರದರ್ಶಿಸಿದರು.

ಅಪ್ರಚಾರ ಮಾಡುತ್ತಿರುವವರನ್ನು ಶೀಘ್ರವೇ ಬಂಧಿಸಿ ಕಠಿಣ ಶಿಕ್ಷೆ ಕೊಡಬೇಕು. ಶ್ರದ್ಧಾ ಭಕ್ತಿಯ ಕೇಂದ್ರವಾಗಿರುವ ಧರ್ಮಸ್ಥಳದ ವಿರುದ್ಧ ಅನಾಮಿಕ ವ್ಯಕ್ತಿಗಳನ್ನು ಬಳಸಿ ಕೆಲ ಅಧರ್ಮಿಗಳು ಕುತಂತ್ರ ನಡೆಸುತ್ತಿದ್ದಾರೆ. ಆರ್ಥಿಕ, ಸಾಮಾಜಿಕ, ಸೇರಿ ಹತ್ತಾರು ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಕ್ಷೇತ್ರದ ಹೆಸರು ಹಾಳು ಮಾಡುವವರಿಗೆ ತಕ್ಕ ಶಿಕ್ಷಯಾಗಬೇಕು ಎಂದು ಆಗ್ರಹಿಸಿದರು.

ಈ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಖುದ್ದು ವೀರೇಂದ್ರ ಹೆಗ್ಗಡೆ ಅವರು ಸರ್ಕಾರಕ್ಕೆ ಪತ್ರ ಬರೆದಿದ್ದರು. ಸಿಬಿಐ ತನಿಖೆಯೂ ಆಯಿತು. ಸಾಕ್ಷ್ಯಾಧಾರಗಳ ಕೊರತೆಯಿಂದ ಸಂತೋಷ ರಾವ್ ನಿರಪರಾಧಿಯಾಗಿ ಹೊರಬಂದರು. ಇದೀಗ, ಮಹೇಶ ತಿಮ್ಮರೋಡಿ, ಗಿರೀಶ ಮಟ್ಟಣ್ಣನವರ. ಯೂಟ್ಯೂಬರ್ ಸಮೀರ್‌ ಹಾಗೂ ಇತರರು ವೀರೇಂದ್ರ ಹೆಗ್ಗಡೆ ಅವರನ್ನು ಗುರಿಯಾಗಿಸಿಕೊಂಡು ಹೋರಾಟ ಆರಂಭಿಸಿದ್ದಾರೆ’ ಇವರ ವಿರುದ್ಧ ತನಿಖೆ ನಡೆಸಬೇಕು ಎಂದು  ಒತ್ತಾಯಿಸಿದರು.

ಶವ ಹೂತಿರುವುದಾಗಿ ಹಸಿಸುಳ್ಳು:  ಶವವನ್ನು ಹೂತಿರುವುದಾಗಿ ಹೇಳಿ ಭೀಮ ಎಂಬ ವ್ಯಕ್ತಿ ಪೊಲೀಸರಿಗೆ ದೂರು ನೀಡಿದ್ದಾನೆ. ಆದರೆ, ಈತ ಹೇಳುವುದೆಲ್ಲವೂ ಹಸಿ ಸುಳ್ಳು. ಈತ ತೋರಿಸಿದ್ದ 13 ಸ್ಥಳದಲ್ಲಿ ಯಾವುದೇ ಮೃತದೇಹ ಸಿಕ್ಕಿಲ್ಲ. ಒಂದು ಸ್ಥಳದಲ್ಲಿ ಆಸ್ಥಿಪಂಜರ ಸಿಕ್ಕಿದ್ದರೂ ಅದು 40 ವರ್ಷಕ್ಕಿಂತ ಹಳೆಯದು’ ಎಂದು ಪ್ರತಿಭಟನಕಾರರು ಹೇಳಿದರು.

