ಧಾರವಾಡ: (ಡಿ.11) ನಗರದ ಜೆಎಸ್ ಎಸ್ ಶ್ರೀ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆ, ರ್ಯಾಪಿಡ್ ಸಂಸ್ಥೆ ಮತ್ತು ಮೂರ್ತಿ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ಡಿ.14 ರಂದು ಜೆಎಸ್ ಎಸ್ ಆವರಣದಲ್ಲಿ ಮಹಿಳೆಯರಿಗಾಗಿ ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗಿದೆ ಎಂದು ಜೆ ಎಸ್ ಎಸ್ ಸಂಸ್ಥೆಯ ಕಾರ್ಯದರ್ಶಿ ಡಾ.ಅಜಿತ ಪ್ರಸಾದ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಧಾರವಾಡ ರ್ಯಾಪಿಡ್ ಸಂಸ್ಥೆಯಿಂದ ಮಹಿಳೆಯರಿಗಾಗಿ 5 ನೇ ಬಾರಿಗೆ ಮಹಿಳೆಯರ ಉದ್ಯೋಗ ಮೇಳವನ್ನು ಡಿಸೆಂಬರ್ 14 ರಂದು ಬೆಳ್ಳಿಗೆ 9: 30ಕ್ಕೆ ಧಾರವಾಡ ಜೆ.ಎಸ್.ಎಸ್ ಶ್ರೀ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆಯ ಕಟ್ಟಡದ ನಾಲ್ಕನೇ ಮಹಡಿಯಲ್ಲಿ ಆಯೋಜಿಸಾಲಾಗಿದೆ.
ಜೆ.ಎಸ್.ಎಸ್ ಸಂಸ್ಥೆಯ ಕಾರ್ಯದರ್ಶಿ ಡಾ. ಅಜಿತ್ ಪ್ರಸಾದ, ಐಟಿಐ ಕಾಲೇಜು ಪ್ರಾಚಾರ್ಯ ಮಹಾವೀರ ಉಪಾಧ್ಯಾಯ, ರ್ಯಾಪಿಡ್ ಸಂಸ್ಥೆ ಕಾರ್ಯದರ್ಶಿ ವಾಣಿಶ್ರೀ ಪುರೋಹಿತ, ರ್ಯಾಪಿಡ್ ಸಂಸ್ಥೆಯ ಸಿಇಓ ಮಾಳವಿಕಾ ಕಡಕೋಳ ಮೇಳದ ನೇತೃತ್ವ ವಹಿಸಲಿದ್ದಾರೆ. ಉದ್ಯೋಗ ಮೇಳದಲ್ಲಿ 18 ರಿಂದ 40 ವರ್ಷದ ಮಹಿಳೆಯರು ಭಾಗವಹಿಸಬಹುದು. ಎಸ್ ಎಸ್ ಎಲ್ ಸಿ, ಪಿಯುಸಿ ಸೇರಿದಂತೆ ಇನ್ನೂ ಕಡಿಮೆ ವಿದ್ಯಾರ್ಹತೆ ಪಡೆದವರಿಗೆ ಉದ್ಯೋಗ ಅವಕಾಶಗಳು ಲಭ್ಯವಿದೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ರಾಪಿಡ್ ಸಂಸ್ಥೆಯ ಮಾಳವಿಕಾ ಕಡಕೋಳ, ಐಟಿಐ ಪ್ರಾಚಾರ್ಯ ಮಹಾವೀರ ಉಪಾದ್ಯಾಯ, ಆಡಳಿತ ಅಧಿಕಾರಿ ಅರಿಹಂತ ಪ್ರಸಾದ,ವಾಣಿಶ್ರೀ ಪುರೋಹಿತ ಇದ್ದರು.


