ಬಳ್ಳಾರಿ ಆ. 22 : ಇತ್ತೀಚೆಗೆ ಕೆಲವು ಕಿಡಿಗೇಡಿಗಳು ಧರ್ಮಸ್ಥಳದ ಹೆಸರಿಗೆ ಕಳಂಕ ತರುವಂತ ಕೆಲಸಗಳನ್ನು ಮಾಡುತ್ತಿದ್ದಾರೆ, ಇದರಿಂದ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ಉಂಟಾಗುತ್ತಿದೆ ಈ ಷಡ್ಯಂತರವನ್ನು ಭಾರತೀಯ ಜನತಾ ಪಕ್ಷ ತೀವ್ರವಾಗಿ ಖಂಡಿಸುತ್ತದೆ ಎಂದು ಮಾಜಿ ಸಚಿವ ಗಾಲಿ ಸೋಮಶೇಖರ ರೆಡ್ಡಿ ಕಿಡಿಗೇಡಿಗಳ ವಿರುದ್ಧ ಕಿಡಿ ಕಾರ್ಯಕರ್ತರು.
ಅವರಿಂದು ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಪ್ರತಿಭಟನಾ ಕಾರರನ್ನು ಉದ್ದೇಶಿಸಿ ಮಾತನಾಡಿ, ಹಿಂದೂಗಳ ಪವಿತ್ರ ಧಾರ್ಮಿಕ ಕ್ಷೇತ್ರವಾದ ಧರ್ಮಸ್ಥಳಕ್ಕೆ ದೇಶಾದ್ಯಂತ ಕೋಟ್ಯಂತರ ಭಕ್ತರಿದ್ದಾರೆ ಇವರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಅಪಪ್ರಚಾರವನ್ನು ಮಾಡುವಂತ ಕೆಲಸ ಪಟ್ಟಭದ್ರಾ ಮತ್ತು ಅನ್ಯ ಕೋಮಿನ ಯೂಟ್ಯೂಬರ್ ಗಳಿಂದ ನಡೆಯುತ್ತಿದೆ, ಅನಾಮಿಕ ವ್ಯಕ್ತಿ ಒಬ್ಬ ಯಾವುದೇ ಆಧಾರಗಳಿದೆ ಮಾಡಿದ ಆರು ಬಗ್ಗೆ ರಾಜ್ಯ ಸರ್ಕಾರ ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡುತ್ತಾ ಅರಣ್ಯ ಪ್ರದೇಶದಲ್ಲಿ ಎಲ್ಲೆಂದರಲ್ಲಿ ಗುಂಡಿಗಳನ್ನು ತೊಡುತ್ತಿದೆ ಇದರ ಹಿಂದೆ ದುಷ್ಟ ಶಕ್ತಿಗಳ ಸಂಚು ಮತ್ತು ಷಡ್ಯಂತರ ವಿದೆ ಇಂಥವರನ್ನು ಪತ್ತೆ ಹಚ್ಚಿ ಶಿಕ್ಷೆಗೆ ಗುರಿ ಪಡಿಸಬೇಕಾದ ಅಗತ್ಯವಿದೆ ಧರ್ಮಸ್ಥಳದ ಹೆಸರಿನಲ್ಲಿ ಇಂತಹ ಅಪಪ್ರಚಾರ ಮಾಡುತ್ತಿರುವ ದುಷ್ಟ ಶಕ್ತಿಗಳನ್ನು ಪತ್ತೆ ಹಚ್ಚಿ ಶಿಕ್ಷೆಗೆ ಒಳಪಡಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಪರಮೇಶ್ವರ್ ಅವರಲ್ಲಿ ಒತ್ತಾಯ ಮಾಡುತ್ತಿದ್ದೇವೆ ಎಂದರು.
ಈ ಪ್ರತಿಭಟನೆಯಲ್ಲಿ ಎಸ್ ಜೆ ವಿ ಮಹಿಪಾಲ್, ಐನಾಥ ರೆಡ್ಡಿ, ಪಾಲಿಕೆ ಸದಸ್ಯ ಕೆ ಹನುಮಂತಪ್ಪ, ಮುತ್ಕರ್ ಶ್ರೀನಿವಾಸ್, ಮಲ್ಲನಗೌಡ, ಭೀಮಣ್ಣ, ಸುಗುಣ, ರೂಪಶ್ರೀ, ಅರುಣಾ ಕಾಮಿನೇನಿ ಸೇರಿದಂತೆ ನೂರಾರು ಬಿಜೆಪಿ ಕಾರ್ಯಕರ್ತರಿದ್ದರು.