‘ಧರ್ಮಸ್ಥಳದ ನಂಬಿಕೆ ಮೇಲೆ ಪ್ರಹಾರ ಮಾಡಲಾಗುತ್ತಿದೆ. ಧರ್ಮಸ್ಥಳವನ್ನು ಹಾಳು ಮಾಡಬೇಕು. ಧರ್ಮಾಧಿಕಾರಿ ಮೇಲಿರುವ ನಂಬಿಕೆ, ಮಂಜುನಾಥಸ್ವಾಮಿ ಮೇಲೆ ಇರುವ ಶ್ರದ್ಧೆ ಹಾಳು ಮಾಡಬೇಕೆಂದು ಕೆಲವರು ಈ ರೀತಿ ಮಾಡುತ್ತಿದ್ದಾರೆ. ಶಬರಿಮಲೈಯ ಸ್ವಾಮಿ ಅಯ್ಯಪ್ಪ, ಶನಿ ಶಿಂಗ್ಣಾಪುರ, ದತ್ತಪೀಠದ ಮೇಲೆಯೂ ಇದೇ ರೀತಿ ಪ್ರಯತ್ನ ನಡೆದಿತ್ತು. ಕೇರಳದ ಕಮ್ಯುನಿಸ್ಟ್‌ ಸರ್ಕಾರ ಇದರ ಹಿಂದೆ ಕೆಲಸ ಮಾಡುತ್ತಿದೆ’ ಎಂದು ಪ್ರತಿಭಟನಕಾರರು ದೂರಿದರು.

ಹಿರಿಯ ನ್ಯಾಯವಾದಿ ಗಂಗಾಧರ ಆರ್.‌ ಸೋನರ್‌ ಅವರು ಮಾತನಾಡಿ,
ಧರ್ಮಸ್ಥಳ ಒಂದು ಶ್ರದ್ಧಾಕೇಂದ್ರ, ಮಂಜುನಾಥ ಸ್ವಾಮಿಯನ್ನು ಅಸಂಖ್ಯಾತ ಹಿಂದೂಗಳು ಆರಾಧಿಸುತ್ತಾರೆ.  ಯಾರೋ ಒಬ್ಬರು ಶವಗಳನ್ನು ಹೂತಿದ್ದಾಗಿ ಹೇಳಿದ ಬಳಿಕ ಎಸ್‌ಐಟಿ ರಚನೆಯಾಗಿ ತನಿಖೆ ಶುರುವಾಗಿದೆ.   ಆದರೆ,  ಶವಗಳನ್ನು ಹೂತಿರುವೆನಂದು ಹೇಳಿರುವ ಸ್ಥಳಗಳಲ್ಲಿ ಉತ್ಖನನ ನಡೆಸಿ ಪರಿಶೀಲಿಸಲಾಗುತ್ತಿದೆ, ೧೫ ಕಡೆ ತೋಡಿದರೂ ಒಂದು ಪುರುಷ ಅಸ್ಥಿಪಂಜರ ಮಾತ್ರ ಸಿಕ್ಕಿದೆ, ತನಿಖೆಯ ಭರದಲ್ಲಿ ಭಕ್ತರ ಭಾವನೆಗಳಿಗೆ ಧಕ್ಕೆಯಾಗಬಾರದು ಎಂದರು.
ಶ್ರೀಕ್ಷೇತ್ರ ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಮಾಡುತ್ತಿರುವ ಸಮಾಜಘಾತುಕ ಶಕ್ತಿಗಳನ್ನು ಪತ್ತೆ ಮಾಡಿ ಸರ್ಕಾರ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

