ಬೆಳಗಾವಿ: ರೋಟರಿ ಕ್ಲಬ್ ಆಫ್ ಬೆಳಗಾವಿ ಮಿಡ್ಟೌನ್ ಮತ್ತು ಗೋಗಟೆ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಹಯೋಗದಲ್ಲಿ ನವೆಂಬರ್ 7 ರಂದು ಸ್ವಯಂ ಪ್ರೇರಿತ ಬೃಹತ್ ರಕ್ತದಾನ ಶಿಬಿರ ಆಯೋಜಜಿಸಲಾಗಿದೆ.
ನಗರದಲ್ಲಿರುವ ಜಿಐಟಿ ಕಾಲೇಜಿನ ಮುಖ್ಯ ಕಟ್ಟಡದ ತಳ ಮಹಡಿಯಲ್ಲಿ ಬೆಳಿಗ್ಗೆ 9.30ರಿಂದ ಮಧ್ಹಾಹ್ನ 1.30ರವರೆಗೆ ಶಿಬಿರ ಆಯೋಜಿಸಲಾಗಿದೆ. ರಕ್ತದಾನ ಮಾಡುವ ಅಭ್ಯರ್ಥಿಗಳು 18ರಿಂದ 60 ವಯಸ್ಸಿನ ಒಳಗಿನವರು ಆಗಿರಬೇಕು, ಕನಿಷ್ಟ 15 ಕೆಜಿ ತೂರ ಹೊಂದಿರಬೇಕು, 12.5ರಷ್ಟು ಹಿಮೋಗ್ಲೋಬಿನ್ ಕಡ್ಡಾಯವಾಗಿ ಇರಬೇಕು, ರಕ್ತದೊತ್ತಡ ಮತ್ತು ಮಧುಮೇಹ ಸಹಜಸ್ಥಿತಿಯಲ್ಲಿ ಇರಬೇಕು. ಆಸಕ್ತರು ಶಿಬಿರದಲ್ಲಿ ಪಾಲ್ಗೊಳ್ಳಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.


