ಅಲೆಮಾರಿ ಸಮುದಾಯಗಳಿಗೆ 1% ಮೀಸಲಾತಿ ನಿಗದಿಗೊಳಿಸಲು ಬೃಹತ್ ಪ್ರತಿಭಟನೆ

Ravi Talawar
ಅಲೆಮಾರಿ ಸಮುದಾಯಗಳಿಗೆ 1% ಮೀಸಲಾತಿ ನಿಗದಿಗೊಳಿಸಲು ಬೃಹತ್ ಪ್ರತಿಭಟನೆ
WhatsApp Group Join Now
Telegram Group Join Now
ಬಳ್ಳಾರಿ. ಆ. 26..  ಪರಿಶಿಷ್ಟ ಜಾತಿಯ ಒಳ ಮೀಸಲಾತಿಗೆ ಸಂಬಂಧಿಸಿದಂತೆ ಕರ್ನಾಟಕ  ಸರ್ಕಾರವು ನ್ಯಾಯಮೂರ್ತಿ ಡಾ. ಹೆಚ್ ನಾಗಮೋಹನ್ ದಾಸ್ ಏಕ ಸದಸ್ಯ ಆಯೋಗದ ವರದಿಯ ಅನ್ವಯ  ಕ್ಯಾಬಿನೆಟ್ ಸಭೆಯಲ್ಲಿ ಕೈಗೊಂಡ ನಿರ್ಣಯ ಮತ್ತು ಮುಖ್ಯಮಂತ್ರಿಗಳು ವಿಧಾನಸಭೆಯಲ್ಲಿ ನೀಡಿದ ಹೇಳಿಕೆ ಪ್ರವರ್ಗ-ಎ ರಲ್ಲಿಯ ಅನುಬಂಧಿತ 59 ಸೂಕ್ಷ್ಮ ಮತ್ತು ಅಲೆಮಾರಿ ಪರಿಶಿಷ್ಟ ಜಾತಿಗಳ ಸಮೂಹಕ್ಕೆ ಅಘಾತವನ್ನುಂಟು ಮಾಡಿದ ಕೂಡಲೇ ಅಲೆಮಾರಿ ಸಮುದಾಯಕ್ಕೆ ಆದ ತಾರತಮ್ಯವನ್ನು ಸರಿಪಡಿಸಿ ನ್ಯಾಯ ಒದಗಿಸಬೇಕೆಂದು ಅಲೆಮಾರಿ ಸಮುದಾಯದ ವತಿಯಿಂದ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು.
 ಪ್ರತಿಭಟನಾ ನಿರತರನ್ನು ಉದ್ದೇಶಿಸಿ ಮಾತನಾಡಿದ ಅಲೆಮಾರಿ ಅರೆ ಅಲೆಮಾರಿ ಸಂಘದ ಜಿಲ್ಲಾಧ್ಯಕ್ಷ ವೈ ಶಿವಕುಮಾರ್, ಮೀಸಲಾತಿಯನ್ನು ಜಾರಿ ಮಾಡುವ ಒತ್ತಡದಲ್ಲಿರುವ ಸರ್ಕಾರವು 101 ಪರಿಶಿಷ್ಟ ಜಾತಿಗಳಿಗೆ ಸೂಕ್ತಪ್ರಾತಿನಿಧ್ಯ ಕಲ್ಪಿಸುವ ನಿಟ್ಟಿನಲ್ಲಿ ಮೀಸಲು ಪ್ರಮಾಣವನ್ನು ಎಚ್ಚರಿಕೆಯಿಂದ ನಿಗದಿಪಡಿಸಬೇಕಿತ್ತು. ಅದರಲ್ಲೂಅಲೆಮಾರಿಗಳಂತಹ ತಬ್ಬಲಿ ಮತ್ತು ದನಿ ಇಲ್ಲದ ಸಮುದಾಯಗಳ ವಿಷಯದಲ್ಲಿ ಸರ್ಕಾರವು ಸೂಕ್ತನಿರ್ಧಾರವನ್ನು ತೆಗೆದುಕೊಳ್ಳಬೇಕಿತ್ತು. ಆದರೆ, ನಿನ್ನೆಯ ಕ್ಯಾಬಿನೆಟ್ ನಿರ್ಣಯವು ಅಲೆಮಾರಿ ಸಮುದಾಯಗಳಿಗೆಮರಣ ಶಾಸನದಂತಿದೆ ಇದನ್ನು ಸರಿಪಡಿಸಿ ಕೂಡಲೇ ಶೇಕಡ ಒಂದಷ್ಟು ಮೀಸಲಾತಿಯನ್ನು ಹೆಚ್ಚಿಸಿ ಅಲೆಮಾರಿಗಳ ಸಮುದಾಯಕ್ಕೆ ನ್ಯಾಯ ಒದಗಿಸಲು ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮುಖ್ಯಮಂತ್ರಿಗಳಿಗೆ ಸಮಾಜ ಕಲ್ಯಾಣ ಇಲಾಖೆ ಸಚಿವರಿಗೆ ಮನವಿ ಪತ್ರವನ್ನು ಸಲ್ಲಿಸಿ ಒತ್ತಾಯಿಸಿದರು.
 ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದ ಪ್ರಜಾ ಪರಿವರ್ತನೆ ವೇದಿಕೆಯ ಜಿಲ್ಲಾಧ್ಯಕ್ಷ ಸಿ ಅನಂತಕುಮಾರ್ ಮಾತನಾಡಿ, ಅಲೆಮಾರಿಗಳನ್ನು ಬಂಜಾರ, ಬೋವಿ, ಕೊರಮ ಕೊರಚ ಸಮುದಾಯಗಳ ಜೊತೆಗೆ ಸೇರಿಸಿ ಶೇ 5% ರಷ್ಟು ಮೀಸಲಾತಿಯನ್ನು ನಿಗದಿ ಮಾಡಿರುವುದರಿಂದ ಅಲೆಮಾರಿ ಸಮುದಾಯಗಳು ಶಾಶ್ವತವಾಗಿ ಮೀಸಲಾತಿಯಿಂದ ವಂಚಿತವಾಗಲಿವೆ.
ಸಾವಿರಾರು ವರ್ಷಗಳಿಂದ ಅಸ್ಪೃಶ್ಯರಲ್ಲಿ ಅಸ್ಪೃಶ್ಯರಾಗಿಯೇ ಬದುಕಿ ಬಂದ ಈ ಅನಾಥ ಸಮುದಾಯಗಳಿಗೆಸ್ವಾತಂತ್ರ್ಯ ನಂತರ ಸಂವಿಧಾನಬದ್ದ ಸೌಲಭ್ಯಗಳು ಇನ್ನೂ ದೊರಕಿಲ್ಲ ‘ಸಾರ್ವಜನಿಕ ವಲಯದಲ್ಲಿ ಯಾವ
ಯಾವ ಸಮುದಾಯಗಳಿಗೆ ಅವಕಾಶಗಳು ಲಭ್ಯವಾಗಿಲ್ಲವೋ ಅಂತಹ ಸಮುದಾಯಗಳೀಗೆ ಸೂಕ್ತ ಪ್ರಾತಿನಿದ್ಯದೊರಕಿಸುವುದೇ ಮೀಸಲಾತಿಯ ಪ್ರಮುಖ ಉದ್ದೇಶವಾಗಿದೆ ಆದರೆ ಪರಿಶಿಷ್ಟ ಜಾತಿಯಲ್ಲಿನ ಬಲಾಡ್ಯ
ಸಮುದಾಯಗಳು ಮೀಸಲಾತಿಯಲ್ಲಿ ಹೆಚ್ಚಿನ ಪಾಲನ್ನು ಪಡೆಯುತ್ತಾ ಬಂದಿವೆ ಎಂದು ಒಳ ಮೀಸಲಾತಿ ತಾರತಮ್ಯವನ್ನು  ಖಂಡಿಸಿ  ಬೇಸರ ವ್ಯಕ್ತಪಡಿಸಿದರು.
 ಮುಖ್ಯಮಂತ್ರಿಗಳು ಕೂಡಲೇ ನ್ಯಾಯಮೂರ್ತಿ ಡಾ. ಹೆಚ್ ಎನ್ ನಾಗಮೋಹನ್ ದಾಸ್ ಏಕ ಸದಸ್ಯ ಆಯೋಗದ ಶಿಫಾರಸ್ಸಿನಂತೆ 59 ಸೂಕ್ಷ್ಮ ಮತ್ತು ಅಲೆಮಾರಿ ಪರಿಶಿಷ್ಟ ಜಾತಿಗಳನ್ನು ಪ್ರವರ್ಗ-ಎ ರಲ್ಲಿಯೇ ಇರಿಸಿ ಶೇಕಡ 1 ರಷ್ಟು ಒಳಮೀಸಲಾತಿನೀಡಿದರೂ ಸಾಮಾಜಿಕ ನ್ಯಾಯ ದೃಷ್ಟಿಯಿಂದ ಡಾ. ಬಿ ಆರ್ ಅಂಬೇಡ್ಕರ್ ಅವರ ಮತ್ತುದಾರ್ಶನಿಕರ ಆಶಯದಂತೆ ಕಟ್ಟಕಡೆಯವರಿಗೆ ಒಳ ಮೀಸಲಾತಿಯ ಸರದಿಯಲ್ಲಿ ಪ್ರಥಮ ಆದ್ಯತೆನೀಡದಂತಾಗುತ್ತದೆ. ದಯವಿಟ್ಟು 59 ಸೂಕ್ಷ್ಮ ಮತ್ತು ಅಲೆಮಾರಿ ಪರಿಶಿಷ್ಟ ಜಾತಿಗಳನ್ನು ಪ್ರವರ್ಗ-ಎ ರಲ್ಲಿಯೇಇರಿಸಿ ಶೇಕಡ 1 ರಷ್ಟು ಒಳ ಮೀಸಲಾತಿ ನಿಗದಿಗೊಳಿಸಬೇಕೆಂದು ಸರ್ಕಾರವನ್ನು ಅಗ್ರಹಿಸಿದರು.
 ಈ ಪ್ರತಿಭಟನೆಯಲ್ಲಿ ಕಂಡಪ್ಪ ಕಟ್ಟಿಮನಿ ದುಗ್ಲಪ್ಪ ಗಾಳೆಪ್ಪ ರಾಮಾಂಜನಿ ಸುಬ್ಬಯ್ಯ ಗಂಗಾಧರ ಮಹೇಶ್ ಶಂಕ್ರಪ್ಪ ರಂಗಯ್ಯ ಸೇರಿದಂತೆ ಅಲೆಮಾರಿ ಅಲೆಮಾರಿ ಸಮುದಾಯದ ನೂರಾರು ಜನ ಭಾಗವಹಿಸಿದ್ದರು.
WhatsApp Group Join Now
Telegram Group Join Now
Share This Article