ಧರ್ಮಸ್ಥಳದ ಬಗ್ಗೆ ಈ ಭಾಗದ ಮತ್ತು ವಿಶ್ವದ ಸಾಕಷ್ಟು ಜನರಲ್ಲಿ ಭಕ್ತಿ, ಧರ್ಮದ ಅಂದರೆ ನ್ಯಾಯದ ಸಂಕೇತವಾಗಿ ಉಳಿದಿದೆ. ಎಲ್ಲಿಯೂ ಸಿಗದ ನ್ಯಾಯ ಅಲ್ಲಿ ದೊರೆಯುತ್ತದೆ,. ತಪ್ಪು ಮಾಡಿದ ಯಾರೇ ಆಗಲಿ ಹಿಂದೆಯೂ ಮತ್ತು ಈಗಲೂ ಪ್ರಮಾಣಮಾಡಲು ಹಿಂಜೆರೆಯುತ್ತಾರೆ. ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗಡೆಯವರು ಸಾಕಷ್ಟು ಸಾಮಾಜಿಕ, ಧಾರ್ಮಿಕ ಕಾರ್ಯಗಳನ್ನು ನಡೆಸುತ್ತಿರುವುದೇ ಅಲ್ಲದೇ , ಸ್ತ್ರೀಶಕ್ತಿ ಸಂಘಗಳ ಸ್ಥಾಪನೆ ಮಾಡಿ ಬಡ ಮತ್ತು ಮದ್ಯಮ ವರ್ಗಗಳ ಆರ್ಥಿಕ ಸುಧಾರಣೆ, ಆರೋಗ್ಯ ಶಿಭಿರ, ಶಸ್ತ್ರ ಚಿಕಿತ್ಸಾವೆಚ್ಚಗಳನ್ನೂ ನೀಡಿ ಸಮಾಜ ಮುಖಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಇಂತಹ ಕ್ಷೇತ್ರದಮೇಲೆ ಆರೋಪಗಳು ಸಲ್ಲವು ಎಂದು ಕಳವಳ ವ್ಯಕ್ತಪಡಿಸಿದ್ದರು.

ಪ್ರತಿಭಟನೆಯಲ್ಲಿ ಶ್ರೀ  ಷ.ಬ್ರ. ಶಿವಸಿದ್ಧ ಸೋಮೆಶ್ವರ ಶಿವಾಚಾರ್ಯ ಮಹಾಸ್ವಾಮಿಜೀ, ಶ್ರೀ ಶಂಭುಲಿಂಗ ಶಿವಾಚಾರ್ಯ ಮಹಾಸ್ವಾಮಿಜೀ,  ಶ್ರೀ ಸಿದ್ದ ಶಿವಯೋಗಿ ಶಾಂಡಿಲೇಶ್ವರಮಠ, ಶ್ರೀ ಸಿದ್ದಲಿಂಗ ಶಿವಾಚಾರ್ಯ ಮಹಾಸ್ವಾಮಿಜೀ, ಹಿರಿಯ ನ್ಯಾಯವಾದಿ ಗಂಗಾಧರ್  ಆರ್ . ಸೋನೆರ, ಬಸವರಾಜ ಶಿ. ತುಬಾಕಿ, ಚಂದ್ರಿಕಾ ಕಳಂಕರ ಚಾರುಕೀರ್ತಿ ಸೈಬನ್ನವರ , ರತ್ನಾ ಗೋಧಿ (ಕರವಿನವರ), ಡಾ. ರವಿ ಪಾಟೀಲ, ಆನಂದ ಶೆಟ್ಟಿ, ಬಸವರಾಜ ಸೊಪ್ಪಿಮಠ, ಉಳತುರು ಸಂತೋಷ ಶೆಟ್ಟಿ,ಪ್ರಭಾಕರ ಶೆಟ್ಟಿ, ಭಾವಕಣ್ಣಾ ಬಾಂಗ್ಯಾಗೋಳ, ಡಾ. ಜಗದೀಶ ಹಾರುಗೊಪ್ಪ, ಬಂಟರ ಸಮುದಾಯ ಅಧ್ಯಕ್ಷ  ವಿಜಯ ಎಂ ಶೆಟ್ಟಿ, ಬಂಟರ ಸಮುದಾಯ ಮಾಜಿ ಅಧ್ಯಕ್ಷ ಆನಂದ ಎನ್ . ಶೆಟ್ಟಿ,  ಜಯರಾಮ ಶೆಟ್ಟಿ, ಕೀರ್ತಿ ಪ್ರಸಾದ ಶೆಟ್ಟಿ , ಸೋಮಶೇಖರ್ ಮಗದುಮ್ಮ ದರೇಪ್ಪಾ ಮಗದುಮ್ಮ,   ಹಾಗೂ ಇತರರು ಇದ್ದರು.

WhatsApp Group Join Now
Telegram Group Join Now
Share This Article