ನೇಹಾ ಕೊಲೆಗಾರನಿಗೆ  ಗಲ್ಲು ಶಿಕ್ಷೆಯಾಗಲಿ: ವಿವಿಧ ಸಂಘಟನೆಗಳ ಬೃಹತ್ ಪ್ರತಿಭಟನೆ

Ravi Talawar
ನೇಹಾ ಕೊಲೆಗಾರನಿಗೆ  ಗಲ್ಲು ಶಿಕ್ಷೆಯಾಗಲಿ: ವಿವಿಧ ಸಂಘಟನೆಗಳ ಬೃಹತ್ ಪ್ರತಿಭಟನೆ
filter: 0; fileterIntensity: 0.0; filterMask: 0; captureOrientation: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 51;
WhatsApp Group Join Now
Telegram Group Join Now
ಅಥಣಿ ,24: ಹುಬ್ಬಳ್ಳಿಯ  ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ  ಖಂಡಿಸಿ ಇಲ್ಲಿನ  ನಾಗರಿಕ ಹಿತರಕ್ಷಣಾ ವೇದಿಕೆ, ತಾಲೂಕ ಜಂಗಮ ಸಮಾಜ, ವಿವಿಧ ಮಹಿಳಾ ಸಂಘಟನೆ, ಕನ್ನಡ ಪರ ಸಂಘಟನೆ ಮತ್ತು ಹಿಂದೂ ಪರಸಂಘಟನೆಗಳ  ಸಂಯುಕ್ತ ಆಶ್ರಯದಲ್ಲಿ  ಮಂಗಳವಾರ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸುವ ಮೂಲಕ  ತಹಶೀಲ್ದಾರ್ ಮೂಲಕ  ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಪಟ್ಟಣದ ಬುಧವಾರಪೇಟೆದಿಂದ ಆರಂಭವಾದ ಬೃಹತ್ ಪ್ರತಿಭಟನಾ ಮೆರವಣಿಗೆ ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ವೃತ್ತದಲ್ಲಿ  ಮಾನವ ಸರ್ಪಳಿ ನಿರ್ಮಿಸಿ  ಜೇವರ್ಗಿ-  ಸಂಕೇಶ್ವರ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.
ಈ ವೇಳೆ  ಶೆಟ್ಟರ ಮಠದ  ಮರುಳಸಿದ್ದ ಸ್ವಾಮೀಜಿ  ಮಾತನಾಡಿ ಹುಬ್ಬಳ್ಳಿ ಕಾಲೇಜ್ ವಿದ್ಯಾರ್ಥಿಯನ್ನು ಚಾಕುವಿನಿಂದ ಇರಿದು  ಕೊಲೆ ಮಾಡಿರುವುದು ಅತ್ಯಂತ ಪೈಶಾಚಿಕ ಕೃತ್ಯವಾಗಿದೆ. ಸ್ವಾತಂತ್ರ‍್ಯಕ್ಕಾಗಿ ಹೋರಾಡಿದ ದಿಟ್ಟ ಮಹಿಳೆಯರ ಈ ನಾಡಿನಲ್ಲಿ  ಇಂದು ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ. ಶಾಲಾ ಕಾಲೇಜಿನ ಮಕ್ಕಳು ಕೊಲಿಯಾಗುತ್ತಿರುವ ಘಟನೆ ಪಾಲಕರಲ್ಲಿ ಆತಂಕ ತರುತ್ತದೆ. ನೇಹಾಳನ್ನ ಕೊಚ್ಚಿ ಕೊಲೆ ಮಾಡಿದ ಕೊಲೆಗಡುಕನನ್ನು  ಸುಮ್ಮನೆ ಬಿಡಬಾರದು. ಕೊಲೆಯ ಆರೋಪಿ  ಫಯಾಜ್ ಎಂಬತನನ್ನು ಸಾರ್ವಜನಿಕವಾಗಿ ಕಠಿಣ ಶಿಕ್ಷೆ ವಿಧಿಸಬೇಕು. ರಾಜ್ಯದಲ್ಲಿ ಇಂತಹ ಘಟನೆಗಳು ಮೇಲಿಂದ ಮೇಲೆ ನಡೆಯುತ್ತಿರುವುದರಿಂದ  ರಾಜ್ಯ ಸರ್ಕಾರ ಕಠಿಣವಾದ ಕಾನೂನನ್ನ ರೂಪಿಸಬೇಕೆಂದು ಒತ್ತಾಯಿಸಿದರು.
