ಬೆಳಗಾವಿ: ಅಖಿಲ ಕರ್ನಾಟಕ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘ ರಿ ಬೆಂಗಳೂರು ಹಾಗೂ ಬೆಳಗಾವಿ ಜಿಲ್ಲಾ ಹಡಪದ ಸಮಾಜದ ನೇತೃತ್ವದಲ್ಲಿ ಡಿ.17ರಂದು ಮಂಗಳವಾರ ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಬೃಹತ್ ಪ್ರತಿಭಟನೆ ಹಾಗೂ ಬೆಳಗಾವಿ ಅಧಿವೇಶನ ಚಲೋ ನಡೆಸಲಾಗುವುದು.
ಸುವರ್ಣ ಸೌಧದ ಹತ್ತಿರ ಇರುವ ಸುವರ್ಣ ಗಾರ್ಡನ್ ಟೆಂಟ ನಂ9(ಎ)ದಲ್ಲಿ ಸಮಾಜದ ವಿವಿಧ ಬೇಡಿಕೆಗಳನ್ನು ಈಡೇರಿಸುವ ಸಲುವಾಗಿ ಸುಕ್ಷೇತ್ರ ತಂಗಡಗಿ ಮಠದ ಅನ್ನದಾನಿ ಭಾರತಿ ಅಪ್ಪಣ್ಣ ಸ್ವಾಮಿಗಳ ಸಾನ್ನಿಧ್ಯದಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಹೋರಾಟಕ್ಕೆ ಸಮಾಜ ಭಾಂದವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸಮಾಜದ ಧ್ವನಿಗೆ ಕೈಜೋಡಿಸಬೇಕೆಂದು ಸಮಾಜದ ರಾಜ್ಯ ಉಪಾಧ್ಯಕ್ಷ ಸಂತೋಷ ಹಡಪದ ವಿನಂತಿಸಿದ್ದಾರೆ.