ಬೆಳಗಾವಿ: (ಡಿ 13), ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ರಾಜ್ಯ ಸರ್ಕಾರದ ರೈತ ವಿರೋಧಿ ನೀತಿಗಳನ್ನು ವಿರೋಧಿಸಿ ಭಾರತೀಯ ಜನತಾ ಪಕ್ಷದ ವತಿಯಿಂದ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಯಿತು.
ರೈತರ ಬೆಳೆಗಳಾದ ಮೆಕ್ಕೆಜೋಳಕ್ಕೆ ರೂ. 2,400/- ಗಳ ಬೆಂಬಲ ಬೆಲೆಯನ್ನು ನಿಗಧಿಪಡಿಸಿದ್ದು ರೈತರಿಂದ ಪ್ರತಿ ಎಕರೆಗೆ ಕನಿಷ್ಠ 15 ಕ್ವಿಂಟಾಲ್ ಮೆಕ್ಕೆ ಜೋಳ ಖರೀದಿ ಮಾಡಬೇಕು. ಅದೇ ರೀತಿ ತೊಗರಿ ಹಾಗೂ ಇನ್ನಿತರೆ ಬೆಳೆಗಳ ನಾಶಕ್ಕೆ ಪರಿಹಾರ ಮೊತ್ತವನ್ನು ತ್ವರಿತವಾಗಿ ರೈತರಿಗೆ ಸಂದಾಯ ಮಾಡಬೇಕು. ಬಳ್ಳಾರಿ ಜಿಲ್ಲೆಯ ರೈತರು ಅತಿ ಹೆಚ್ಚಾಗಿ ವಾಣಿಜ್ಯ ಬೆಳೆಯಾದ ಮೆಣಸಿನಕಾಯಿಯನ್ನು ಅವಲಂಬಿಸಿದ್ದು, ಅವರು ಬೆಳೆದ ಮೆಣಸಿನಕಾಯಿ ಮಾರಾಟ ಮಾಡಲು ಸೂಕ್ತ ಮಾರುಕಟ್ಟೆ ವ್ಯವಸ್ಥೆ ಇಲ್ಲದಿರುವುದರಿಂದ, ಜಿಲ್ಲೆಯ ರೈತರು 300 ಕಿ.ಮೀ. ದೂರದ ಬ್ಯಾಡಗಿ ಮಾರುಕಟ್ಟೆಗೆ ತೆರಳಿ ಬೆಳೆ ಮಾರಾಟ ಮಾಡುವಂತಾಗಿದ್ದು, ಇದರಿಂದ ರೈತರಿಗೆ ಹೆಚ್ಚಿನ ಸಾಗಣಿಕೆ ವೆಚ್ಚದ ಹೊರೆಯಾಗುತ್ತಿದ್ದು ಮತ್ತು ಅಪಘಾತಗಳು ಸಂಭವಿಸುತ್ತಿರುತ್ತವೆ. ಈ ಹಿಂದೆ ಬಿ.ಎಸ್. ಯಡಿಯೂರಪ್ಪ, ರವರ ನೇತೃತ್ವದ ಸರ್ಕಾರದಲ್ಲಿ ಬಳ್ಳಾರಿಯ ಅಲದಹಳ್ಳಿ ಗ್ರಾಮದಲ್ಲಿ 23 ಎಕರೆ ಜಮೀನನ್ನು ಮೆಣಸಿನಕಾಯಿ ಮಾರುಕಟ್ಟೆಗಾಗಿ ಮೀಸಲಿಡಲಾಗಿತ್ತು. ಆದರೆ ಇದು ಇಲ್ಲಿಯವರೆಗೆ ಅನುಷ್ಠಾನಕ್ಕೆ ಬಂದಿರುವುದಿಲ್ಲ. ಬಳ್ಳಾರಿ ಜಿಲ್ಲೆಯಲ್ಲಿ ಸರ್ಕಾರದ ವತಿಯಿಂದಲೇ ಶೀಘ್ರವಾಗಿ ಸೂಕ್ತ ಮೆಣಸಿನಕಾಯಿ ಮಾರುಕಟ್ಟೆಯನ್ನು ಪ್ರಾರಂಭಿಸಬೇಕು. ಬಳ್ಳಾರಿ ಜಿಲ್ಲೆಯ ರೈತರ ಎರಡನೇ ಭತ್ತದ ಬೆಳೆಗೆ ನೀರು ಹರಿಸಬೇಕು ಇಲ್ಲವಾದಲ್ಲಿ ಪ್ರತಿ ಎಕರೆ ರೂ. 25,000/- ಪರಿಹಾರವನ್ನು ನೀಡಬೇಕು. ಈಗ ಬೆಳೆದು ನಿಂತ ಬೆಳೆಗಳು ಅಕಾಲಿಕ ಮಳೆಯಿಂದ ಹಾನಿಗೀಡಾಗಿದ್ದು, ಬೆಳೆಯ ಉತ್ತಮ ಸ್ಥಿತಿಗಾಗಿ ಹಾಗೂ ಹೆಚ್ಚುನ ಇಳುವರಿಗಾಗಿ ಜನವರಿ 30 ರವರೆಗೆ ಹೆಚ್ಎಲ್ಸಿ ಕಾಲುವೆಗೆ ನೀರು ಹರಿಸಬೇಕು.