ಯುವ ಮುಖಂಡ ಚಿದಾನಂದ ಸವದಿ ಮಾತನಾಡಿ  ವಿದ್ಯಾರ್ಥಿಯನ್ನು  ಕಾಲೇಜು ಆವರಣದಲ್ಲಿ ಹತ್ಯೆ ಮಾಡಿರುವ ಕೃತ್ಯ ರಾಜ್ಯದ ಜನತೆಯನ್ನ ಬೆಚ್ಚಿಬಿಳಿಸಿದೆ. ಫಯಾಜ್ ಎಂಬ ಯುವಕ  ನೇಹಾ ಎಂಬ ಯುವತಿಗೆ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿರುವುದು ಖಂಡನೀಯ. ನೇಹಾ ಸಾವಿಗೆ ನ್ಯಾಯ ಸಿಗಬೇಕು. ಈ ನಿಟ್ಟಿನಲ್ಲಿ ಈಗಾಗಲೇ ಮುಖ್ಯಮಂತ್ರಿಗಳು ಮತ್ತು ಗೃಹ ಸಚಿವರು  ಪ್ರಕರಣವನ್ನು ಸಿಐಡಿ ಗೆ ಒಪ್ಪಿಸಿದ್ದಾರೆ.
ವಿಶೇಷ ನ್ಯಾಯಾಲಯ ಸ್ಥಾಪಿಸಿ ಅಪರಾಧಿಗೆ ಕಠಿಣ ಶಿಕ್ಷೆ ನೀಡುವಲ್ಲಿ ಸರ್ಕಾರ ಮುಂದಾಗಿರುವದು ನಮ್ಮೆಲ್ಲರಿಗೆ ಸಮಾಧಾನ ತಂದಿದೆ. ಈ ಕೊಲೆ ಪ್ರಕರಣವನ್ನು ಯಾರು ರಾಜಕೀಯವಾಗಿ ಬಳಸಿಕೊಳ್ಳಬಾರದು. ಇಂದು ಅಥಣಿಯಲ್ಲಿ ನಡೆದ ಹೋರಾಟದಲ್ಲಿ  ಪಕ್ಷಾತೀತ ಮತ್ತು ಜಾತ್ಯಾತೀತವಾಗಿ ಎಲ್ಲ ಸಮುದಾಯದವರು  ಪಾಲ್ಗೊಳ್ಳುವ ಮೂಲಕ  ವಿದ್ಯಾರ್ಥಿನಿ ನೇಹಾ ಕುಟುಂಬಕ್ಕೆ ನ್ಯಾಯ ದೊರಕಬೇಕೆಂದು ಹೋರಾಟ  ಮಾಡಲಾಗುತ್ತಿದೆ. ಸರ್ಕಾರ ಕೂಡಲೇ  ತನಿಖೆಯನ್ನು ಚುರುಕು ಗೊಳಿಸಿ  ಕೊನೆ ಹಂತಕನಿಗೆ  ಕಠಿಣ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿದರು.
ನಂತರ ತಹಶೀಲ್ದಾರ್ ಕಾರ್ಯಾಲಯಕ್ಕೆ ತೆರಳಿ  ಉಪತಹಶೀಲ್ದಾರ  ಮಹದೇವ್ ಬಿರಾದಾರ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಮುಖಂಡರಾದ , ಪ್ರಕಾಶ ಮಹಾಜನ, ಕರವೇ ಅಧ್ಯಕ್ಷ  ಅಣ್ಣಾಸಾಬ ತೆಲಸಂಗ,  , ಯುವ ಮುಖಂಡ  ಶಿವಕುಮಾರ ಸವದಿ, ಸಿ.ಎ ಇಟ್ನಾಳಮಠ  ಮಾತನಾಡಿದರು.
ಶಿವಕುಮಾರ ತೆಲಸಂಗ, ಕಾಡಯ್ಯ ಹಿರೇಮಠ, ವಿಶ್ವನಾಥ ತೆಲಸಂಗ, ಶರಣಯ್ಯ ವಸ್ತ್ರದ, ಜಗದೀಶ ಹಿರೇಮಠ, ಈರಣ್ಣ ಜಗದಾಳ ಮಠ,ಎಂ. ಡಿ ತೊದಲಬಾಗಿ, ಕಲ್ಲಪ್ಪ ಒಣಜೋಳ, ಸಂಜೀವ ತೆಲಸಂಗ, ಸಂಪತಕುಮಾರ ಶೆಟ್ಟಿ, ಸಂತೋಷ ಸಾವಡಕರ, ದತ್ಜತಾ ವಾಸ್ಟರ,ಜಗನ್ನಾಥ ಬಾಮನೆ,  ಶಿವಪುತ್ರ ಯಾದವಾಡ, ಪ್ರಶಾಂತ ತೋಡಕರ, ಸಿದ್ದು ಮಾಳಿ,  ಪಿಂಟು ಹಿರೇಮಠ, ರೋಹಿಣಿ ಯಾದವಾಡ, ಗೀತಾ ತೋರಿ, ರಾಜು ವಾಘಮೋರೆ, ನಟರಾಜ ಹಿರೇಮಠ, ಮುತ್ತುರಾಜ್ ಸೇರಿದಂತೆ  ಅನೇಕ ಮುಖಂಡರು, ವಿವಿಧ ಸಂಘಟನೆಯ ಪದಾಧಿಕಾರಿಗಳು ಹೋರಾಟದಲ್ಲಿ ಪಾಲ್ಗೊಂಡಿದ್ದರು.
WhatsApp Group Join Now
Telegram Group Join Now
Share This Article