ಮೇಲಿನ ಎಲ್ಲಾ ಬೇಡಿಕೆಗಳ ರೈತರ ವಿರೋಧಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಬೆಳಗಾವಿ ವಿಧಾನಸೌಧ ಮುತ್ತಿಗೆ, ಜೈಲು ಬರೋ ಹೋರಾಟದಲ್ಲಿ ಭಾರತೀಯ ಜನತಾ ಪಕ್ಷದ ರಾಜ್ಯಧ್ಯಕ್ಷರಾದ ಬಿ.ವೈ. ವಿಜಯೇಂದ್ರ, ವಿರೋಧ ಪಕ್ಷದ ನಾಯಕರಾದ ಆರ್. ಅಶೋಕ್ ವಿಧಾನಪರಿಷತ್ ಸದಸ್ಯರಾದ ಚಲವಾದಿ ನಾರಾಯಣಸ್ವಾಮಿ ವಿಧಾನಪರಿಷತ್ ವಿರೋಧ ಪಕ್ಷ ನಾಯಕರಾದ ರವಿಕುಮಾರ್, ಪ್ರಧಾನ ಕಾರ್ಯದರ್ಶಿ ರಾಜೀವ್ ಜೀ, ರೈತ ಮೋರ್ಚಾ ರಾಜ್ಯಾಧ್ಯಕ್ಷರಾದ ಎ.ಎಸ್. ಪಟೇಲ್ ನಡಹಳ್ಳಿ, ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಡಾ. ನವೀನ್ ಹಾಗೂ ಕಲ್ಮಡಪ್ಪ, ಬಳ್ಳಾರಿಯಿಂದ ರೈತ ಮೋರ್ಚಾ ಅಧ್ಯಕ್ಷರಾದ ಗಣಪಾಲ ಐನಾಥರೆಡ್ಡಿ, ನೇತೃತ್ವದಲ್ಲಿ ಈ ಹೋರಾಟದಲ್ಲಿ ಭಾಗವಹಿಸಿದ ರೈತ ಮೋರ್ಚಾ ಉಪಾಧ್ಯಕ್ಷರಾದ ಎಂ. ಶಿವರುದ್ರಗೌಡ, ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ವಿ.ಎಸ್. ಶಂಕರ್, ಜಿಲ್ಲಾ ರೈತ ಮೋರ್ಚಾ ಅಂಬರೀಷ್ ಗೌಡ, ಗ್ರಾಮಾಂತರ ಎಸ್.ಟಿ. ಮೋರ್ಚಾ ಕಾರ್ಯದರ್ಶಿಯಾದ ಆದಪ್ಪ, ಇತರೆ ಎಲ್ಲಾ ಪದಾಧಿಕಾರಿಗಳು ಹಾಗೂ ರೈತರನ್ನು ರೈತರ ಪರ ಹೋರಾಟವನ್ನು ನಡೆಸುತ್ತಿರುವ ಮುಖಂಡರನ್ನು ಪೊಲೀಸರು ಬಂಧಿಸಿ ನಂತರ ಬಿಡುಗಡೆ ಮಾಡಿದರು.


